ಭಗವದ್ಗೀತಾ ಅಭಿಯಾನ ಅಧ್ಯಾಯ  15
ಶ್ಲೋಕ  13
ಗಾಮಾವಿಶ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ |
ಪುಷ್ಣಾಮಿ ಚೌಷಧೀಃಸರ್ವಾಃ ಸೋಮೋ ಭೂತ್ವಾ ರಸಾತ್ಮಕಃ ||
ಮತ್ತು ನಾನೇ ಪೃಥಿವಿಯಲ್ಲಿ ಪ್ರವೇಶಿಸಿ ನನ್ನ ಶಕ್ತಿಯಿಂದ ಎಲ್ಲ ಪ್ರಾಣಿಗಳನ್ನು ಧರಿಸುತ್ತೇನೆ ಮತ್ತು ರಸರೂಪೀ ಅರ್ಥಾತ್ ಅಮೃತಮಯ ಚಂದ್ರನಾಗಿ ಸಂಪೂರ್ಣ ವನಸ್ಪತಿಗಳನ್ನು ಪೋಷಿಸುತ್ತೇನೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  15
ಶ್ಲೋಕ  12
ಯದಾದಿತ್ಯಗತಂ ತೇಜೋ ಜಗದ್ಭಾಸಮತೇಖಿಲಮ್ |
ಯಚ್ಚಂದ್ರಮಸಿ ಯಚ್ಚಾಗ್ನೌ ತತ್ತೇಜೋ ವಿದ್ಧಿ ಮಾಮಕಮ್ ||
ಸಂಪೂರ್ಣ ಜಗತ್ತನ್ನು ಪ್ರಕಾಶಗೊಳಿಸುವ ಸೂರ್ಯನ ತೇಜಸ್ಸು ಚಂದ್ರನಲ್ಲಿರುವ ತೇಜಸ್ಸು , ಅಗ್ನಿಯಲ್ಲಿರುವ ತೇಜಸ್ಸು ನನ್ನದೇ ತೇಜಸ್ಸು ಎಂದು ನೀನು ತಿಳಿ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  15
ಶ್ಲೋಕ  11
ಯತಂತೋ ಯೋಗಿನಶ್ಚೈನಂ ಪಶ್ಯಂತ್ಯಾತ್ಮನ್ಯವಸ್ಥಿತಮ್ |
ಯತಂತೋ$ಷ್ಯಕೃತಾತ್ಮಾನೋ ನೈನಂ ಪಶ್ಯಂತ್ಯಚೇತಸಃ ||
ಪ್ರಯತ್ನಶೀಲರಾದ ಯೋಗೀ ಜನರೇ ತಮ್ಮ ಹೃದಯದಲ್ಲಿ ಸ್ಥಿತನಾಗಿರುವ ಈ ಆತ್ಮನನ್ನು ತತ್ತ್ವದಿಂದ ಬಲ್ಲರು, ಆದರೆ ತಮ್ಮ ಅಂತಃಕರಣವನ್ನು ಶುದ್ಧಮಾಡಿಕೊಳ್ಳದ ಅಜ್ಞಾನೀ ಜನರು ಪ್ರಯತ್ನ ಮಾಡಿದರೂ ಈ ಆತ್ಮಸ್ವರೂಪವನ್ನು ತಿಳಿಯಲಾರರು.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  15
ಶ್ಲೋಕ  10
ಉತ್ಕ್ರಾಮಂತಂ ಸ್ಥಿತಂ ವಾಪಿ ಭುಂಜಾನಂ ವಾ ಗುಣಾನ್ವಿತಮ್ |
ವಿಮೂಢಾ ನಾನುಪಶ್ಯಂತಿ ಪಶ್ಯಂತಿ ಜ್ಞಾನಚಕ್ಷುಷಃ ||
ಶರೀರವನ್ನು ಬಿಟ್ಟು ಹೋಗುವಾಗ ಇಲ್ಲದೇ ಶರೀರದಲ್ಲಿ ಇರುವಾಗ ಅಥವಾ ವಿಷಯಗಳನ್ನು ಭೋಗಿಸುವಾಗ, ಇಲ್ಲದೇ ಮೂರು ಗುಣಗಳಿಂದ ಕೂಡಿರುವಾಗಲೂ (ಆ ಆತ್ಮಸ್ವರೂಪವನ್ನು)ಅಜ್ಞಾನಿಗಳು ತಿಳಿಯಲಾರರು. ಕೇವಲ ಜ್ಞಾನರೂಪೀ ದೃಷ್ಟಿಯುಳ್ಳ ವಿವೇಕೀ ಜ್ಞಾಮಿಗಳೇ ತತ್ತ್ವದಿಂದ ತಿಳಿಯುತ್ತಾರೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  15
ಶ್ಲೋಕ  9
ಶ್ರೋತ್ರಂ ಚಕ್ಷುಃ ಸ್ವರ್ಶನಂ ಚ ರಸನಂ ಘ್ರಾಣಮೇವ ಚ |
ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ ||
ಜೀವಾತ್ಮನು ಕಿವಿ, ಕಣ್ಣು, ಚರ್ಮ, ನಾಲಿಗೆ, ಮೂಗು ಮತ್ತು ಮನಸ್ಸು ಇವುಗಳನ್ನು ಆಶ್ರಯಿಸಿ ವಿಷಯಗಳನ್ನು ಅನುಭವಿಸುತ್ತಾನೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  15
ಶ್ಲೋಕ  8
ಶರೀರಂ ಯದಾವಾಪ್ನೋತಿ ಯಚ್ಚಾಪ್ಯುತ್ಕ್ರಾಮತೀಶ್ವರಃ |
ಗೃಹೀತ್ವೈತಾನಿ ಸಂಯಾತಿ ವಾಯುರ್ಗಂಧಾನಿವಾಶಯಾತ್ ||
ವಾಯುವು ಸುಗಂಧ ವಸ್ತುವಿನಿಂದ ಪರಿಮಳವನ್ನು ಗ್ರಹಣಮಾಡಿ ತೆಗೆದುಕೊಂಡು ಹೋಗುವಂತೆಯೇ ದೇಹಾದಿಗಳ ಸ್ವಾಮಿಯಾದ ಜೀವಾತ್ಮನು ತ್ಯಜಿಸಿದ ಶರೀರದಿಂದ ಮನಸಹಿತ ಇಂದ್ರಿಯಗಳನ್ನು ಗ್ರಹಣಮಾಡಿ ಹೊಸದಾಗಿ ಸಿಗುವ ಶರೀರವನ್ನು ಪ್ರವೇಶಿಸುವನು.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  15
ಶ್ಲೋಕ  7
ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ |
ಮನಃಷಷ್ಠಾನೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ ||
ಈ ದೇಹದಲ್ಲಿ ಇರುವ ಸನಾತನ ಜೀವಾತ್ಮನು ನನ್ನ ಅಂಶನೇ ಆಗಿದ್ದಾನೆ. ಮತ್ತು ಅವನೇ ಈ ಪ್ರಕೃತಿಯಲ್ಲಿ ಸ್ಥಿತನಾಗಿ ಮನಸ್ಸು ಹಾಗೂ ಐದು ಇಂದ್ರಿಯಗಳನ್ನು ಆಕರ್ಷಿಸುತ್ತಾನೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  15
ಶ್ಲೋಕ  6
ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ |
ಯದ್ಗತ್ವಾ ನ ನಿವರ್ತಂತೇ ತದ್ಧಾಮ ಪರಮಂ ಮಮ ||
ಆ ಸ್ವಯಂ ಪ್ರಕಾಶಮಯ ಪರಮ ಪದವನ್ನು ಸೂರ್ಯನಾಗಲೀ, ಚಂದ್ರನಾಗಲೀ ಮತ್ತು ಅಗ್ನಿಯಾಗಲೀ ಪ್ರಕಾಶಗೊಳಿಸಲಾರರು. ಅಂತಹ ಯಾವ ಧಾಮವನ್ನು ಪಡೆದುಕೊಂಡವನು ಹಿಂದಿರುಗಿ ಈ ಪ್ರಪಂಚಕ್ಕೆ ಬರುವುದಿಲ್ಲವೋ ಅರ್ಥಾತ್ ಪುನರ್ಜನ್ಮ ಪಡೆಯುವುದಿಲ್ಲವೋ ಅದೇ ನನ್ನ ಪರಮ ಧಾಮ ||6||
(ಸಂಗ್ರಹಃ ಶ್ರೀಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  15
ಶ್ಲೋಕ  5
ನಿರ್ಮಾನಮೋಹಾ ಜಿತಸಂಗದೋಷಾ ಅಧ್ಯಾತ್ಮನಿತ್ಯಾ ವಿನಿವೃತ್ತಕಾಮಾಃ |
ದ್ವಂದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೈರ್ಗಚ್ಛಂತ್ಯಮೂಢಾಃ ಪದಮವ್ಯಯಂ ತತ್ ||
ಮಾನ-ದೊಡ್ಡಸ್ತಿಕೆ ಮತ್ತು ಮೋಹ ನಾಶವಾಗಿರುವ, ಆಸಕ್ತಿರೂಪ ದೋಷವನ್ನು ಜಯಿಸಿದ, ಪರಮಾತ್ಮನ ಸ್ವರೂಪದಲ್ಲಿ ನಿತ್ಯಸ್ಥಿತಿಯಿರುವ ಹಾಗೆಯೇ ಕಾಮನೆಗಳು ಪೂರ್ಣವಾಗಿ ನಾಶವಾದ, ಸುಖ-ದುಃಖಗಳೆಂಬ ದ್ವಂದ್ವಗಳಿಂದ ವಿಮುಕ್ತರಾದ ಜ್ಞಾನೀಜನರು ಅವಿನಾಶೀ ಪರಮಪದವನ್ನು ಪಡೆಯುತ್ತಾರೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  15
ಶ್ಲೋಕ  4
ತತಃ ಪದಂ ತತ್ಪರಿಮಾರ್ಗಿತವ್ಯಂ
ಯಸ್ಮಿನ್ಗತಾ ನ ನಿವರ್ತಂತಿ ಭೂಯಃ |
ತಮೇವ ಚಾದ್ಯಂ ಪುರುಷಂ ಪ್ರಪದ್ಯೇ ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ ||
ಬಳಿಕ ಆ ಪರಮಪದರೂಪೀ ಪರಮೇಶ್ವರನನ್ನು ಚೆನ್ನಾಗಿ ಅರಸಬೇಕು. ಅಲ್ಲಿಗೆ ಹೋಗಿರುವ ಪುರುಷರು ಮತ್ತೆ ಸಂಸಾರಕ್ಕೆ ಬರುವುದಿಲ್ಲ ಹಾಗೂ ಯಾವ ಪರಮೇಶ್ವರನಿಂದ ಪುರಾತನ ಜಗದ್ರೂಪೀ ವೃಕ್ಷದ ಪರಂಪರೆ ವಿಸ್ತಾರಗೊಂಡಿದೆಯೋ ಆ ಆದಿಪುರುಷ ನಾರಾಯಣನಿಗೆ ನಾನು ಶರಣಾಗಿದ್ದೇನೆ ಎಂಬ ದೃಢ ನಿಶ್ಚಯದಿಂದ ಆ ಪರಮೇಶ್ವರನನ್ನು ಮನನ ಮತ್ತು ನಿದಿಧ್ಯಾಸನ ಮಾಡಬೇಕು.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  15
ಶ್ಲೋಕ  3
ನ ರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನ ಚಾದಿರ್ನ ಚ ಸಂಪ್ರತಿಷ್ಠಾ |
ಅಶ್ವತ್ಥಮೇನಂ ಸುವಿರೂಢಮೂಲ ಮಸಂಗಶಸ್ತ್ರೇಣ ದೃಢೇನ ಛಿತ್ತ್ವಾ ||
ಈ ಸಂಸಾರವೃಕ್ಷದ ಸ್ವರೂಪವು ಹೇಗೆ ಹೇಳಲಾಗಿದೆಯೋ ಹಾಗೆ ಇಲ್ಲಿ ವಿಚಾರಕಾಲದಲ್ಲಿ ಕಂಡುಬರುವುದಿಲ್ಲ. ಏಕೆಂದರೆ ಇದರ ಆದಿಯಾಗಲೀ, ಅಂತ್ಯವಾಗಲೀ ಇಲ್ಲ. ಹಾಗೆಯೇ ಅದರ ಉತ್ತಮ ರೀತಿಯ ಸ್ಥಿರತೆಯೂ ಇಲ್ಲ. ಅದಕ್ಕಾಗಿ ಈ ಅಹಂತೆ, ಮಮತೆ ಮತ್ತು ವಾಸನಾರೂಪೀ ಬಹಳ ಗಟ್ಟಿಯಾದ ಬೇರುಗಳುಳ್ಳ ಜಗತ್ ರೂಪೀ ಅಶ್ವತ್ಥವೃಕ್ಷವನ್ನು ದೃಢವಾದ ವೈರಾಗ್ಯರೂಪೀ ಶಸ್ತ್ರದಿಂದ ಕತ್ತರಿಸಿ ||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  15
ಶ್ಲೋಕ  2
ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ ಗುಣಪ್ರವೃದ್ಧಾ ವಿಷಯಪ್ರವಾಲಾಃ |
ಅಧಶ್ಚಮೂಲಾನ್ಯನುಸಂತತಾನಿ ಕರ್ಮಾನುಬಂಧೀನಿ ಮನುಷ್ಯಲೋಕೇ ||
ಆ ಜಗತ್ ವೃಕ್ಷಕ್ಕೆ -ತ್ರಿಗುಣರೂಪೀ ನೀರಿನಿಂದ ಬೆಳೆದಿರುವ ವಿಷಯ ಭೋಗರೂಪೀ ಚಿಗುರುಗಳುಳ್ಳ ದೇವ, ಮನುಷ್ಯ ಮತ್ತು ತಿರ್ಯಕ್ ಮೊದಲಾದ ಯೋನಿರೂಪವಾದ ರೆಂಬೆಗಳು ಕೆಳಗೆ, ಮೇಲೆ ಎಲ್ಲೆಲ್ಲಿಯೂ ಹರಡಿಕೊಂಡಿವೆ ಹಾಗೂ ಮನುಷ್ಯ ಜನ್ಮದಲ್ಲಿ ಕರ್ಮಗಳಿಗನುಸಾರ ಬಂಧಿಸುವಂತಹ ಅಹಂತೆ, ಮಮತೆ ಮತ್ತು ವಾಸನಾರೂಪೀ ಬೀಳಲುಗಳೂ ಮೇಲೆ, ಕೆಳಗೆ ಎಲ್ಲ ಲೋಕಗಳಲ್ಲಿ ಹರಡಿಕೊಂಡಿವೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  15
ಶ್ಲೋಕ  1
ಶ್ರೀ ಭಗವಾನುವಾಚ
ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಮ್ |
ವಂದಾಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ||
ಶ್ರೀ ಭಗವಂತನು ಹೇಳಿದನು-ಆದಿಪುರುಷ ಪರಮೇಶ್ವರನು ಬೇರು ಆಗಿರುವ, ಬ್ರಹ್ಮದೇವರೇ ಮುಖ್ಯಕಾಂಡವಾಗಿರುವ ಜಗದ್ರೂಪೀ ಅಶ್ವತ್ಥವೃಕ್ಷವನ್ನು ಅವಿನಾಶೀ ಎಂದು ಹೇಳುತ್ತಾರೆ. ಹಾಗೆಯೇ ವೇದಗಳು ಅದರ ಎಲೆಗಳೆಂದು ಹೇಳಲಾಗಿದೆ. ಆ ಜಗದ್ರೂಪೀ ಅಶ್ವತ್ಥವೃಕ್ಷವನ್ನು ಮೂಲಸಹಿತ ತತ್ತ್ವತಃ ತಿಳಿದವನು ವೇದಗಳ ತಾತ್ಪರ್ಯವನ್ನು ತಿಳಿದವನಾಗಿದ್ದಾನೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  27
ಬ್ರಹ್ಮಣೋ ಹಿ ಪ್ರತಿಷ್ಠಾಹಮಮೃತಸ್ಯಾವ್ಯಯಸ್ಯ ಚ |
ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈ ಕಾಂತಿಕಸ್ಯ ಚ ||
ಏಕೆಂದರೆ ಆ ಅವಿನಾಶೀ ಪರಬ್ರಹ್ಮನ, ಅಮೃತದ, ನಿತ್ಯವಾದ ಧರ್ಮದ ಮತ್ತು ಅಖಂಡ ಏಕರಸ ಆನಂದದ ಆಶ್ರಯವು ನಾನೇ ಆಗಿದ್ದೇನೆ. ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸುಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ ಗುಣತ್ರಯ ವಿಭಾಗಯೋಗೋ ನಾಮ ಚತುರ್ದಶೋಧ್ಯಾಯಃ ||14||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  26
ಮಾಂ ಚ ಯೋವ್ಯಭಿಚಾರೇಣ ಭಕ್ತಿಯೋಗೇನ ಸೇವತೇ |
ಸ ಗುಣಾನ್ಸಮತೀತ್ಯೈತಾನ್ ಬ್ರಹ್ಮಭೂಯಾಯ ಕಲ್ಪತೇ ||
ಅವ್ಯಭಿಚಾರೀ ಭಕ್ತಿಯೋಗದಿಂದ ನನ್ನನ್ನು ನಿರಂತರ ಭಜಿಸುವವನೂ ಕೂಡ ಈ ಮೂರು ಗುಣಗಳನ್ನು ಪೂರ್ಣವಾಗಿ ದಾಣಿ ಸಚ್ಚಿದಾನಂದಘನ ಬ್ರಹ್ಮನನ್ನು ಪಡೆಯಲು ಯೋಗ್ಯನಾಗುತ್ತಾನೆ.||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  25
ಮಾನಾಪಮಾನಯೋಸ್ತುಲ್ಯಸ್ತುಲ್ಯೋ ಮಿತ್ರಾರಿಪಕ್ಷಯೋಃ |
ಸರ್ವಾರಂಭಪರಿತ್ಯಾಗೀ ಗುಣಾತೀತಃ ಸ ಉಚ್ಯತೇ ||
ಮಾನ-ಅಪಮಾನ ಒಂದೇ ಎಂದು ತಿಳಿಯುವವನು, ಮಿತ್ರ ಮತ್ತು ಶತ್ರು ಇವರ ವಿಷಯದಲ್ಲಿ ಸಮನಾಗಿರುವವನು ಮತ್ತು ಸಮಸ್ತ ಕರ್ಮಗಳಲ್ಲಿ ಕರ್ತೃತ್ವದ ಅಭಿಮಾನರಹಿತನಾಗಿರುವ ಪುರುಷನನ್ನು ಗುಣಾತೀತನೆಂದು ಹೇಳುತ್ತಾರೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  24
ಸಮದುಃಖಸುಖಃ ಸ್ವಸ್ಥಃ ಸಮಲೋಷ್ಟಾಶ್ಮ ಕಾಂಚನಃ |
ತುಲ್ಯಪ್ರಿಯಾಪ್ರಿಯೋ ಧೀರಸ್ತುಲ್ಯನಿಂದಾತ್ಮಸಂಸ್ತುತಿಃ ||
ಸಮದುಃಖಸುಖಃ ಸ್ವಸ್ಥಃ ಸಮಲೋಷ್ಟಾಶ್ಮ ಕಾಂಚನಃ |
ತುಲ್ಯಪ್ರಿಯಾಪ್ರಿಯೋ ಧೀರಸ್ತುಲ್ಯನಿಂದಾತ್ಮಸಂಸ್ತುತಿಃ ||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  23
ಉದಾಸೀನವದಾಸೀನೋ ಗುಣೈರ್ಯೋ ನ ವಿಚಾಲ್ಯತೇ |
ಗುಣಾ ವರ್ತಂತ ಇತ್ಯೇವ ಯೋವತಿಷ್ಠತಿ ನೇಂಗತೇ ||
ಸಾಕ್ಷಿಯಂತೆ ಇದ್ದು ಗುಣಗಳ ಮೂಲಕ ವಿಚಲಿತಗೊಳಿಸಲಾಗುವುದಿಲ್ಲ ಮತ್ತು ಗುಣಗಳೇ ಗುಣಗಳಲ್ಲಿ ವರ್ತಿಸುತ್ತವೆ. ಎಂದು ತಿಳಿಯುತ್ತಾ, ಸಚ್ಚಿದಾನಂದಘನ ಪರಮಾತ್ಮನಲ್ಲಿ ಏಕೀಭಾವದಿಂದ ಇರುತ್ತಾ ಮತ್ತು ಆ ಸ್ಥಿತಿಯಿಂದ ಎಂದೂ ಕದಲಲಾರನು.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  22
ಶ್ರೀ ಭಗವಾನುವಾಚ
ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ |
ನ ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ ||
ಶ್ರೀ ಭಗವಂತನು ಹೇಳಿದನು -ಎಲೈ ಅರ್ಜುನ ! ಯಾವ ಪುರುಷನು ಸತ್ತ್ವ ಗುಣದ ಕಾರ್ಯರೂಪೀ ಪ್ರಕಾಶವನ್ನು, ರಜೋಗುಣದ ಕಾರ್ಯರೂಪೀ ಪ್ರವೃತ್ತಿಯನ್ನು ಮತ್ತು ತಮೋ ಗುಣದ‌ ಕಾರ್ಯರೂಪೀ ಮೋಹ ಇವುಗಳು ಪ್ರಾಪ್ತವಾದರೂ ಅವುಗಳನ್ನು ದ್ವೇಷಿಸುವುದಿಲ್ಲ ಹಾಗೂ ನಿವೃತ್ತನಾದ ಮೇಲೆ ಅವುಗಳನ್ನು ಬಯಸುವುದಿಲ್ಲ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  21
ಅರ್ಜುನ ಉವಾಚ
ಕೈರ್ಲಿಂಗೈಸ್ತ್ರೀನ್ ಗುಣಾನೇತಾನತೀತೋ ಭವತಿ ಪ್ರಭೋ |
ಕಿಮಾಚಾರಃ ಕಥಂ ಚೈತಾಂಸ್ತ್ರೀನ್ ಗುಣಾನತಿವರ್ತತೇ ||
ಅರ್ಜುನನು ಹೇಳಿದನು-ಈ ಮೂರು ಗುಣಗಳಿಂದಲೂ ಅತೀತನಾದ ಪುರುಷನು ಯಾವ-ಯಾವ ಲಕ್ಷಣಗಳಿಂದ ಕೂಡಿರುತ್ತಾನೆ? ಹಾಗೂ ಅವನ ಆಚರಣೆ ಹೇಗಿರುತ್ತದೆ?
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  20
ಗುಣಾನೇತಾನತೀತ್ಯ ತ್ರೀನ್ ದೇಹೀ ದೇಹಸಮುದ್ಭವಾನ್ |
ಜನ್ಮಮೃತ್ಯುಜರಾದುಃಖೈರ್ವಿಮುಕ್ತೋಮೃತಮಶ್ನುತೇ ||
ಈ ಪುರುಷನು ಶರೀರದ ಉತ್ಪತ್ತಿಗೆ ಕಾರಣವಾದ ಮೂರು ಗುಣಗಳನ್ನು ದಾಣಿ ಜನ್ಮ, ಮೃತ್ಯು, ವೃದ್ಧಾವಸ್ಥೆ ಮತ್ತು ಎಲ್ಲ ರೀತಿಯ ದುಃಖಗಳಿಂದ ಮುಕ್ತನಾಗಿ ಪರಮಾನಂದವನ್ನು ಪಡೆಯುತ್ತಾನೆ. ||20||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  19
ನಾನ್ಯಂ ಗುಣೇಭ್ಯಃ ಕರ್ತಾರಂ ಯದಾ ದೃಷ್ಟಾನುಪಶ್ಯತಿ |
ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋsಧಿಗಚ್ಛತಿ ||
ದೃಷ್ಟಾ ಅರ್ಥಾತ್ ಪ್ರೇಕ್ಷಕನು ಮೂರು ಗುಣಗಳ ಹೊರತು ಬೇರೆ ಯರನ್ನೂ ಕರ್ತೃವೆಂಬುದಾಗಿ ನೋಡುವುದಿಲ್ಲವೋ ಅಂದರೆ ಗುಣಗಳೇ ಗುಣಗಳಲ್ಲಿ ಪ್ರವರ್ತಿಸುತ್ತಿವೆ ಎಂದು ನೋಡುತ್ತಾನೆಯೋ ಮತ್ತು ಮೂರು ಗುಣಗಳಿಗಿಂತ ಪರಮ ಶ್ರೇಷ್ಠನಾದ ಸಚ್ಚಿದಾನಂದ ಘನ ಸ್ವರೂಪೀ ಪರಮೇಶ್ವರನಾದ ನನ್ನನ್ನು ಯಥಾರ್ಥವಾಗಿ ತಿಳಿದುಕೊಳ್ಳುತ್ತಾನೆಯೋ, ಆಗ ಅವನು ನನ್ನ ಸ್ವರೂಪವನ್ನು ಪಡೆಯುತ್ತಾನೆ ||19||
(ಸಂಗ್ರಹಃ ಶ್ರೀಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  18
ಊರ್ಧ್ವಂ ಗಚ್ಛಂತಿ ಸತ್ತ್ವಸ್ಥಾ ಮಧ್ಯೇ ತಿಷ್ಠಂತಿ ರಾಜಸಾಃ |
ಜಘನ್ಯಗುಣವೃತ್ತಿಸ್ಥಾ ಅಧೋ ಗಚ್ಛಂತಿ ತಾಮಸಾಃ ||
ಸತ್ತ್ವಗುಣವುಳ್ಳ ಸತ್ಪುರುಷರು ಸ್ವರ್ಗಾದಿ ಉಚ್ಚ ಲೋಕಗಳಿಗೆ ಹೋಗುತ್ತಾರೆ. ರಜೋಗುಣವುಳ್ಳ ರಾಜಸ ಪುರುಷರು ಮಧ್ಯದಲ್ಲಿ ಅರ್ಥಾತ್ ಮಾನವ ಲೋಕದಲ್ಲಿಯೇ ಇರುತ್ತಾರೆ. ತಮೋಗುಣದ ಕಾರ್ಯರೂಪೀ ನಿದ್ರೆ, ಪ್ರಮಾದ ಮತ್ತು ಆಲಸ್ಯಾದಿ ಗುಣಗಳುಳ್ಳ ತಾಮಸ ಪುರುಷರು ಅಧೋಗತಿ ಅರ್ಥಾತ್ ಕೀಟ, ಪಶುಗಳಾದಿ ನೀಚ ಯೋನಿ ಮತ್ತು ನರಕಕ್ಕೆ ಹೋಗುತ್ತಾರೆ ||18||
(ಸಂಗ್ರಹಃ ಶ್ರೀಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  17
ಸತ್ತ್ವಾತ್ಸಂಜಾಯತೇ ಜ್ಞಾನಂ ರಜಸೋ ಲೋಭ ಏವ ಚ |
ಪ್ರಮಾದ ಮೋಹೌ ತಮಸೋ ಭವತೋsಜ್ಞಾನಮೇವ ಚ ||
ಸತ್ತ್ವಗುಣದಿಂದ ಜ್ಞಾನ ಉಂಟಾಗುತ್ತದೆ ಮತ್ತು ರಜೋಗುಣದಿಂದ ನಿಸ್ಸಂದೇಹವಾಗಿ ಲೋಭವೂ, ತಮೋಗುಣದಿಂದ ಪ್ರಮಾದ ಮತ್ತು ಮೋಹಗಳೂ ಹಾಗೂ ಅಜ್ಞಾನವೂ ಸಹ ಉತ್ಪತ್ತಿಯಾಗುತ್ತದೆ ||17||
(ಸಂಗ್ರಹಃ ಶ್ರೀಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  16
ಕರ್ಮಣಃ ಸುಕೃತಸ್ಯಾಹುಃ ಸಾತ್ತ್ವಿಕಂ ನಿರ್ಮಲಂ ಫಲಮ್ |
ರಜಸಸ್ತು ಫಲಂ ದುಃಖಮ್ ಅಜ್ಞಾನಂ ತಮಸಃ ಫಲಮ್ ||
ಉತ್ತಮ ಕರ್ಮಕ್ಕಾದರೋ ಸಾತ್ತ್ವಿಕ ಅರ್ಥಾತ್ ಸುಖ, ಜ್ಞಾನ ಮತ್ತು ವೈರಾಗ್ಯಾದಿ ನಿರ್ಮಲವಾದ ಫಲವೆಂದೂ, ರಾಜಸ ಕರ್ಮದ ಫಲ ದುಃಖವೆಂದೂ ಮತ್ತು ತಾಮಸ ಕರ್ಮದ ಫಲ ಅಜ್ಞಾನವೆಂದೂ ಹೇಳಿದ್ದಾರೆ ||16||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  15
ರಜಸಿ ಪ್ರಲಯಂ ಗತ್ವಾ ಕರ್ಮಸಂಗಿಷು ಜಾಯತೇ|
ತಥಾ ಪ್ರಲೀನಸ್ತಮಸಿ ಮೂಢಯೋನಿಷು ಜಾಯತೇ ||
ರಜೋಗುಣದ ವೃದ್ಧಿಯ ಸಮಯದಲ್ಲಿ ಮೃತ್ಯುವನ್ನು ಹೊಂದಿದರೆ ಕರ್ಮಗಳಲ್ಲಿ ಆಸಕ್ತರಾದ ಮನುಷ್ಯರಲ್ಲಿ ಜನಿಸುತ್ತಾನೆ ಹಾಗೂ ತಮೋಗುಣದ ವೃದ್ಧಿ ಸಮಯದಲ್ಲಿ ಮರಣನಾದವನು ಕೀಟ - ಪಶುಗಳಾದಿ ಮೂಢ ಯೋನಿಗಳಲ್ಲಿ ಹುಟ್ಟುತ್ತಾನೆ ||15|| (ಸಂಗ್ರಹಃ ಶ್ರೀಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  14
ಯದಾ ಸತ್ತ್ವೇ ಪ್ರವೃದ್ಧೇ ತು ಪ್ರಲಯಂ ಯಾತಿ ದೇಹಭೃತ್ |
ತದೋತ್ತಮವಿದಾಂ ಲೋಕಾನ್ ಅಮಲಾನ್ಪ್ರತಿಪದ್ಯತೇ ||
ಈ ಜೀವನು ಸತ್ತ್ವಗುಣಗಳ ವೃದ್ಧಿಯಕಾಲದಲ್ಲಿ ಮರಣ ಹೊಂದಿದರೆ, ಆಗ ಉತ್ತಮ ಕರ್ಮಾಚರಣೆಯವರ ನಿರ್ಮಲ ಅರ್ಥಾತ್ ದಿವ್ಯ ಸ್ವರ್ಗಾದಿ ಲೋಕಗಳನ್ನು ಪಡೆಯುತ್ತಾನೆ. ||೧೪|| (ಸಂಗ್ರಹಃ ಶ್ರೀಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  13
ಅಪ್ರಕಾಶೋsಪ್ರವೃತ್ತಿಶ್ಚ ಪ್ರಮಾದೋ ಮೋಹ ಏವ ಚ |
ತಮಸ್ಯೇತಾನಿ ಜಾಯಂತೇ ವಿವೃದ್ಧೇ ಕುರುನಂದನ ||
ಎಲೈ ಅರ್ಜುನ! ತಮೋಗುಣ ವೃದ್ಧಿಯಾದಾಗ ಅಂತಃಕರಣ ಮತ್ತು ಇಂದ್ರಿಯಗಳಲ್ಲಿ ಅಂಧಕಾರ, ಕರ್ತವ್ಯ - ಕರ್ಮಗಳಲ್ಲಿ ಸೋಮಾರಿತನ ಮತ್ತು ಪ್ರಮಾದ ಅರ್ಥಾತ್ ವ್ಯರ್ಥಪ್ರಯತ್ನ ಹಾಗೂ ನಿದ್ರಾದಿ ಅಂತಃಕರಣದ ಮೋಹಿನೀ ಸ್ವಭಾವ ಇತ್ಯಾದಿಗಳೆಲ್ಲಾ ಉತ್ಪತ್ತಿಯಾಗುತ್ತವೆ ||೧೩||
(ಸಂಗ್ರಹಃ ಶ್ರೀಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  12
ಲೋಭಃ ಪ್ರವೃತ್ತಿರಾರಂಭಃ ಕರ್ಮಣಾಮಶಮಃ ಸ್ಪೃಹಾ |
ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ ||
ಎಲೈ ಅರ್ಜುನ! ರಜೋಗುಣ ವೃದ್ಧಿಯಾದಾಗ ಲೋಭ, ಪ್ರವೃತ್ತಿ ಅರ್ಥಾತ್ ಸಾಂಸಾರಿಕ ಪ್ರಯತ್ನಗಳು ಹಾಗೂ ಎಲ್ಲಾ ಬಗೆಯ ಕರ್ಮಗಳೂ ಸ್ವಾರ್ಥದಿಂದ ಪ್ರಾರಂಭ, ಅಶಾಂತಿ ಅರ್ಥಾತ್ ಮನಸ್ಸಿನ ಚಂಚಲತೆ ಮತ್ತು ವಿಷಯ - ಭೋಗಗಳ ದುರಾಸೆ ಇತ್ಯಾದಿಗಳೆಲ್ಲಾ ಉತ್ಪತ್ತಿಯಾಗುತ್ತವೆ ||೧೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  11
ಸರ್ವದ್ವಾರೇಷು ದೇಹೇsಸ್ಮಿನ್ ಪ್ರಕಾಶ ಉಪಜಾಯತೇ |
ಜ್ಞಾನಂ ಯದಾ ತದಾ ವಿದ್ಯಾತ್ ವಿವೃದ್ಧಂ ಸತ್ತ್ವಮಿತ್ಯುತ ||
ಈ ಶರೀರದಲ್ಲಿ, ಅಂತಃಕರಣ ಮತ್ತು ಇಂದ್ರಿಯಗಳಲ್ಲಿ ಚೈತನ್ಯ ಮತ್ತು ವಿವೇಕ ಉತ್ಪನ್ನವಾದಾಗ ಸತ್ತ್ವಗುಣ ವೃದ್ಧಿಯಾಗಿದೆ ಎಂದು ತಿಳಿಯಬೇಕು ||೧೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  10
ರಜಸ್ತಮಶ್ಚಾಭಿಭೂಯ ಸತ್ತ್ವಂ ಭವತಿ ಭಾರತ |
ರಜಃ ಸತ್ತ್ವಂ ತಮಶ್ಚೈವ ತಮಃ ಸತ್ತ್ವಂ ರಜಸ್ತಥಾ ||
ಮತ್ತು, ಎಲೈ ಅರ್ಜುನ! ರಜೋಗುಣವನ್ನು ಮತ್ತು ತಮೋಗುಣವನ್ನು ಬದಿಗೊತ್ತಿ ಸತ್ತ್ವಗುಣವೂ ಹಾಗೂ ಸತ್ತ್ವಗುಣವನ್ನು ಮತ್ತು ತಮೋಗುಣವನ್ನು ಬದಿಗೊತ್ತಿ ರಜೋಗುಣವೂ ಅದರಂತೆಯೇ ಸತ್ತ್ವಗುಣವನ್ನು ಮತ್ತು ರಜೋಗುಣವನ್ನು ಬದಿಗೊತ್ತಿ ತಮೋಗುಣವೂ ಉಂಟಾಗುತ್ತದೆ ಅರ್ಥಾತ್ ಪ್ರಬಲವಾಗುತ್ತದೆ ||೧೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  9
ಸತ್ತ್ವಂ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ |
ಜ್ಞಾನಮಾವೃತ್ಯ ತು ತಮಃ ಪ್ರಮಾದೇ ಸಂಜಯತ್ಯುತ ||
ಎಲೈ ಅರ್ಜುನ! ಸತ್ತ್ವಗುಣವು ಸುಖದಲ್ಲಿಯೂ, ರಜೋಗುಣವು ಕರ್ಮದಲ್ಲಿಯೂ ಪ್ರೇರಣೆಯುಂಟುಮಾಡುತ್ತವೆ. ಆದರೆ ತಮೋಗುಣವು ಜ್ಞಾನವನ್ನು ಆವರಿಸಿಕೊಂಡು ಪ್ರಮಾದದಲ್ಲಿ ಸಹ ಅರ್ಥಾತ್ ವ್ಯರ್ಥ ಪ್ರಯತ್ನಗಳಲ್ಲಿ ಪ್ರೇರಣೆಯುಂಟುಮಾಡುತ್ತದೆ ||೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  8
ತಮಸ್ತ್ವಜ್ಞಾನಜಂ ವಿದ್ಧಿ ಮೋಹನಂ ಸರ್ವದೇಹಿನಾಮ್|
ಪ್ರಮಾದಾಲಸ್ಯನಿದ್ರಾಭಿಃ ತನ್ನಿಬಧ್ನಾತಿ ಭಾರತ ||
ಎಲೈ ಅರ್ಜುನ! ದೇಹಾಭಿಮಾನಿಗಳನ್ನೆಲ್ಲಾ ಮೋಹಗೊಳಿಸುವ ತಮೋ ಗುಣವು ಅಜ್ಞಾನದಿಂದ ಉತ್ಪತ್ತಿಯಾಗುವುದೆಂದು ತಿಳಿ. ಅದು ಜೀವಾತ್ಮನನ್ನು ಪ್ರಮಾದ, ಆಲಸ್ಯ ಮತ್ತು ನಿದ್ರೆಗಳ ಮೂಲಕ ಬಂಧಿಸುತ್ತದೆ ||೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  7
ರಜೋ ರಾಗಾತ್ಮಕಂ ವಿದ್ಧಿ ತೃಷ್ಣಾಸಂಗಸಮುದ್ಭವಮ್|
ತನ್ನಿಬಧ್ನಾತಿ ಕೌಂತೇಯ ಕರ್ಮಸಂಗೇನ ದೇಹಿನಮ್||
ಹೇ ಅರ್ಜುನ! ರಾಗರೂಪೀ ರಜೋಗುಣವು ಕಾಮನೆ ಮತ್ತು ಆಸಕ್ತಿಯಿಂದ ಉತ್ಪನ್ನವಾದುದೆಂದು ತಿಳಿ. ಅದು ಈ ಜೀವಾತ್ಮನನ್ನು ಕರ್ಮಗಳ ಮತ್ತು ಅವುಗಳ ಫಲದ ಸಂಬಂಧದಿಂದ ಬಂಧಿಸುತ್ತದೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  6
ತತ್ರ ಸತ್ತ್ವಂ ನಿರ್ಮಲತ್ವಾತ್ ಪ್ರಕಾಶಕಮನಾಮಯಮ್ |
ಸುಖಸಂಗೇನ ಬಧ್ನಾತಿ ಜ್ಞಾನಸಂಗೇನ ಚಾನಘ ||
ಎಲೈ ಪಾಪರಹಿತನೇ! ಆ ಮೂರು ಗುಣಗಳಲ್ಲಿ ಸತ್ತ್ವಗುಣವು ನಿರ್ಮಲವಾದ ಕಾರಣ ಪ್ರಕಾಶಪಡಿಸಬಲ್ಲ ನಿರ್ವಿಕಾರೀ ಸುಖದ ಆಸಕ್ತಿಯಿಂದ ಅರ್ಥಾತ್ ಜ್ಞಾನದ ಅಭಿಮಾನದಿಂದ ಆತ್ಮನನ್ನು ಬಂಧಿಸುತ್ತದೆ ||೬||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  5
ಸತ್ತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿಸಂಭವಾಃ |
ನಿಬಧ್ನಂತಿ ಮಹಾಬಾಹೋ ದೇಹೇ ದೇಹಿನಮವ್ಯಯಮ್ ||
ಎಲೈ ಅರ್ಜುನ! ಸತ್ತ್ವಗುಣ, ರಜೋಗುಣ ಮತ್ತು ತಮೋಗುಣ ಎಂಬ ಪ್ರಕೃತಿಯಿಂದ ಉತ್ಪನ್ನವಾದ ಮೂರು ಗುಣಗಳೂ ಅವಿನಾಶಿಯಾದ ಜೀವಾತ್ಮನನ್ನು ಶರೀರದಲ್ಲಿ ಬಂಧಿಸುತ್ತವೆ ||೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  4
ಸರ್ವಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ |
ತಾಸಾಂ ಬ್ರಹ್ಮ ಮಹದ್ಯೋನಿರ್ ಅಹಂ ಬೀಜಪ್ರದಃ ಪಿತಾ ||
ಎಲೈ ಅರ್ಜುನ! ನಾನಾ ಪ್ರಕಾರದ ಯೋನಿಗಳಲ್ಲೆಲ್ಲಾ ಎಷ್ಟು ಶರೀರಗಳು ಉತ್ಪತ್ತಿಯಾಗುತ್ತವೆಯೋ ಅವುಗಳಿಗೆ ತ್ರಿಗುಣಮಯೀ ಮಾಯೆಯು ಗರ್ಭ ಧರಿಸುವ ತಾಯಿ. ನಾನು ಬೀಜವನ್ನು ಸ್ಥಾಪಿಸುವ ತಂದೆ ||೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  3
ಮಮ ಯೋನಿರ್ಮಹದ್ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಹಮ್ |
ಸಂಭವಃ ಸರ್ವಭೂತಾನಾಂ ತತೋ ಭವತಿ ಭಾರತ ||
ಎಲೈ ಭಾರತ! (ಅರ್ಜುನ) ನನ್ನ ಮಹತ್ ಬ್ರಹ್ಮರೂಪೀ ಪ್ರಕೃತಿ ಅರ್ಥಾತ್ ತ್ರಿಗುಣಮಯೀ ಮಾಯೆಯು ಎಲ್ಲಾ ಜೀವಿಗಳ ಯೋನಿ ಅರ್ಥಾತ್ ಗರ್ಭಾದಾನದ ಸ್ಥಾನವಾಗಿದೆ. ನಾನು ಆ ಯೋನಿಯಲ್ಲಿ ಚೇತನರೂಪೀ ಬೀಜವನ್ನು ಸ್ಥಾಪಿಸುತ್ತೇನೆ. ಆ ಜಡ - ಚೇತನಗಳ ಸಂಯೋಗದಿಂದ ಎಲ್ಲಾ ಜೀವಿಗಳ ಉತ್ಪತ್ತಿಯಾಗುತ್ತದೆ ||೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  2
ಇದಂ ಜ್ಞಾನಮುಪಾಶ್ರಿತ್ಯ ಮಮ ಸಾಧರ್ಮ್ಯಮಾಗತಾಃ |
ಸರ್ಗೇsಪಿ ನೋಪಜಾಯಂತೇ ಪ್ರಲಯೇ ನ ವ್ಯಥಂತಿ ಚ ||
ಈ ಜ್ಞಾನವನ್ನು ಆಶ್ರಯಿಸಿ ಅರ್ಥಾತ್ ಅವಲಂಬಿಸಿ ನನ್ನ ಸ್ವರೂಪವನ್ನು ಪಡೆದುಕೊಂಡವರು ಸೃಷ್ಟಿಯ ಆದಿಯಲ್ಲಿ ಪುನಃ ಹುಟ್ಟುವುದಿಲ್ಲ ಮತ್ತು ಪ್ರಳಯಕಾಲದಲ್ಲಿಯೂ ಸಹ ವ್ಯಥೆಪಡುವುದಿಲ್ಲ ಏಕೆಂದರೆ, ವಾಸುದೇವನಾದ ನನಗಿಂತ ಬೇರೆಯಾದ ಯಾವ ವಸ್ತುವೂ ಅವರ ದೃಷ್ಟಿಯಲ್ಲಿ ಇಲ್ಲವೇ ಇಲ್ಲ ||೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  14
ಶ್ಲೋಕ  1
ಅಥ ಚತುರ್ದಶೋsಧ್ಯಾಯ ಗುಣತ್ರಯವಿಭಾಗಯೋಗಃ ಶ್ರೀ ಭಗವಾನುವಾಚ
ಪರಂ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್ |
ಯಜ್ಜ್ಞಾತ್ವಾಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ ||
ಶ್ರೀ ಕೃಷ್ಣ ಹೇಳಿದನು - ಜ್ಞಾನಗಳಲ್ಲಿ ಅತ್ಯುತ್ತಮವಾದ ಪರಮ ಜ್ಞಾನವನ್ನು ನಾನು ನಿನಗೆ ಪುನಃ ಹೇಳುವೆನು. ಅದನ್ನು ತಿಳಿದು ಎಲ್ಲ ಮುನಿಜನರು ಈ ಜಗತ್ತಿನಿಂದ ಮುಕ್ತರಾಗಿ ಪರಮ ಸಿದ್ಧಿಯನ್ನು ಪಡೆದಿದ್ದಾರೆ ||೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  34
ಕ್ಷೇತ್ರ ಕ್ಷೇತ್ರಜ್ಞಯೋರೇವಮ್ ಅಂತರಂ ಜ್ಞಾನ ಚಕ್ಷುಷಾ |
ಭೂತಪ್ರಕೃತಿಮೋಕ್ಷಂ ಚ ಯೇ ವಿದುರ್ಯಾಂತಿ ತೇ ಪರಮ್ ||
ಈ ಪ್ರಕಾರ ಕ್ಷೇತ್ರ ಮತ್ತು ಕ್ಷೇತ್ರಜ್ಞರ ಭೇದವನ್ನು ಹಾಗೆಯೇ ಕಾರ್ಯಸಹಿತ ಪ್ರಕೃತಿಯಿಂದ ಮುಕ್ತನಾಗುವ ಮಾರ್ಗವನ್ನು ಜ್ಞಾನದೃಷ್ಠಿಯಿಂದ ತತ್ತವಶಃ ತಿಳಿದ ಮಹಾತ್ಮರು ಪರಬ್ರಹ್ಮ ಪರಮಾತ್ಮನನ್ನು ಹೊಂದುತ್ತಾರೆ
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  33
ಯಥಾ ಪ್ರಕಾಶಯತ್ಯೇಕಃ ಕೃತ್ಸಂ ಲೋಕಮಿಮಂ ರವಿಃ |
ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ ||
ಎಲೈ ಅರ್ಜುನ! ಯಾವ ರೀತಿ ಒಬ್ಬನೇ ಆದ ಸೂರ್ಯನು ಈ ಇಡೀ ಬ್ರಹ್ಮಾಂಡವನ್ನು ಪ್ರಕಾಶಗೊಳಿಸುತ್ತಾನೆಯೋ ಅದೇ ಪ್ರಕಾರ ಒಂದೇ ಆತ್ಮ (ಕ್ಷೇತ್ರಜ್ಞನು) ಸಮಸ್ತ ಕ್ಷೇತ್ರ (ಶರೀರ) ಗಳನ್ನು ಪ್ರಕಾಶಗೊಳಿಸುತ್ತಾನೆ ಅರ್ಥಾತ್ ನಿತ್ಯಭೋಧ ಸ್ವರೂಪಿ ಒಬ್ಬನೇ ಆತ್ಮನ ಅಸ್ತಿತ್ವದಿಂದ ಸಂಪೂರ್ಣ ಜಡವರ್ಗವೆಲ್ಲಾ ಪ್ರಕಾಶಗೊಳ್ಳುತ್ತದೆ ||೩೩||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  32
ಯಥಾ ಸರ್ವಗತಂ ಸೌಕ್ಷ್ಯಾತ್ ಆಕಾಶಂ ನೋಪಲಿಪ್ಯತೇ |
ಸರ್ವತ್ರಾವಸ್ಥಿತೋ ದೇಹೇ ತಥಾತ್ಮಾ ನೋಪಲಿಪ್ಯತೇ ||
ಯಾವ ರೀತಿ ಎಲ್ಲೆಲ್ಲಿಯೂ ವ್ಯಾಪಿಸಿದ್ದರೂ ಸಹ ಆಕಾಶವು ಸೂಕ್ಷ್ಮವಾಗಿರುವ ಕಾರಣ ಲಿಪ್ತವಾಗುದಿಲ್ಲವೋ ಹಾಗೆಯೇ ಎಲ್ಲರ ಶರೀರಗಳಲ್ಲಿ ಇರುತ್ತಿದ್ದರೂ ಸಹ ಆತ್ಮನು ಗುಣಾತೀತನಾದ ಕಾರಣ ದೇಹದ ಗುಣಗಳಲ್ಲಿ ಲಿಪ್ತನಾಗುವುದಿಲ್ಲ
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  31
ಅನಾದಿತ್ವಾನ್ನಿರ್ಗುಣತ್ವಾತ್ ಪರಮಾತ್ಮಾಯಮವ್ಯಯಃ |
ಶರೀರಸ್ಥೋsಪಿ ಕೌಂತೇಯ ನ ಕರೋತಿ ನ ಲಿಪ್ಯತೇ ||
ಎಲೈ ಅರ್ಜುನ! ಅನಾದಿಯಾಗಿರುವುದರಿಂದಲೂ, ಗುಣಾತೀತನಾಗಿರುವುದರಿಂದಲೂ ಈ ಅವಿನಾಶೀ ಪರಮಾತ್ಮನು ಶರೀರದಲ್ಲಿದ್ದರೂ ಸಹ ವಾಸ್ತವವಾಗಿ ಯಾವ ಕರ್ಮವನ್ನೂ ಮಾಡುವುದಿಲ್ಲ ಹಾಗೂ ಲಿಪ್ತನಾಗುವುದೂ ಇಲ್ಲ||೩೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  30
ಯದಾ ಭೂತಪೃಥಗ್ಭಾವಮ್ ಏಕಸ್ಥಮನುಪಶ್ಯತಿ |
ತತ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ ||
ಜೀವಿಗಳ ಬೇರೆ ಬೇರೆ ಭಾವಗಳು ಏಕಮೇವ ಪರಮಾತ್ಮನ ಸಂಕಲ್ಪಗಳ ಆಧಾರದಲ್ಲಿರುವುದೆಂದು ಮತ್ತು ಪರಮಾತ್ಮನ ಸಂಕಲ್ಲದಿಂದಲೇ ಸಮಸ್ತ ಜೀವಿಗಳ ವಿಕಾಸವಾಗುವುದೆಂದು ಯಾವಾಗ ತಿಳಿದುಕೊಳ್ಳುವನೋ ಆಗ ಸಚ್ಚಿದಾನಂದ ಘನ ಬ್ರಹ್ಮವನ್ನು ಪಡೆಯುತ್ತಾನೆ ||೩೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  29
ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ |
ಯಃ ಪಶ್ಯತಿ ತಥಾತ್ಮಾನಮ್ ಅಕರ್ತಾರಂ ಸ ಪಶ್ಯತಿ ||
ಮತ್ತು ಯಾರು ಕರ್ಮಗಳೆಲ್ಲಾ ಎಲ್ಲಾ ಪ್ರಕಾರದಿಂದಲೂ ಪ್ರಕೃತಿಯಿಂದಲೇ ಮಾಡಲ್ಪಡುತ್ತವೆ ಹಾಗೂ ಆತ್ಮನನ್ನು ಅರ್ಥಾತ್ ತನ್ನನ್ನು ಕರ್ತೃವಲ್ಲವೆಂದು ತಿಳಿದುಕೊಳ್ಳುತ್ತಾನೆಯೋ ಅವನೇ ಯಥಾರ್ಥವಾಗಿ ತಿಳಿದುಕೊಂಡವನು ||೨೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  28
ಸಮಂ ಪಶ್ಯನ್ ಹಿ ಸರ್ವತ್ರ ಸಮವಸ್ಥಿತಮೀಶ್ವರಮ್ |
ನ ಹಿನಸ್ತ್ಯಾತ್ಮನಾತ್ಮಾನಂ ತತೋ ಯಾತಿ ಪರಾಂ ಗತಿಮ್ ||
ಏಕೆಂದರೆ, ಎಲ್ಲಾ ಕಡೆಗಳಲ್ಲಿಯೂ ಸಮಭಾವದಿಂದಿರುವ ಪರಮೇಶ್ವರನನ್ನು ಸಮಾನವಾಗಿ ನೋಡುತ್ತಾ ಅದರಿಂದ ಪರಮ ಗತಿಯನ್ನು ಪಡೆಯುತ್ತಾನೆ, ಆದರೆ ತನ್ನಿಂದಲೇ ತಾನು ಹಾಳುಮಾಡಿಕೊಳ್ಳುವುದಿಲ್ಲ ||೨೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  27
ಸಮಂ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಮ್ |
ವಿನಶ್ಯತ್ಸ್ವವಿನಶ್ಯಂತಂ ಯಃ ಪಶ್ಯತಿ ಸ ಪಶ್ಯತಿ ||
(ಹೀಗೆ ತಿಳಿದುಕೊಂಡು) ಯಾರು ನಾಶಯುತವಾದ ಎಲ್ಲಾ ಚರಾಚರ ಪ್ರಾಣಿ ವಸ್ತುಗಳಲ್ಲಿಯೂ ನಾಶರಹಿತವಾದ ಪರಮೇಶ್ವರನನ್ನು ಸಮಭಾವದಿಂದ ಇರುವಂತೆ ನೋಡುತ್ತಾನೆಯೋ ಅವನೇ ಯಥಾರ್ಥವಾಗಿ ತಿಳಿದು ನೋಡುತ್ತಾನೆ
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  26
ಯಾವತ್ಸಂಜಾಯತೇ ಕಿಂಚಿತ್ ಸತ್ತ್ವಂ ಸ್ಥಾವರ ಜಂಗಮಮ್ |
ಕ್ಷೇತ್ರ ಕ್ಷೇತ್ರಜ್ಞಸಂಯೋಗಾತ್ ತದ್ವಿದ್ಧಿ ಭರತರ್ಷಭ ||
ಎಲೈ ಅರ್ಜುನ! ಒಟ್ಟಾರೆ ಎಷ್ಟೊಂದು ಯಾವ - ಯಾವ ಅಚರ ಮತ್ತು ಚರ ವಸ್ತುಗಳು ಉತ್ಪತ್ತಿಯಾಗುತ್ತವೆಯೋ ಆ ಸಮಸ್ತವನ್ನೂ ಕ್ಷೇತ್ರ ಮತ್ತು ಕ್ಷೇತ್ರಜ್ಞಗಳ ಸಂಯೋಗದಿಂದ ಉತ್ಪತ್ತಿಯಾದವುಗಳೆಂದು ತಿಳಿ ||೨೬||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  25
ಅನ್ಯೇ ತ್ವೇವಮಜಾನಂತಃ ಶ್ರುತ್ವಾನ್ಯೇಭ್ಯ ಉಪಾಸತೇ |
ತೇsಪಿ ಚಾತಿರಂತ್ಯೇವ ಮೃತ್ಯುಂ ಶ್ರುತಿಪರಾಯಣಾಃ ||
ಆದರೆ ಇವರಿಗಿಂತ ಬೇರೆಯವರು ಅರ್ಥಾತ್ ಮಂದಬುದ್ಧಿಯುಳ್ಳವರು ಈ ರೀತಿ ತಿಳಿದುಕೊಳ್ಳದೆ ಇತರರಿಂದ ಅರ್ಥಾತ್ ತತ್ತ್ವಾರ್ಥವನ್ನು ತಿಳಿದವರಿಂದ ಕೇಳಿ ಅರಿತುಕೊಂಡು ಉಪಾಸನೆ ಮಾಡುತ್ತಾರೆ ಮತ್ತು ಆ ಶ್ರವಣ - ಪರಾಯಣರೂ ಸಹ ಮೃತ್ಯುರೂಪೀ ಸಂಸಾರ ಸಾಗರವನ್ನು ಸಂದೇಹವಿಲ್ಲದೆ ದಾಟಿ ಹೋಗುತ್ತಾರೆ ||೨೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  24
ಧ್ಯಾನೇನಾತ್ಮನಿ ಪಶ್ಯಂತಿ ಕೇಚಿದಾತ್ಮಾನಮಾತ್ಮನಾ |
ಅನ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಚಾಪರೇ ||
ಅದೆಷ್ಟೋ ಜನರು ಶುದ್ಧವಾದ ಸೂಕ್ಷ್ಮ ಬುದ್ಧಿಯಿಂದ ಧ್ಯಾನದ ಮೂಲಕ ಮನಸ್ಸಿನಲ್ಲಿಯೂ, ಬೇರೆ ಎಷ್ಟೋ ಜನರು ಜ್ಞಾನಯೋಗದ ಮೂಲಕವೂ ಮತ್ತು ಇನ್ನೆಷ್ಟೋ ಮಂದಿ ನಿಷ್ಕಾಮ ಕರ್ಮಯೋಗದ ಮೂಲಕವೂ ಆ ಪರಮ ಪುರುಷ ಪರಮಾತ್ಮನನ್ನು ನೋಡುತ್ತಾರೆ ||೨೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  23
ಯ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣೈಃ ಸಹ |
ಸರ್ವಥಾ ವರ್ತಮಾನೋsಪಿ ನ ಸ ಭೂಯೋsಭಿಜಾಯತೇ||
ಹೀಗೆ ಪುರುಷನನ್ನು ಮತ್ತು ಗುಣಗಳ ಸಹಿತ ಪ್ರಕೃತಿಯನ್ನು ಯಾರು ಯಥಾರ್ಥವಾಗಿ ತಿಳಿದುಕೊಳ್ಳುತ್ತಾನೆಯೋ, ಅವನು ಎಲ್ಲಾ ರೀತಿಯಿಂದ ನಡೆದುಕೊಳ್ಳುತ್ತಿದ್ದರೂ ಸಹ ಪುನಃ ಹುಟ್ಟುವುದಿಲ್ಲ ಅರ್ಥಾತ್ ಪುನರ್ಜನ್ಮ ಪಡೆಯುವುದಿಲ್ಲ
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  22
ಉಪದ್ರಷ್ಟಾನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ |
ಪರಮಾತ್ಮೇತಿ ಚಾಪ್ಯುಕ್ತೋ ದೇಹೇsಸ್ಮಿನ್ ಪುರುಷಃ ಪರಃ ||
ಪುರುಷನು ಅರ್ಥಾತ್ ಜೀವನು ಈ ಶರೀರದಲ್ಲಿ ಇದ್ದರೂ ಸಹ ಅತೀತನಾಗಿದ್ದಾನೆ. ಕೇವಲ ಸಾಕ್ಷಿಯಾದುದರಿಂದ ಪ್ರೇಕ್ಷಕ ಮತ್ತು ಯಥಾರ್ಥವಾದ ಸಮ್ಮತಿಯನ್ನು ಕೊಡುವವನಾದ್ದರಿಂದ ಅನುಮೋದಕ. ಎಲ್ಲರ ಉತ್ಪತ್ತಿ - ಪಾಲನೆ ಮಾಡುವವನಾದ್ದರಿಂದ ಒಡೆಯ. ಜೀವರೂಪದಿಂದ ಫಲಾನುಭವಿ, ಬ್ರಹ್ಮಾದಿಗಳಿಗೂ ಸ್ವಾಮಿಯಾದ್ದರಿಂದ ಮಹೇಶ್ವರ ಮತ್ತು ಶುದ್ಧ ಸಚ್ಚಿದಾನಂದ ಘನನಾದ್ದರಿಂದ ಪರಮಾತ್ಮ ಎಂದು ಹೇಳಲಾಗಿದೆ ||೨೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  21
ಪುರುಷಃ ಪ್ರಕೃತಿಸ್ಥೋ ಹಿ ಭುಂಕ್ತೇ ಪ್ರಕೃತಿಜಾನ್ ಗುಣಾನ್ |
ಕಾರಣಂ ಗುಣಸಂಗೋsಸ್ಯ ಸದಸದ್ಯೋನಿಜನ್ಮಸು ||
ಪ್ರಕೃತಿಯಲ್ಲಿದ್ದುಕೊಂಡು ಪುರುಷನು ಪ್ರಕೃತಿಯಿಂದ ಹುಟ್ಟಿದ ಎಲ್ಲಾ ತ್ರಿಗುಣಾತ್ಮಕ ವಸ್ತುಗಳನ್ನು ಅನುಭವಿಸುತ್ತಾನೆ ಮತ್ತು ಈ ಗುಣಗಳ ಸಂಗವೇ ಅರ್ಥಾತ್ ಅವುಗಳಲ್ಲಿನ ಆಸಕ್ತಿಯೇ ಈ ಜೀವಾತ್ಮನು ಒಳ್ಳೆಯ ಅಥವಾ ಯೋನಿಗಳಲ್ಲಿ ಜನಿಸಲು ಕಾರಣವಾಗಿದೆ ||೨೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  20
ಕಾರ್ಯಕರಣಕರ್ತೃತ್ವೇ ಹೇತುಃ ಪ್ರಕೃತಿರುಚ್ಯತೇ |
ಪುರುಷಃ ಸುಖದುಃಖಾನಾಂ ಭೋಕ್ತೃತ್ವೇ ಹೇತುರುಚ್ಯತೇ ||
ಪ್ರಕೃತಿಯು ಕಾರ್ಯ ಮತ್ತು ಕರಣ ಅರ್ಥಾತ್ ಎಲ್ಲಾ ಇಂದ್ರಿಯಗಳ ಉತ್ಪತ್ತಿಗೆ ಮೂಲ ಕಾರಣವೆಂದು ಹೇಳಲಾಗುತ್ತದೆ ಮತ್ತು ಜೀವಾತ್ಮನು ಸುಖ - ದುಃಖಗಳನ್ನು ಅನುಭವಿಸುವುದಕ್ಕೆ ಕಾರಣನೆಂದು ಹೇಳಲಾಗುತ್ತದೆ ||೨೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  19
ಪ್ರಕೃತಿಂ ಪುರುಷಂ ಚೈವ ವಿದ್ಧ್ಯನಾದೀ ಉಭಾವಪಿ |
ವಿಕಾರಾಂಶ್ಚ ಗುಣಾಂಶ್ಚೈವ ವಿದ್ಧಿ ಪ್ರಕೃತಿ ಸಂಭವಾನ್ ||
ಪ್ರಕೃತಿ ಅರ್ಥಾತ್ ತ್ರಿಗುಣಮಯೀ ನನ್ನ ಮಾಯೆ ಮತ್ತು ಜೀವಾತ್ಮಾ ಅರ್ಥಾತ್ ಕ್ಷೇತ್ರಜ್ಞ ಇವೆರಡನ್ನೂ ಸಹ ನೀನು ಅನಾದಿಗಳೆಂದು ತಿಳಿ. ರಾಗ - ದ್ವೇಷಾದಿ ವಿಕಾರಗಳನ್ನು ಹಾಗೂ ತ್ರಿಗುಣಾತ್ಮಕ ಪದಾರ್ಥಗಳೆಲ್ಲವೂ ಸಹ ಪ್ರಕೃತಿಯಿಂದಲೇ ಉತ್ಪತ್ತಿಯಾದವು ಎಂದು ತಿಳಿದುಕೊ ||೧೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  18
ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ಞೇಯಂ ಚೋಕ್ತಂ ಸಮಾಸತಃ |
ಮದ್ಭಕ್ತ ಏತದ್ವಿಜ್ಞಾಯ ಮದ್ಭಾವಾಯೋಪಪದ್ಯತೇ|
ಹೀಗೆ ಕ್ಷೇತ್ರ ಮತ್ತು ಜ್ಞಾನ ಹಾಗೂ ಅರಿತುಕೊಳ್ಳಲು ಯೋಗ್ಯನಾದ ಪರಮಾತ್ಮನ ಸ್ವರೂಪಗಳನ್ನು ಸಂಕ್ಷೇಪವಾಗಿ ಹೇಳಲಾಯ್ತು. ಇದನ್ನು ಯಥಾರ್ಥವಾಗಿ ತಿಳಿದುಕೊಂಡ ನನ್ನ ಭಕ್ತನು ನನ್ನ ಸ್ವರೂಪನ್ನು ಪಡೆಯುತ್ತಾನೆ ||೧೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  17
ಜ್ಯೋತಿಷಾಮಪಿ ತಜ್ಜ್ಯೋತಿಃ ತಮಸಃ ಪರಮುಚ್ಯತೇ |
ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಮ್ ||
ಆ ಪರಬ್ರಹ್ಮ ಜ್ಯೋತಿಗಳೆಲ್ಲಕ್ಕೂ ಜ್ಯೋತಿ, ಮಾಯೆಯಿಂದ ಅತಿ ದೂರದವನು ಎಂದು ಹೇಳಲಾಗುತ್ತದೆ. ಆ ಪರಮಾತ್ಮನು ಜ್ಞಾನ ಸ್ವರೂಪಿ, ತಿಳಿದುಕೊಳ್ಳಬೇಕಾದಂತಹ ಶ್ರೇಷ್ಠನು, ತತ್ತ್ವಜ್ಞಾನದಿಂದ ದೊರೆಯಬಲ್ಲವನು ಮತ್ತು ಎಲ್ಲರ ಹೃದಯ ನಿವಾಸಿಯಾಗಿದ್ದಾನೆ ||೧೭||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  16
ಬಹಿರಂತಶ್ಚ ಭೂತಾನಾಮ್ ಅಚರಂ ಚರಮೇವ ಚ |
ಸೂಕ್ಷ್ಮತ್ವಾತ್ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್ ||
ಆ ಪರಮಾತ್ಮನು ಎಲ್ಲಾ ಚರಾಚರ ಜೀವಿಗಳ ಬಾಹ್ಯ - ಅಂತರಂಗಗಳಲ್ಲಿ ಪರಿಪೂರ್ಣನಾಗಿದ್ದಾನೆ ಮತ್ತು ಚರ - ಅಚರ ರೂಪೀ ಕೂಡಾ ಅವನೇ. ಅವನು ಸೂಕ್ಷ್ಮವಾದುದರಿಂದ ಅರಿಯಲಸಾಧ್ಯನು. ಅತಿ ಸಮೀಪದಲ್ಲಿಯೂ ಮತ್ತು ದೂರದಲ್ಲಿಯೂ ಇರುವವನೂ ಸಹ ಆತನೇ ||೧೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  14
ಸರ್ವೇಂದ್ರಿಯಗುಣಾಭಾಸಂ ಸರ್ವೇಂದ್ರಿಯವಿವರ್ಜಿತಮ್ |
ಅಸಕ್ತಂ ಸರ್ವಭೃಚ್ಚೈವ ನಿರ್ಗುಣಂ ಗುಣಭೋಕ್ತೃ ಚ ||
ಸಕಲ ಇಂದ್ರಿಯಗಳ ವಿಷಯಗಳನ್ನೂ ತಿಳಿದುಕೊಂಡಿರುವವನು, ಆದರೆ ವಾಸ್ತವವಾಗಿಯೂ ಎಲ್ಲಾ ಇಂದ್ರಿಯಗಳ ಹೊರತಾದವನು ಅರ್ಥಾತ್ ಇಂದ್ರಿಯಾತೀತ ಮತ್ತು ಆಸಕ್ತಿಯಿಲ್ಲದವನಾದರೂ ಸಹ ತನ್ನ ಯೋಗ ಮಾಯೆಯಿಂದ ಎಲ್ಲರ ಪಾಲನೆ - ಪೋಷಣೆ ಮಾಡುವವನು ಮತ್ತು ಗುಣಾತೀತನಾದರೂ ಸಹ ಗುಣಗಳ ಫಲಾನುಭವಿಯಾಗಿದ್ದಾನೆ
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  13
ಸರ್ವತಃ ಪಾಣಿಪಾದಂ ತತ್ಸರ್ವತೋ ಅಕ್ಷಿ ಶಿರಮುಖಮ್ |
ಸರ್ವತಃ ಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ ||
ಅದು ಎಲ್ಲೆಲ್ಲಿಯೂ ಕೈಕಾಲುಗಳುಳ್ಳದ್ದು, ಎಲ್ಲೆಲ್ಲಿಯೂ ಕಣ್ಣು - ತಲೆ ಮತ್ತು ಮುಖವುಳ್ಳದ್ದು, ಎಲ್ಲೆಲ್ಲಿಯೂ ಕಿವಿಗಳುಳ್ಳದ್ದು, ಏಕೆಂದರೆ ಅದು ಜಗತ್ತಿನಲ್ಲಿ ಎಲ್ಲವನ್ನೂ ವ್ಯಾಪಿಸಿಕೊಂಡು ಸ್ಥಿರಗೊಂಡಿದೆ ||೧೩||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  12
ಜ್ಞೇಯಂ ಯತ್ತತ್ಪ್ರವಕ್ಷ್ಯಾಮಿ ಯಜ್ಞಾತ್ವಾಮೃತಮಶ್ನುತೇ |
ಅನಾದಿಮತ್ಪರಂ ಬ್ರಹ್ಮ ನ ಸತ್ತನ್ನಾಸದುಚ್ಯತೇ ||
ಯಾವುದು ತಿಳಿದುಕೊಳ್ಳಲು ಯೋಗ್ಯವಾಗಿದೆಯೋ, ಯಾವುದನ್ನು ತಿಳಿದುಕೊಂಡ ನಂತರ ಮನುಷ್ಯನು ಪರಮಾನಂದವನ್ನು ಪಡೆಯುತ್ತಾನೆಯೋ ಅದನ್ನು ಚೆನ್ನಾಗಿ ಹೇಳುವೆನು. ಅದು ಅನಾದಿಯಾದ ಪರಮ - ಬ್ರಹ್ಮ ಅವರ್ಣನೀಯ, ಆದುದರಿಂದ ಸತ್ ಅಲ್ಲ, ಅಸತ್ ಅಲ್ಲ ಎಂದು ಹೇಳಲಾಗುತ್ತದೆ ||೧೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  11
ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವಜ್ಞಾನಾರ್ಥದರ್ಶನಮ್ |
ಏತಜ್ಜ್ಞಾನಮಿತಿ ಪ್ರೋಕ್ತಮ್ ಅಜ್ಞಾನಂ ಯದತೋsನ್ಯಥಾ ||
ಅಧ್ಯಾತ್ಮಜ್ಞಾನದಲ್ಲಿ ಯಾವಾಗಲೂ ನಿಷ್ಠನಾಗಿರುವುದು ಮತ್ತು ತತ್ತ್ವಜ್ಞಾನದ ಅರ್ಥಸ್ವರೂಪೀ ಪರಮಾತ್ಮನನ್ನು ಎಲ್ಲೆಲ್ಲಿಯೂ ಕಾಣುವುದು : ಇದೆಲ್ಲವೂ ಜ್ಞಾನ. ಯಾವುದು ಇದಕ್ಕಿಂತ ಬೇರೆಯಾಗಿದೆಯೋ ಅದೇ ಅಜ್ಞಾನ ಎಂದು ಹೇಳಲಾಗಿದೆ ||೧೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  10
ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ |
ವಿವಿಕ್ತದೇಶಸೇವಿತ್ವಮ್ ಅರತಿರ್ಜನಸಂಸದಿ ||
ಪರಮೇಶ್ವರನಾದ ನನ್ನಲ್ಲಿ ಅನನ್ಯ ಭಾವದಿಂದ ಸ್ಥಿರವಾದ ಧ್ಯಾನಯೋಗದ ಮೂಲಕ ಅವ್ಯಭಿಚಾರಿಣೀ ಭಕ್ತಿ ಮತ್ತು ಏಕಾಂತ ಹಾಗೂ ಶುದ್ಧವಾದ ಸ್ಥಳದಲ್ಲಿ ನೆಲೆಸುವ ಸ್ವಭಾವ ಜೊತೆಗೆ ವಿಷಯಾಸಕ್ತರಾದ ಜನ ಸಮೂಹದಲ್ಲಿ ಪ್ರೀತಿಯಿಲ್ಲದಿರುವಿಕೆ ||೧೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  9
ಆಸಕ್ತಿರನಭಿಷ್ಟಂಗಃ ಪುತ್ರದಾರಗೃಹಾದಿಷು |
ನಿತ್ಯಂ ಚ ಸಮಚಿತ್ತತ್ವಮ್ ಇಷ್ಟಾನಿಷ್ಟೋಪಪತ್ತಿಷು ||
ಹೆಂಡತಿ, ಮಕ್ಕಳು, ಮನೆ ಮತ್ತು ಐಶ್ವರ್ಯಾದಿಗಳಲ್ಲಿ ಆಸಕ್ತಿಯಿಲ್ಲದಿರುವುದು, ಮಮತೆಯಿಲ್ಲದಿರುವುದು ಹಾಗೂ ಪ್ರಿಯವಾದದ್ದಾಗಲೀ, ಅಪ್ರಿಯವಾದದ್ದಾಗಲೀ ಒದಗಿಬಂದಾಗ ಯಾವಾಗಲೂ ಮನಸ್ಸು ಒಂದೇ ರೀತಿಯಲ್ಲಿ ಸಮಸ್ಥಿತಿಯಲ್ಲಿರುವುದು ಅರ್ಥಾತ್ ಮನಸ್ಸಿಗೆ ಅನುಕೂಲವಾದ ಅಥವಾ ಅನಾನುಕೂಲವಾದ ಸ್ಥಿತಿ ಒದಗಿದಾಗ ಹರ್ಷ - ಶೋಕಾದಿ ವಿಕಾರಗಳು ಉಂಟಾಗದಿರುವುದು ||೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  8
ಇಂದ್ರಿಯಾರ್ಥೇಷು ವೈರಾಗ್ಯಮ್ ಅನಹಂಕಾರ ಏವ ಚ |
ಜನ್ಮಮೃತ್ಯುಜರಾವ್ಯಾಧಿ ದುಃಖದೋಷಾನುದರ್ಶನಮ್ ||
ಇಹ - ಪರ ಲೋಕಗಳ ಎಲ್ಲಾ ಭೋಗಗಳಲ್ಲಿಯೂ ಆಸಕ್ತಿಯಿಲ್ಲದಿರುವುದು, ಜನನ - ಮರಣ, ಮುಪ್ಪು - ರೋಗ, ದುಃಖ ಮತ್ತು ದೋಷಗಳು ಇತ್ಯಾದಿ ಎಲ್ಲವುಗಳ ಬಗೆಗೆ ಪದೇ - ಪದೇ ಯೋಚಿಸಿ ನೋಡುವುದು ||೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  7
ಅಮಾನಿತ್ವಮದಂಭಿತ್ವಮಹಿಂಸಾಕ್ಷಾಂತಿರಾರ್ಜವಮ್ |
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ ||
ದುರಭಿಮಾನ ಮತ್ತು ಡಂಭಾಚಾರವಿಲ್ಲದಿರುವುದು, ಯಾವ ಕಾರಣಕ್ಕೂ ಪ್ರಾಣಿಹಿಂಸೆ ಮಾಡದಿರುವುದು, ಕ್ಷಮಾಶೀಲತೆ, ಮಾತು ಮತ್ತು ಮನಸ್ಸಿನಲ್ಲಿ ಸರಳತೆ, ಶ್ರದ್ಧಾಭಕ್ತಿ ಸಹಿತ ಗುರುಸೇವೆ ಅಂತರಂಗ - ಬಹಿರಂಗಗಳ ಶುದ್ಧಿ, ಅಂತಃಕರಣ ಸ್ಥಿರತೆ ಮತ್ತು ಮನಸ್ಸು ಹಾಗೂ ಇಂದ್ರಿಯಗಳ ಸಹಿತ ಶರೀರದ ನಿಗ್ರಹ - ||೭||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  6
ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಶ್ಚೇತನಾ ಧೃತಿಃ |
ಏತತ್ ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಮ್ ||
ಹಾಗೂ ಇಚ್ಛೆ, ದ್ವೇಷ, ಸುಖ, ದುಃಖ, ಸ್ಥೂಲ ದೇಹದ ಪಿಂಡ, ಚೇತನ ಮತ್ತು ಧೈರ್ಯ ಹೀಗೆ ಈ ಕ್ಷೇತ್ರವು ವಿಕಾರಗಳ ಸಹಿತ ಸಂಕ್ಷೇಪವಾಗಿ ಹೇಳಲ್ಪಟ್ಟಿತು ||೬||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  5
ಮಹಾಭೂತಾನ್ಯಹಂಕಾರೋ ಬುದ್ಧಿರವ್ಯಕ್ತಮೇವ ಚ |
ಇಂದ್ರಿಯಾಣಿ ದಶೈಕಂ ಚ ಪಂಚ ಚೇಂದ್ರಿಯಗೋಚರಾಃ ||
ಪಂಚ ಸೂಕ್ಷ್ಮ ಮಹಾಭೂತಗಳು, ಅಹಂಕಾರ, ಬುದ್ಧಿ ಮತ್ತು ಮೂಲ ಪ್ರಕೃತಿಯೂ ಅರ್ಥಾತ್ ತ್ರಿಗುಣಮಯೀ ಮಾಯೆಯೂ ಸಹ ಹಾಗೂ ಹತ್ತು ಇಂದ್ರಿಯಗಳು, ಒಂದು ಮನಸ್ಸು ಮತ್ತು ಐದು ಇಂದ್ರಿಯಗಳ ವಿಷಯ ಅರ್ಥಾತ್ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ-- ||೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  4
ಋಷಿಭಿರ್ಬಹುಧಾ ಗೀತಂ ಛಂದೋಭಿರ್ವಿವಿಧೈಃ ಪೃಥಕ್ |
ಬ್ರಹ್ಮಸೂತ್ರಪದೈಶ್ಚೈವ ಹೇತುಮದ್ಭಿರ್ವಿನಿಶ್ಚಿತೈಃ ||
(ಈ ಕ್ಷೇತ್ರ ಮತ್ತು ಕ್ಷೇತ್ರಜ್ಞರ ತತ್ತ್ವವು) ಋಷಿಗಳಿಂದ ಬಹು ಪ್ರಕಾರವಾಗಿ ಹೇಳಲ್ಪಟ್ಟಿದೆ ಮತ್ತು ನಾನಾ ಪ್ರಕಾರದ ವೇದಮಂತ್ರಗಳಿಂದ ವಿಭಾಗ ಪೂರ್ವಕವಾಗಿಯೂ ಸಹ ತಿಳಿಸಲ್ಪಟ್ಟಿದೆ ಹಾಗೂ ಸರಿಯಾಗಿ ನಿಶ್ಚಯಿಸಲ್ಪಟ್ಟ ಯೋಗ್ಯ ಯುಕ್ತಿಗಳಿಂದ ಕೂಡಿದ ಬ್ರಹ್ಮಸೂತ್ರದ ಪದಗಳಿಂದಲೂ ಸಹ ಹಾಗೆಯೇ ಹೇಳಲಾಗಿದೆ ||೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  3
ತತ್ಕ್ಷೇತ್ರಂ ಯಚ್ಚ ಯಾದೃಕ್ಚ ಯದ್ವಿಕಾರಿ ಯತಶ್ಚ ಯತ್ |
ಸ ಚ ಯೋ ಯತ್ಪ್ರಭಾವಾಶ್ಚ ತತ್ಸಮಾಸೇನ ಮೇ ಶೃಣು ||
ಆ ಕ್ಷೇತ್ರ ಯಾವುದು? ಮತ್ತು ಹೇಗಿದೆ? ಹಾಗೂ ಯಾವ ವಿಕಾರಗಳುಳ್ಳದ್ದು ? ಯಾವ ಕಾರಣದಿಂದ ಏನಾಗಿದೆ? ಆ ಕ್ಷೇತ್ರಜ್ಞನೂ ಸಹ ಯಾರು, ಯಾವ ಪ್ರಭಾವವುಳ್ಳವನು ಅದೆಲ್ಲವನ್ನೂ ಸಂಕ್ಷೇಪವಾಗಿ ನನ್ನಿಂದ ಕೇಳು ||೩||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  2
ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವಕ್ಷೇತ್ರೇಷು ಭಾರತ |
ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ತಜ್ಜ್ಞಾನಂ ಮತಂ ಮಮ ||
ಮತ್ತು ಎಲೈ ಅರ್ಜುನ ! ಎಲ್ಲಾ ಕ್ಷೇತ್ರಗಳಲ್ಲಿಯೂ ಕ್ಷೇತ್ರಜ್ಞ ಅರ್ಥಾತ್ ಜೀವಾತ್ಮನೂ ಸಹ ನಾನೇ ಎಂದು ತಿಳಿದುಕೋ ಕ್ಷೇತ್ರ ಕ್ಷೇತ್ರಜ್ಞರ ಅರ್ಥಾತ್ ವಿಕಾರ ಸಹಿತ ಪ್ರಕೃತಿಯ ಮತ್ತು ಪುರುಷನ ಯಾವ ಯಥಾರ್ಥವಾದ ಅರಿವು ಇದೆಯೋ ಅದೇ ಜ್ಞಾನ ಎಂದು ನನ್ನ ಅಭಿಪ್ರಾಯ ||೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  13
ಶ್ಲೋಕ  1
ಶ್ರೀ ಪರಮಾತ್ಮನೇ ನಮಃ ಅಥ ತ್ರಯೋದಶೋsಧ್ಯಾಯಃ ಕ್ಷೇತ್ರಕ್ಷೇತ್ರಜ್ಞವಿಭಾಗಯೋಗಃ
ಶ್ರೀ ಭಗವಾನುವಾಚ
ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ |
ಏತದ್ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ಇತಿ ತದ್ವಿದಃ ||
ಶ್ರೀ ಕೃಷ್ಣ ಹೇಳಿದನು - ಎಲೈ ಅರ್ಜುನ ! ಈ ಶರೀರವು ಕ್ಷೇತ್ರ ಎಂದು ಹೇಳಲ್ಪಡುತ್ತದೆ. ಇದನ್ನು ಯಾರು ತಿಳಿದುಕೊಂಡಿದ್ದಾರೆಯೋ ಆತನನ್ನು ಕ್ಷೇತ್ರಜ್ಞ ಎಂದು ಅವುಗಳ ಯಥಾರ್ಥವನ್ನು ತಿಳಿದುಕೊಂಡ ಜ್ಞಾನಿಗಳು ಹೇಳುತ್ತಾರೆ.||೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  20
ಯೇ ತು ಧರ್ಮ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ |
ಶ್ರದ್ಧಧಾನಾ ಮತ್ಪರಮಾ ಭಕ್ತಾಸ್ತೇsತೀವ ಮೇ ಪ್ರಿಯಾಃ ||
ಮತ್ತು ಯಾರು ನನ್ನ ಪರಾಯಣರಾಗಿ ಶ್ರದ್ಧೆಯಿಂದ ಈ ಹಿಂದೆ ತಿಳಿಸಿರುವ ಧರ್ಮಮಯ ಉಪದೇಶಾಮೃತವನ್ನು ನಿಷ್ಕಾಮ ಭಾವನೆಯಿಂದ ಸೇವಿಸುವರೋ ಆ ಭಕ್ತರು ನನಗೆ ಅತಿಶಯ ಪ್ರಿಯರಾಗಿರುತ್ತಾರೆ ||೨೦||

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು
ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ ಭಕ್ತಿಯೋಗೋ ನಾಮ ದ್ವಾದಶೋsಧ್ಯಾಯಃ ಹರಿಃ ಓಂ ತತ್ಸತ್
ಹರಿಃ ಓಂ ತತ್ಸತ್ ಹರಿಃ ಓಂ ತತ್ಸತ್
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  19
ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನಚಿತ್ |
ಅನಿಕೇತಃ ಸ್ಥಿರಮತಿರ್ಭಕ್ತಿಮಾನ್ ಮೇ ಪ್ರಿಯೋ ನರಃ ||
ಯಾರು ಹೊಗಳಿಕೆ - ತೆಗಳಿಕೆಗಳನ್ನು ಸಮವಾಗಿ ತಿಳಿದುಕೊಳ್ಳುವನೋ, ಮನನಶೀಲನೋ, ಯಾವುದೇ ರೀತಿಯ ಜೀವನೋಪಾಯವೇ ಆಗಿರಲಿ ಯಾವಾಗಲೂ ತೃಪ್ತನಾಗಿರುವನೋ, ನಿವಾಸಾದಿಗಳ ಬಗ್ಗೆ ಮಮತೆಯಿಲ್ಲದಿರುವನೋ ಆ ಸ್ಥಿರಬುದ್ಧಿಯುಳ್ಳ ಭಕ್ತನಾದ ಮನುಷ್ಯನು ನನಗೆ ಪ್ರಿಯನು||೧೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  18
ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ:|
ಶೀತೋಷ್ಣ ಸುಖದುಃಖೇಷು ಸಮಃ ಸಂಗ ವಿವರ್ಜಿತಃ ||
ಯಾರು ಶತ್ರು - ಮಿತ್ರರಲ್ಲಿ ಮತ್ತು ಮಾನಾಪಮಾನಗಳಲ್ಲಿ ಸಮಾನ ಭಾವನೆಯಿಟ್ಟಿರುವನೋ ಹಾಗೂ ಶೀತೋಷ್ಣ ಸುಖ ದುಃಖಾದಿ ದ್ವಂದ್ವಗಳಲ್ಲಿ ಸಮಾನವಾಗಿರುವನೋ ಮತ್ತು ಸಾಂಸಾರಿಕ ವಿಷಯಗಳಲ್ಲಿ ಆಸಕ್ತಿಯಿಲ್ಲದವನೋ ....||೧೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  17
ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ |
ಶುಭಾಶುಭಪರಿತ್ಯಾಗೀ ಭಕ್ತಿಮಾನ್ಯಃ ಸ ಮೇ ಪ್ರಿಯಃ ||
ಯಾರು ಎಂದೆಂದಿಗೂ ಸಂತೋಷದಿಂದ ಹಿಗ್ಗುವುದಿಲ್ಲವೋ, ದ್ವೇಷ ಭಾವ ರಹಿತನೋ, ಶೋಕಪಡುವುದಿಲ್ಲವೋ, ಏನನ್ನೂ ಬಯಸುವುದಿಲ್ಲವೋ ಮತ್ತು ಯಾರು ಎಲ್ಲಾ ಶುಭ ಮತ್ತು ಅಶುಭ ಕರ್ಮಗಳ ಫಲವನ್ನು ತ್ಯಾಗ ಮಾಡಿರುವನೋ ಆ ಭಕ್ತನು ನನಗೆ ಪ್ರಿಯನು ||೧೭||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  16
ಅನಪೇಕ್ಷಃ ಶುಚಿರ್ದಕ್ಷ ಉದಾಸೀನೋ ಗತವ್ಯಥಃ|
ಸರ್ವಾರಂಭಪರಿತ್ಯಾಗೀ ಯೋ ಮದ್ಭಕ್ತಃ ಸ ಮೇ ಪ್ರಿಯಃ ||
ಯಾರು ಆಕಾಂಕ್ಷಾ ರಹಿತನೋ, ಅಂತರಂಗ - ಬಹಿರಂಗ ಶುದ್ಧನೋ, ಚತುರನೋ ಅರ್ಥಾತ್ ಯಾವ ಉದ್ದೇಶಕ್ಕಾಗಿ ಜನಿಸಿರುವನೋ ಆ ಉದ್ದೇಶ ಪೂರ್ತಿಗೊಳಿಸುವನೋ ಮತ್ತು ಪಕ್ಷಪಾತವಿಲ್ಲದವನೋ, ದುಃಖಾದಿಗಳಿಂದ ಪಾರಾದವನೋ ಮತ್ತು ಎಲ್ಲಾ ಕರ್ಮಗಳಲ್ಲಿನ ಮಮತೆ, ಆಸಕ್ತಿ ಮತ್ತು ಫಲಾಪೇಕ್ಷಾದಿಗಳ ಪರಿತ್ಯಾಗಿಯೋ ಆ ನನ್ನ ಭಕ್ತನು ನನಗೆ ಪ್ರಿಯನಾದವನು ||೧೬||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  15
ಯಸ್ಮಾನ್ನೋ ದ್ವಿಜತೇ ಲೋಕೋ ಲೋಕಾನ್ನೋದ್ವಿಜತೇ ಚ ಯಃ |
ಹರ್ಷಾಮರ್ಷಭಯೋದ್ವೇಗೈಃ ಮುಕ್ತೋ ಯಃ ಸ ಚ ಮೇ ಪ್ರಿಯಃ ||
ಯಾರಿಂದ ಯಾರೂ ಸಹ ಉದ್ವೇಗಗೊಳ್ಳುವುದಿಲ್ಲವೋ ಮತ್ತು ಯಾರು ಸ್ವತಃ ಬೇರೆ ಯಾರಿಂದಲೂ ಉದ್ವೇಗಗೊಳ್ಳುವುದಿಲ್ಲವೋ ಹಾಗೂ ಯಾರು ಹರ್ಷ, ಅಸೂಯೆ(ಅಸಹನೆ) ಭಯ, ಉದ್ವೇಗಾದಿಗಳಿಂದ ಮುಕ್ತನೋ ಆ ಭಕ್ತನು ನನಗೆ ಪ್ರಿಯನು ||೧೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  14
ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ |
ಮಯ್ಯರ್ಪಿತಮನೋಬುದ್ಧಿಃ ಯೋ ಮದ್ಭಕ್ತಃ ಸ ಮೇ ಪ್ರಿಯಃ ||
ಯಾವ ಯೋಗಿಯು ಯಾವಾಗಲೂ ಸಂತುಷ್ಟನೋ, ಮನಸ್ಸು ಮತ್ತು ಇಂದ್ರಿಯಗಳ ಸಹಿತ ಶರೀರವನ್ನು ವಶದಲ್ಲಿಟ್ಟುಕೊಂಡಿರುವನೋ, ನನ್ನಲ್ಲಿ ಮನಸ್ಸು - ಬುದ್ಧಿಗಳನ್ನು ಅರ್ಪಿಸಲ್ಪಟ್ಟ ದೃಢನಿಶ್ಚಯವುಳ್ಳ ಆ ನನ್ನ ಭಕ್ತ ನನಗೆ ಬಹು ಪ್ರಿಯನು. ||೧೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  13
ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ |
ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ ||
(ಈ ರೀತಿ ಶಾಂತಿಯನ್ನು ಪಡೆದವನು) ಎಲ್ಲಾ ಪ್ರಾಣಿಗಳಲ್ಲಿಯೂ ದ್ವೇಷ ಭಾವವಿಲ್ಲದವನು, ಸ್ವಾರ್ಥವಿಲ್ಲದ ಪ್ರೇಮಿ ಮತ್ತು ನಿಃಸ್ವಾರ್ಥ ದಯಾಪರನೂ ಜೊತೆಗೆ ಮಮಕಾರವಿಲ್ಲದವನು, ಅಹಂಕಾರವಿಲ್ಲದವನು, ಸುಖ ದುಃಖಾದಿಗಳಲ್ಲಿ ಸಮಾನವಾಗಿರುವವನು ಮತ್ತು ಕ್ಷಮಾಶೀಲನೂ ಆಗಿದ್ದಾನೆಯೋ ಆಗಿದ್ದಾನೆಯೋ ಅರ್ಥಾತ್ ಅಪರಾಧ ಮಾಡುವವನಿಗೂ ಸಹ ಅಭಯ ಕೊಡುವವನು ||೧೩||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  12
ಶ್ರೇಯೋ ಹಿ ಜ್ಞಾನಮಭ್ಯಾಸಾತ್ ಜ್ಞಾನಾದ್ಧ್ಯಾನಂ ವಿಶಿಷ್ಯತೇ |
ಧ್ಯಾನಾತ್ಕರ್ಮಫಲತ್ಯಾಗಃ ತ್ಯಾಗಾಚ್ಛಾಂತಿರನಂತರಮ್ ||
ಏಕೆಂದರೆ, ರಹಸ್ಯವನ್ನು ತಿಳಿಯದೆ ಮಾಡಲಾದ ಅಭ್ಯಾಸಕ್ಕಿಂತ ಪರೋಕ್ಷ ಜ್ಞಾನ ಶ್ರೇಷ್ಠ, ಪರೋಕ್ಷಜ್ಞಾನಕ್ಕಿಂತ ಪರಮಾತ್ಮನಾದ ನನ್ನ ಧ್ಯಾನ ಶ್ರೇಷ್ಠ ಮತ್ತು ಧ್ಯಾನಕ್ಕಿಂತಲೂ ಕರ್ಮಫಲಗಳನ್ನೆಲ್ಲಾ ನನಗಾಗಿ ತ್ಯಾಗಮಾಡುವುದು ಶ್ರೇಷ್ಠ. ತ್ಯಾಗದಿಂದ ಕೂಡಲೇ ಪರಮ ಶಾಂತಿ ಲಭಿಸುತ್ತದೆ ||೧೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  11
ಅಥೈತದಪ್ಯಶಕ್ತೋsಸಿ ಕರ್ತುಂ ಮದ್ಯೋಗಮಾಶ್ರಿತಃ|
ಸರ್ವಕರ್ಮಫಲತ್ಯಾಗಂ ತತಃ ಕುರು ಯತಾತ್ಮವಾನ್ ||
ಒಂದು ವೇಳೆ ನನ್ನ ಪ್ರಾಪ್ತಿರೂಪೀ ಯೋಗವನ್ನು ಆಶ್ರಯಿಸಿ ಮೇಲೆ ಹೇಳಿದಂತೆ ಸಾಧನೆಯನ್ನು ಮಾಡಲು ಸಹ ಅಸಮರ್ಥನೇ ಆದ ಪಕ್ಷದಲ್ಲಿ ಮನಸ್ಸು ಮತ್ತು ಬುದ್ಧಿ ಮೊದಲಾದವುಗಳನ್ನು ಜಯಿಸಿ ಎಲ್ಲಾ ಕರ್ಮಗಳ ಫಲಗಳನ್ನು ತ್ಯಾಗಮಾಡು ||೧೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  10
ಅಭ್ಯಾಸೇsಪ್ಯಸಮರ್ಥೋsಸಿ ಮತ್ಕರ್ಮಪರಮೋ ಭವ |
ಮದರ್ಥಮಪಿ ಕರ್ಮಾಣಿ ಕುರ್ವನ್ ಸಿದ್ಧಿಮವಾಪ್ಸ್ಯಸಿ ||
ಮೇಲೆ ತಿಳಿಸಿದ ಅಭ್ಯಾಸದಲ್ಲಿಯೂ ಸಹ ಅಸಮರ್ಥನಾದರೆ ಕೇವಲ ನನಗಾಗಿಯೇ ನೀನು ಕರ್ಮ ಮಾಡುವ ಪರಾಯಣನಾಗು. ಹೀಗೆ ನನ್ನ ನಿಮಿತ್ತವಾಗಿ ಕರ್ಮಗಳನ್ನು ಮಾಡುತ್ತಾ ಇದ್ದರೂ ಸಹ ನನ್ನ ಸಾಕ್ಷಾತ್ಕಾರರೂಪೀ ಸಿದ್ಧಿಯನ್ನೇ ಪಡೆಯುವೆ ||೧೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  9
ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಮ್ |
ಅಭ್ಯಾಸಯೋಗೇನ ತತೋ ಮಾಮ್ ಇಚ್ಛಾಪ್ತುಂ ಧನಂಜಯ ||
ಒಂದು ವೇಳೆ ನೀನು ಮನಸ್ಸನ್ನು ನನ್ನಲ್ಲಿ ಸ್ಥಿರವಾಗಿ ನೆಲೆಗೊಳಿಸಲು ಅಸಮರ್ಥನಾದರೆ, ಎಲೈ ಅರ್ಜುನಾ! ಅಭ್ಯಾಸರೂಪೀ ಯೋಗದ ಮೂಲಕ ನನ್ನನ್ನು ಸೇರಲು ಇಚ್ಛಿಸು ||೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  8
ಮಯ್ಯೇವ ಮನ ಆಧತ್ಸ್ವ ಮಯಿ ಬುದ್ಧಿಂ ನಿವೇಶಯ |
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ ||
ನನ್ನಲ್ಲಿಯೇ ಮನಸ್ಸನ್ನು ಕೇಂದ್ರೀಕರಿಸು ಮತ್ತು ಬುದ್ಧಿಯನ್ನು ತಲ್ಲೀನಗೊಳಿಸು, ಇದರ ನಂತರ ನನ್ನಲ್ಲಿಯೇ ನಿವಾಸಮಾಡುವೆ ಅರ್ಥಾತ್ ನನ್ನನ್ನೇ ಸೇರುವೆ. ಇದರಲ್ಲಿ ಸ್ವಲ್ಪವೂ ಸಹ ಸಂಶಯವೆಂಬುದೇ ಇಲ್ಲ ||೮||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  7
ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್ |
ಭವಾಮಿ ನಚಿರಾತ್ಪಾರ್ಥ ಮಯ್ಯಾವೇಶಿತಚೇತಸಾಮ್ ||
ಎಲೈ ಅರ್ಜುನ! ನನ್ನಲ್ಲಿಯೇ ಮನಸ್ಸನ್ನು ಲೀನಗೊಳಿಸಿರುವ ಆ ಪ್ರೇಮೀ ಭಕ್ತರನ್ನು ನಾನು ಶೀಘ್ರವಾಗಿಯೇ ಮೃತ್ಯುರೂಪೀ ಸಂಸಾರ - ಸಮುದ್ರದಿಂದ ಪಾರುಮಾಡಿ ಉದ್ಧಾರ ಮಾಡುತ್ತೇನೆ ||೭||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  6
ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ |
ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ ||
ಮತ್ತು ಯಾರು ನನ್ನ ಪರಾಯಣರಾದ ಭಕ್ತರು ಎಲ್ಲಾ ಕರ್ಮಗಳನ್ನೂ ನನಗೆ ಸಮರ್ಪಿಸಿ ಸಗುಣರೂಪೀ ಪರಮೇಶ್ವರನಾದ ನನ್ನನ್ನೇ ಅನನ್ಯ ಭಾವದಿಂದ ಭಕ್ತಿಯೋಗದ ಮೂಲಕ ನಿರಂತರ ಚಿಂತನೆ ಮಾಡುತ್ತಾ ಸ್ಮರಿಸುತ್ತಾರೆಯೋ....... ||೬||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  5
ಕ್ಲೇಶೋsಧಿಕತರಸ್ತೇಷಾಮ್ ಅವ್ಯಕ್ತಾಸಕ್ತಚೇತಸಾಮ್ |
ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ ||
ಆ ಸಚ್ಚಿದಾನಂದ ಘನ ನಿರಾಕಾರ ಬ್ರಹ್ಮನಲ್ಲಿ ಆಸಕ್ತ ಮನಸ್ಸುಳ್ಳವನ ಸಾಧನೆಯಲ್ಲಿ ಕ್ಲೇಶ ಅರ್ಥಾತ್ ಪರಿಶ್ರಮ ಅತ್ಯಧಿಕವಾಗಿರುತ್ತದೆ. ಏಕೆಂದರೆ ದೇಹಾಭಿಮಾನಿಗಳಾದವರು ಅವ್ಯಕ್ತದ ಮಾರ್ಗವನ್ನು ಅರ್ಥಾತ್ ಜ್ಞಾನ ಮಾರ್ಗವನ್ನು ಬಹಳ ಕಷ್ಟದಿಂದ ಪಡೆದುಕೊಳ್ಳುತ್ತಾರೆ ಅರ್ಥಾತ್ ದೇಹಾಭಿಮಾನವಿರುವವರೆಗೂ ಶುದ್ಧ ಸಚ್ಚಿದಾನಂದ ಘನ ನಿರಾಕಾರ ಬ್ರಹ್ಮನ ಸಾಕ್ಷಾತ್ಕಾರ ಉಂಟಾಗುವುದು ಕಠಿಣ ||೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  4
ಯೇ ತ್ವಕ್ಷರಮನಿರ್ದೇಶ್ಯಮ್ ಅವ್ಯಕ್ತಂ ಪರ್ಯುಪಾಸತೇ |
ಸರ್ವತ್ರಗಮಚಿಂತ್ಯಂಚ ಕೂಟಸ್ಥಮಚಲಂ ಧ್ರುವಮ್ ||
ಸಂನಿಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ |
ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ ||
ಮತ್ತು ಯಾರು ಇಂದ್ರಿಯಗಳ ಸಮುದಾಯವನ್ನು ಚೆನ್ನಾಗಿ ವಶಮಾಡಿಕೊಂಡು ಮನಸ್ಸು - ಬುದ್ಧಿಗಳಿಗೂ ನಿಲುಕದ ಸರ್ವವ್ಯಾಪೀ, ಅಕಥನೀಯ ಸ್ವರೂಪೀ ಮತ್ತು ಯಾವಾಗಲೂ ಒಂದೇ ಭಾವದಲ್ಲಿರುವವನು, ಶಾಶ್ವತ, ಅಚಲ, ನಿರಾಕಾರ, ಅವಿನಾಶೀ ಸಚ್ಚಿದಾನಂದ ಘನ ಬ್ರಹ್ಮನನ್ನು ನಿರಂತರ ಒಂದೇ ಭಾವದಿಂದ ಧ್ಯಾನಿಸುತ್ತಾ ಆರಾಧಿಸುತ್ತಾರೆಯೋ ಆ ಸಮಸ್ತ ಜೀವಿಗಳ ಹಿತಕ್ಕಾಗಿ ಶ್ರಮಿಸುವ ಮತ್ತು ಎಲ್ಲರಲ್ಲಿಯೂ ಸಮಾನ ಭಾವನೆಯನ್ನಿಟ್ಟುಕೊಂಡಿರುವಂತಹ ಯೋಗಿಗಳು ನನನ್ನೇ ಪಡೆದುಕೊಳ್ಳುತ್ತಾರೆ. ||೩/೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  3
ಯೇ ತ್ವಕ್ಷರಮನಿರ್ದೇಶ್ಯಮ್ ಅವ್ಯಕ್ತಂ ಪರ್ಯುಪಾಸತೇ |
ಸರ್ವತ್ರಗಮಚಿಂತ್ಯಂಚ ಕೂಟಸ್ಥಮಚಲಂ ಧ್ರುವಮ್ ||
ಸಂನಿಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ |
ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ ||
ಮತ್ತು ಯಾರು ಇಂದ್ರಿಯಗಳ ಸಮುದಾಯವನ್ನು ಚೆನ್ನಾಗಿ ವಶಮಾಡಿಕೊಂಡು ಮನಸ್ಸು - ಬುದ್ಧಿಗಳಿಗೂ ನಿಲುಕದ ಸರ್ವವ್ಯಾಪೀ, ಅಕಥನೀಯ ಸ್ವರೂಪೀ ಮತ್ತು ಯಾವಾಗಲೂ ಒಂದೇ ಭಾವದಲ್ಲಿರುವವನು, ಶಾಶ್ವತ, ಅಚಲ, ನಿರಾಕಾರ, ಅವಿನಾಶೀ ಸಚ್ಚಿದಾನಂದ ಘನ ಬ್ರಹ್ಮನನ್ನು ನಿರಂತರ ಒಂದೇ ಭಾವದಿಂದ ಧ್ಯಾನಿಸುತ್ತಾ ಆರಾಧಿಸುತ್ತಾರೆಯೋ ಆ ಸಮಸ್ತ ಜೀವಿಗಳ ಹಿತಕ್ಕಾಗಿ ಶ್ರಮಿಸುವ ಮತ್ತು ಎಲ್ಲರಲ್ಲಿಯೂ ಸಮಾನ ಭಾವನೆಯನ್ನಿಟ್ಟುಕೊಂಡಿರುವಂತಹ ಯೋಗಿಗಳು ನನನ್ನೇ ಪಡೆದುಕೊಳ್ಳುತ್ತಾರೆ. ||೩/೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  2
ಶ್ರೀ ಭಗವಾನುವಾಚ
ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ |
ಶ್ರದ್ಧಯಾ ಪರಯೋಪೇತಾಃ ತೇ ಮೇ ಯುಕ್ತತಮಾ ಮತಾಃ ||
ಶ್ರೀ ಕೃಷ್ಣ ಪರಮಾತ್ಮ ಹೇಳಿದನು - ನನ್ನಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ ನಿರಂತರ ನನ್ನ ಪ್ರಾರ್ಥನೆ - ಧ್ಯಾನದಲ್ಲಿ ನಿರತರಾದ ಯಾವ ಭಕ್ತರು ಅತಿಶಯ (ಶ್ರೇಷ್ಠ)ವಾದ ಶ್ರದ್ಧಾಯುಕ್ತರಾಗಿ ಸಗುಣರೂಪೀ ಪರಮೇಶ್ವರನಾದ ನನ್ನನ್ನು ಆರಾಧಿಸುತ್ತಾರೆಯೋ ಅವರು ನನಗೆ ಯೋಗಿಗಳಲ್ಲೆಲ್ಲಾ ಅತ್ಯುತ್ತಮ ಯೋಗಿ ಎಂದು ಒಪ್ಪಿಗೆ ||೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  12
ಶ್ಲೋಕ  1
ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ |
ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ ||
ಅರ್ಜುನ ಹೇಳಿದನು - ಈ ಹಿಂದೆ ತಿಳಿಸಿದ ಪ್ರಕಾರ ಯಾವ ಅನನ್ಯ ಪ್ರೇಮೀ ಭಕ್ತರು ನಿರಂತರ ನಿನ್ನ ಧ್ಯಾನದಲ್ಲಿಯೇ ನಿರತನಾಗಿದ್ದು ಸಗುಣರೂಪೀ ಪರಮೇಶ್ವರನಾದ ನಿನ್ನನ್ನು ಅತ್ಯಂತ ಶ್ರೇಷ್ಠಭಾವನೆಯಿಂದ ಉಪಾಸನೆ ಮಾಡುತ್ತಾರೆಯೋ ಮತ್ತು ಯಾರು ಅವಿನಾಶೀ ಸಚ್ಚಿದಾನಂದ ಘನ ನಿರಾಕಾರನನ್ನೇ ಆರಾಧಿಸುತ್ತಾರೆಯೋ ಆ ಎರಡು ಪ್ರಕಾರದ ಭಕ್ತರಲ್ಲಿ ಅತ್ಯಂತ ಉತ್ತಮರಾದ ಯೋಗವೇತ್ತರು ಅರ್ಥಾತ್ ಜ್ಞಾನಿ ಯಾರು? ||೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  55
ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ |
ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಂಡವ ||
ಎಲೈ ಅರ್ಜುನ! ಯಾರು ಕೇವಲ ನನಗಾಗಿಯೇ ಯಜ್ಞ, ದಾನ ಮತ್ತು ತಪಸ್ಸು ಮುಂತಾದ ಎಲ್ಲಾ ಕರ್ತವ್ಯ - ಕರ್ಮಗಳನ್ನು ಮಾಡುತ್ತಾನೆಯೋ, ನನ್ನ ಪರಾಯಣನೋ ಅರ್ಥಾತ್ ನನ್ನನ್ನೇ ಆಶ್ರಯಿಸಿ - ಪರಮಗತಿಯೆಂದು ಭಾವಿಸಿ ತತ್ಪರನಾಗಿದ್ದಾನೆಯೋ, ನನ್ನ ಭಕ್ತನೋ, ಪ್ರಾಪಂಚಿಕ ವಸ್ತುಗಳಲ್ಲಿ ಆಸಕ್ತಿ, ಮಮತೆ ಇಲ್ಲದವನೋ, ಸಮಸ್ತ ಜೀವಿಗಳಲ್ಲಿಯೂ ದ್ವೇಷಭಾವನೆ ಇಲ್ಲದವನೋ ಅಂತಹ ಆ ಅನನ್ಯ ಭಕ್ತನು ನನ್ನನ್ನೇ ಸೇರುತ್ತಾನೆ ||೫೫||
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು
ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ
ಶ್ರೀ ಕೃಷ್ಣಾರ್ಜುನ ಸಂವಾದೇ ವಿಶ್ವರೂಪದರ್ಶನ ಯೋಗೋ
ನಾಮೈಕಾದಶೋsಧ್ಯಾಯಃ
ಹರಿಃ ಓಂ ತತ್ಸತ್ ಹರಿಃ ಓಂ ತತ್ಸತ್
ಹರಿಃ ಓಂ ತತ್ಸತ್
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  54
ಭಕ್ತ್ಯಾತ್ವನನ್ಯಯಾ ಶಕ್ಯ ಅಹಮೇವಂವಿಧೋsರ್ಜುನ |
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ ||
ಆದರೆ, ಎಲೈ ಪರಂತಪ ಅರ್ಜುನ! ಅನನ್ಯ ಭಕ್ತಿ ಮೂಲಕ ಈ ಪ್ರಕಾರದ ಚತುರ್ಭುಜ ರೂಪಿನ ನನ್ನನ್ನು ಪ್ರತ್ಯಕ್ಷವಾಗಿ ನೋಡಲು, ಯಥಾರ್ಥವಾಗಿ ತಿಳಿದುಕೊಳ್ಳಲು ಹಾಗೂ ಪ್ರವೇಶಿಸಲು ಅರ್ಥಾತ್ ಒಂದೇ ಭಾವದಿಂದ ಸಾಕ್ಷಾತ್ಕಾರ ಪಡಿಸಿಕೊಳ್ಳಲು ಸಹ ಸಾಧ್ಯ ||೫೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  53
ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ |
ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ ||
ನೀನು ನನ್ನನ್ನು ನೋಡಿರುವಂತೆ ಈ ಚತುರ್ಭುಜ ರೂಪಿನಲ್ಲಿರುವ ನಾನು ವೇದಾಧ್ಯಯನದಿಂದ ಕಾಣಿಸಿಕಳ್ಳಲು ಸಾಧ್ಯನಲ್ಲ. ತಪಸ್ಸಿನಿಂದಲೂ, ದಾನದಿಂದಲೂ ಮತ್ತು ಯಜ್ಞದಿಂದಲೂ ಸಹ ಕಾಣಿಸಿಕೊಳ್ಳಲು ಸಾಧ್ಯನಲ್ಲ ||೫೩||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  52
ಶ್ರೀ ಭಗವಾನುವಾಚ
ಸುದುರ್ದರ್ಶಮಿದಂ ರೂಪಂ ದೃಷ್ಟವಾನಸ್ಮಿ ಯನ್ಮಮ |
ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನಕಾಂಕ್ಷಿಣಃ ||
ಶ್ರೀ ಕೃಷ್ಣ ಹೇಳಿದನು - ನನ್ನ ಯಾವ ಈ ಚತುರ್ಭುಜ ರೂಪನ್ನು ನೀನು ನೋಡಿದೆಯೋ, ಆದು ನೋಡಲು ಅತ್ಯಂತ ದುರ್ಲಭ. ಏಕೆಂದರೆ ದೇವತೆಗಳೂ ಸಹ ಯಾವಾಗಲೂ ಈ ರೂಪದ ದರ್ಶನ ಮಾಡಲು ಇಚ್ಛಿಸಿರುತ್ತಾರೆ. ||೫೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  51
ಅರ್ಜುನ ಉವಾಚ
ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ |
ಇದಾನೀಮಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಂ ಗತಃ ||
ಅರ್ಜುನ ಹೇಳಿದನು - ಹೇ ಜನಾರ್ದನ! ನಿನ್ನ ಈ ಅತ್ಯಂತ ಶಾಂತವಾದ ಮನುಷ್ಯ ರೂಪನ್ನು ನೋಡಿ ಈಗ ನಾನು ಶಾಂತಮನಸ್ಸುಳ್ಳವನಾಗಿ ನನ್ನ ಸ್ವಾಭಾವಿಕ ಸ್ಥಿತಿಯನ್ನು ಪಡೆದುಕೊಂಡಿದ್ದೇನೆ ||೫೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  50
ಸಂಜಯ ಉವಾಚ
ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ ಸ್ವಕಂ ರೂಪಂ ದರ್ಶಯಾಮಾಸ ಭೂಯಃ |
ಆಶ್ವಾಸಯಾಮಾಸ ಚ ಭೀತಮೇನಂ ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ ||
ಸಂಜಯ ಹೇಳಿದನು - ಭಗವಾನ್ ವಾಸುದೇವನು ಅರ್ಜುನನಿಗೆ ಹೀಗೆ ಹೇಳಿ ಅದರಂತೆಯೇ ತನ್ನ ಚತುರ್ಭುಜ ರೂಪನ್ನು ತೋರಿಸಿದನು ಮತ್ತು ಪುನಃ ಮಹಾತ್ಮಾ ಶ್ರೀ ಕೃಷ್ಣನು ಸೌಮ್ಯಮೂರ್ತಿಯಾಗಿ ಭಯ - ಭೀತನಾಗಿದ್ದ ಈ ಅರ್ಜುನನಿಗೆ ಧೈರ್ಯ ತುಂಬಿದನು ||೫೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  49
ಮಾ ತೇ ವ್ಯಥಾ ಮಾ ಚ ವಿಮೂಢಭಾವೋ ದೃಷ್ಟ್ವಾ ರೂಪಂ ಘೋರಮೀದೃಙ್ಮಮೇದಮ್ |
ವ್ಯಪೇತಭೀಃ ಪ್ರೀತಮನಾಃ ಪುನಸ್ತ್ವಂ ತದೇವ ಮೇ ರೂಪಮಿದಂ ಪ್ರಪಶ್ಯ||
ಈ ಪ್ರಕಾರ ನನ್ನ ಈ ವಿಕರಾಳ ರೂಪನ್ನು ನೋಡಿ ನಿನಗೆ ಭಯ - ಭ್ರಾಂತಿ ಮತ್ತು ಬುದ್ಧಿಶೂನ್ಯತೆಯೂ ಉಂಟಾಗಬಾರದು. ಭಯವನ್ನು ಬಿಟ್ಟು ಪ್ರೀತಿಪೂರ್ಣ ಮನಸ್ಸಿನಿಂದ ನೀನು ಅದೇ ನನ್ನ ಈ ಶಂಖ, ಚಕ್ರ, ಗದೆ ಮತ್ತು ಪದ್ಮಗಳುಳ್ಳ ಚತುರ್ಭುಜ ರೂಪನ್ನು ಪುನಃ ನೋಡು ||೪೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  48
ನ ವೇದಯಜ್ಞಾಧ್ಯಯನೈರ್ನ ದಾನೈಃ ನ ಚ ಕ್ರಿಯಾಭಿರ್ನ ತಪೋಭಿರುಗ್ರೈಃ|
ಏವಂ ರೂಪಃ ಶಕ್ಯ ಅಹಂ ನೃಲೋಕೇ ದ್ರಷ್ಟುಂ ತ್ವದನ್ಯೇನ ಕುರುಪ್ರವೀರ ||
ಎಲೈ ಅರ್ಜುನ! ಮಾನವ ಲೋಕದಲ್ಲಿ ಈ ಪ್ರಕಾರ ವಿಶ್ವರೂಪವುಳ್ಳ ನಾನು ವೇದ ಮತ್ತು ಅಧ್ಯಯನದಿಂದಲೂ, ದಾನದಿಂದಲೂ, ಕರ್ಮ - ಕ್ರಿಯೆಗಳಿಂದಲೂ ಮತ್ತು ಉಗ್ರವಾದ ತಪಸ್ಸಿನಿಂದಲೂ ಸಹ ಕಾಣಿಸಿಕೊಳ್ಳಲಾರೆ ಹಾಗೂ ನಿನ್ನ ಹೊರತು ಬೇರೆಯವರಿಂದ ನೋಡಲಾಗುವುದಿಲ್ಲ ||೪೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  47
ಶ್ರೀ ಭಗವಾನುವಾಚ
ಮಯಾ ಪ್ರಸನ್ನೇನ ತವಾರ್ಜುನೇದಂ ರೂಪಂ ಪರಂ ದರ್ಶಿತಮಾತ್ಮಯೋಗಾತ್ |
ತೇಜೋಮಯಂ ವಿಶ್ವಮನಂತಮಾದ್ಯಂ ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಮ್ ||
ಶ್ರೀ ಕೃಷ್ಣ ಹೇಳಿದನು - ಎಲೈ ಅರ್ಜುನಾ ! ಅನುಗ್ರಹ ಪೂರ್ವಕವಾಗಿ ನಾನು ಯೋಗಶಕ್ತಿಯ ಪ್ರಭಾವದಿಂದ ಈ ನನ್ನ ಪರಮ ತೇಜೋಮಯವಾದ, ಎಲ್ಲಕ್ಕೂ ಆದಿಯಾದ ಮತ್ತು ಅನಂತವಾದ ವಿರಾಟ್ ರೂಪನ್ನು ನಿನಗೆ ತೋರಿಸಿದೆನು. ಇದನ್ನು ನಿನ್ನ ಹೊರತು ಬೇರೆ ಯಾರೂ ಮೊದಲು ನೋಡಿರಲಿಲ್ಲ ||೪೭||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  46
ಕಿರೀಟಿನಂ ಗದಿನಂ ಚಕ್ರಹಸ್ತಮ್ ಇಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ|
ತೇನೈವ ರೂಪೇಣ ಚತುರ್ಭುಜೇನ ಸಹಸ್ರಬಾಹೋ ಭವ ವಿಶ್ವಮೂರ್ತೇ||
ಕಿರೀಟಧಾರಿಯಾಗಿರುವ, ಗದೆ ಮತ್ತು ಚಕ್ರಗಳನ್ನು ಕೈಯ್ಯಲ್ಲಿ ಹಿಡಿದಿರುವ ರೀತಿಯಲ್ಲಿಯೇ ನಿನ್ನನ್ನು ನೋಡಲು ಇಚ್ಛಿಸುತ್ತೇನೆ. ಆದುದರಿಂದ, ಹೇ ವಿಶ್ವಸ್ವರೂಪಿಯೇ! ಹೇ ಸಹಸ್ರಬಾಹುವೇ! ಅದೇ ಚತುರ್ಭುಜ ರೂಪದಿಂದ ಪ್ರತ್ಯಕ್ಷನಾಗು ||೪೬||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  45
ಅದೃಷ್ಟಪೂರ್ವಂ ಹೃಷಿತೋsಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯಥಿತಂ ಮನೋ ಮೇ |
ತದೇವ ಮೇ ದರ್ಶನ ದೇವರೂಪಂ ಪ್ರಸೀದ ದೇವೇಶ ಜಗನ್ನಿವಾಸ||
ನಾನು ಈ ಮೊದಲು ನೋಡದೇ ಇದ್ದ ನಿನ್ನ ಈ ಆಶ್ಚರ್ಯಮಯ ರೂಪನ್ನು ನೋಡಿ ಸಂತೋಷಪಡುತ್ತಿದ್ದೇನೆ ಹಾಗೂ ನನ್ನ ಮನಸ್ಸು ಭಯದಿಂದ ಅತ್ಯಂತ ಗಾಬರಿಯಾಗುತ್ತಾ ಇದೆ ಪ್ರಯುಕ್ತ ನೀನು ಆ ನಿನ್ನ ಚತುರ್ಭುಜ ವಿಷ್ಣು ರೂಪನ್ನೇ ನನಗೆ ತೋರಿಸು. ಹೇ ದೇವೇಶ! ಹೇ ಜಗನ್ನಿವಾಸ ಪ್ರಸನ್ನನಾಗು ||೪೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  44
ತಸ್ಮಾತ್ ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶಮೀಡ್ಯಮ್|
ಪಿತೇವ ಪುತ್ರಸ್ಯ ಸಖೇವ ಸಖ್ಯುಃ ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಮ್ ||
ಆದ್ದರಿಂದ, ಹೇ ಪ್ರಭೋ ! ನಾನು ಶರೀರವನ್ನು ಸರಿಯಾಗಿ ನಿನ್ನ ಚರಣಗಳಲ್ಲಿಟ್ಟು ಸಾಷ್ಟಾಂಗ ವಮಸ್ಕಾರ ಮಾಡಿ ಸ್ತುತಿಸಲು ಯೋಗ್ಯನಾದ ಈಶ್ವರನೇ ನಿನ್ನನ್ನು ಪ್ರಸನ್ನನಾಗೆಂದು ಪ್ರಾರ್ಥಿಸುತ್ತೇನೆ. ಹೇ ದೇವಾ ! ತಂದೆಯು ಮಗನ,ಮಿತ್ರನು ಮಿತ್ರನ ಮತ್ತು ಪತಿಯು ಪ್ರಿಯಪತ್ನಿಯ ಅಪರಾಧವನ್ನು ಸಹಿಸಿಕೊಳ್ಳುವಂತೆ ನೀನೂ ನನ್ನ ಅಪರಾಧವನ್ನು ಸಹಿಸಿಕೊಳ್ಳಲು ತಕ್ಕವನಾಗಿರುವೆ ||೪೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  43
ಪಿತಾಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ |
ನ ತ್ವತ್ಸಮೋsಸ್ತ್ಯಭ್ಯಧಿಕಃ ಕುತೋsನ್ಯೋ ಲೋಕತ್ರಯೇsಪ್ಯಪ್ರತಿಮಪ್ರಭಾವ||
ನೀನು ಈ ಚರಾಚರಾತ್ಮಕವಾದ ಜಗತ್ತಿಗೆ ತಂದೆ ಮತ್ತು ಗುರುವಿಗಿಂತಲೂ ದೊಡ್ಡ ಗುರು ಮತ್ತು ಅತ್ಯಂತ ಪೂಜ್ಯನಾಗಿರುವೆ. ಹೇ ಅತಿಶಯ ಪ್ರಭಾವಶಾಲಿಯೇ !
ಮೂರು ಲೋಕಗಳಲ್ಲಿಯೂ ನಿನಗೆ ಸಮಾನರಾದವರು ಬೇರೆ ಯಾರೂ ಸಹ ಇರುವುದಿಲ್ಲ, ಅಂದಮೇಲೆ ನಿನಗಿಂತ ದೊಡ್ಡವರು ಹೇಗುಂಟು? ||೪೩||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  42
ಯಚ್ಚಾವಹಾಸಾರ್ಥಮಸತ್ಕೃತೋsಸಿ ವಿಹಾರಶಯ್ಯಾಸನಭೋಜನೇಷು |
ಏಕೋsಥವಾಪ್ಯಚ್ಯುತ ತತ್ಸಮಕ್ಷಂ ತತ್ಕ್ಷಾಮಯೇ ತ್ವಾಮಹಮಪ್ರಮೇಯಮ್ ||
ಮತ್ತು ಹೇ ಅಚ್ಯುತ! ಏನನ್ನು ವಿನೋದಕ್ಕಾಗಿ, ವಿಹಾರಕಾಲದ, ಮಲಗುವ, ಕುಳಿತುಕೊಳ್ಳುವ. ಮತ್ತು ಭೋಜನಾದಿ ಸಮಯಗಳಲ್ಲಿ, ಒಬ್ಬನೇ ಇರುವಾಗ ಅಥವಾ ಆ ಸ್ನೇಹಿತರ ಎದುರಿಗಾದರೂ ಸಹ ಅಪಮಾನಿಸಲ್ಪಟ್ಟಿರುವೆ. ಆ ಅಪರಾಧಗಳಿಗಾಗಿ ಅಪ್ರಮೇಯ ಸ್ವರೂಪೀ ಅರ್ಥಾತ್ ಅಚಿಂತ್ಯ ಪ್ರಭಾವವುಳ್ಳ ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ. ||೪೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  41
ಸಖೇತಿ ಮತ್ವಾ ಪ್ರಸಭಂ ಯದುಕ್ತಂ ಹೇ ಕೃಷ್ಣ ಹೇ ಮಾಧವ ಹೇ ಸಖೇತಿ|
ಅಜಾನತಾ ಮಹಿಮಾನಂ ತವೇದಂ ಮಯಾ ಪ್ರಮಾದಾತ್ಪ್ರಣಯೇನ ವಾಪಿ ||
ಮಿತ್ರನೆಂಬುದಾಗಿ ಭಾವಿಸಿಕೊಂಡು ನಿನ್ನ ಈ ಪ್ರಭಾವವನ್ನು ತಿಳಿದುಕೊಳ್ಳದೆ ನನ್ನಿಂದ ಪ್ರೇಮವಶಾತ್ ಅಥವಾ ಪ್ರಮಾದದಿಂದಲಾದರೂ ಸಹ, ಹೇ ಶ್ರೀ ಕೃಷ್ಣ ! ಓ ಯಾದವಾ ! ಹೇ ಮಿತ್ರನೇ ಈ ರೀತಿ ಏನೇನನ್ನು ದಿಟ್ಟತನದಿಂದ ಒರಟಾಗಿ ಹೇಳಲ್ಪಟ್ಟಿರುವುದೋ.........||೪೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  40
ನಮಃ ಪುರಸ್ತಾದಥ ಪೃಷ್ಠತಸ್ತೇ ನಮೋsಸ್ತು ತೇ ಸರ್ವತ ಏವ ಸರ್ವ|
ಅನಂತವೀರ್ಯಾಮಿತ ವಿಕ್ರಮಸ್ತ್ವಂ ಸರ್ವಂ ಸಮಾಪ್ನೋಷಿ ತತೋsಸಿ ಸರ್ವ ||
ಹೇ ಅನಂತ ಸಾಮರ್ಥ್ಯವುಳ್ಳವನೇ! ನಿನಗೆ ಮುಂಭಾಗದಿಂದ ಮತ್ತು ಹಿಂಭಾಗದಿಂದ ನಮಸ್ಕಾರ. ಓ ಸರ್ವಾತ್ಮನೇ! ನಿನಗೆ ಎಲ್ಲಾ ಕಡೆಗಳಿಂದಲೂ ನಮಸ್ಕಾರವಿರಲಿ. ಏಕೆಂದರೆ, ಅನಂತ ಪರಾಕ್ರಮಶಾಲಿಯಾದ ನೀನು ಇಡೀ ಜಗತ್ತನ್ನು ವ್ಯಾಪಿಸಿಕೊಂಡಿರುವೆ. ಪ್ರಯುಕ್ತ ನೀನೇ ಸರ್ವಸ್ವರೂಪಿಯಾಗಿರುವೆ||೪೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  39
ವಾಯುರ್ಯಮೋsಗ್ನಿರ್ವರುಣಃ ಶಶಾಂಕಃ ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ |
ನಮೋ ನಮಸ್ತೇsಸ್ತು ಸಹಸ್ರಕೃತ್ವಃ ಪುನಶ್ಚ ಭೂಯೋsಪಿ ನಮೋ ನಮಸ್ತೆ ||
ನೀನು ವಾಯು, ಯಮರಾಜ, ಅಗ್ನಿ, ವರುಣ, ಚಂದ್ರ, ಪ್ರಜಾಪತಿ, ಅರ್ಥಾತ್ ಬ್ರಹ್ಮ ಮತ್ತು ಬ್ರಹ್ಮನಿಗೂ ಸಹ ತಂದೆ, ನಿನಗೆ ಸಾವಿರ ಸಾರಿ ನಮಸ್ಕಾರ, ಮತ್ತೊಮ್ಮೆ ನಮಸ್ಕಾರ, ಪದೇ - ಪದೇ ನಮಸ್ಕಾರ! ನಮಸ್ಕಾರ! ||೩೯||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  38
ತ್ವಮಾದಿದೇವಃ ಪುರುಷಃ ಪುರಾಣಃ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ |
ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ ತ್ವಯಾ ತತಂ ವಿಶ್ವಮನಂತರೂಪ ||
ನೀನು ಆದಿದೇವ, ಸನಾತನ ಪುರುಷ, ಸರ್ವಜ್ಞ, ಜ್ಞೇಯವಸ್ತು ಅರ್ಥಾತ್ ತಿಳಿದುಕೊಳ್ಳಬೇಕಾದವ ಮತ್ತು ಪರಮಧಾಮ ಆಗಿರುವೆ. ಈ ಜಗತ್ತಿಗೆ ಪರಮಾಶ್ರಯ, ಹೇ ಅನಂತರೂಪನೇ! ನಿನ್ನಿಂದ ಜಗತ್ತೆಲ್ಲಾ ವ್ಯಾಪಿಸಲ್ಪಟ್ಟಿದೆ ||೩೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  37
ಕಸ್ಮಾಚ್ಚ ತೇ ನಮೇರನ್ ಮಹಾತ್ಮನ್ ಗರೀಯಸೇ ಬ್ರಹ್ಮಣೋsಪ್ಯಾದಿ ಕರ್ತ್ರೇ |
ಅನಂತ ದೇವೇಶ ಜಗನ್ನಿವಾಸ ತ್ವಮಕ್ಷರಂ ಸದಸತ್ತತ್ಪರಂ ಯತ್ ||
ಹೇ ಮಹಾತ್ಮಾ! ಬ್ರಹ್ಮನಿಗೂ ಸಹ ಆದಿಕರ್ತಾ ಮತ್ತು ಸರ್ವೋತ್ಕೃಷ್ಟವಾದ ನಿನಗೆ ಹೇಗೆ ತಾನೇ ನಮಸ್ಕರಿಸದೇ ಇರುವರು? ಏಕೆಂದರೆ, ಹೇ ಅನಂತ ! ಹೇ ದೇವೇಶ ! ಓ ಜಗನ್ನಿವಾಸ ! ಯಾರು ಸತ್ ಅಸತ್ ಮತ್ತು ಅವುಗಳಿಗಿಂತ ಆಚೆಗಿರುವ ಅಕ್ಷರ ಅರ್ಥಾತ್ ಸಚ್ಚಿದಾನಂದ ಘನ ಬ್ರಹ್ಮನಿದ್ದಾನೋ ಅವನು ನೀನೇ ಆಗಿರುವೆ ||೩೭||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  36
ಅರ್ಜುನ ಉವಾಚ
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ಪ್ರಹಷ್ಯತ್ಯನುರಜ್ಯತೇ ಚ |
ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧ ಸಂಘಾಃ ||
ಅರ್ಜುನ ಹೇಳಿದನು - ಹೇ ಅಂತರ್ಯಾಮೀ! ನಿನ್ನ ನಾಮ ಮತ್ತು ಪ್ರಭಾವಗಳ ಕೀರ್ತನೆಯಿಂದ ಜಗತ್ತು ಅತ್ಯಂತ ಹರ್ಷಪಡುತ್ತಾ ಇದೆ ಮತ್ತು ಅನುರಾಗವನ್ನೂ ಸಹ ಪಡೆಯುತ್ತಿದೆ. ರಾಕ್ಷಸರೆಲ್ಲಾ ಭಯಭೀತಿಯಿಂದ ದಿಕ್ಕಾಪಾಲಾಗಿ ಓಡುತ್ತಿದ್ದಾರೆ ಮತ್ತು ಸಿದ್ಧರ ಸಂಘ - ಸಮುದಾಯಗಳೆಲ್ಲಾ ನಮಸ್ಕಾರ ಮಾಡುತ್ತಿವೆ. ಇದು ಸರ್ವೋಚಿತವೇ ಆಗಿದೆ ||೩೬||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  35
ಸಂಜಯ ಉವಾಚ
ಏತಚ್ಛ್ರುತ್ವಾ ವಚನಂ ಕೇಶವಸ್ಯ ಕೃತಾಂಜಲಿರ್ವೇಪಮಾನಃ ಕಿರೀಟೀ|
ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ ಸಗದ್ಗದಂ ಭೀತಭೀತಃ ಪ್ರಣಮ್ಯ ||
ಸಂಜಯ ಹೇಳಿದನು - ಕೇಶವನ ಈ ಮಾತುಗಳನ್ನು ಕೇಳಿ ಕಿರೀಟಧಾರಿ ಅರ್ಜುನ ಕೈ ಜೋಡಿಸಿಕೊಂಡು ನಡುಗುತ್ತಾ ನಮಸ್ಕಾರ ಮಾಡಿ ಮತ್ತೆ - ಮತ್ತೆ ಭಯಭೀತಿಯಿಂದ ವಂದಿಸಿ ಶ್ರೀ ಕೃಷ್ಣನನ್ನು ಕುರಿತು ಗದ್ಗದ ಸ್ವರದಿಂದ ಹೇಳಿದನು-||೩೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  34
ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾನ್ಯಾನಪಿ ಯೋಧವೀರಾನ್ |
ಮಯಾ ಹತಾಂಸ್ತ್ವಂ ಜಹಿ ಮಾ ವ್ಯಥಿಷ್ಠಾ ಯುಧ್ಯಸ್ವ ಜೇತಾಸಿ ರಣೇ ಸಪತ್ನಾನ್ ||
ದ್ರೋಣಾಚಾರ್ಯರು, ಭೀಷ್ಮಪಿತಾಮಹರು, ಜಯದ್ರಥ, ಕರ್ಣ ಮತ್ತು ಇನ್ನೂ ಅನೇಕರು ನನ್ನಿಂದ ಕೊಲ್ಲಲ್ಪಟ್ಟಿದ್ದಾರೆ. ವೀರಯೋಧರುಗಳನ್ನು ನೀನು ಸಂಹಾರ ಮಾಡು : ಭಯ ಪಡಬೇಡ, ಯುದ್ಧದಲ್ಲಿ ವೈರಿಗಳನ್ನು ಜಯಿಸುವೆ ಆದ್ದರಿಂದ ಯುದ್ಧ ಮಾಡು ||೩೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  33
ತಸ್ಮಾತ್ ತ್ವಮುತ್ತಿಷ್ಠ ಯಶೋ ಲಭಸ್ವ ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಮ್ |
ಮಯೈವೈತೇ ನಿಹತಾಃ ಪೂರ್ವಮೇವ ನಿಮಿತ್ತಮಾತ್ರಂ ಭವ ಸವ್ಯಸಾಚಿನ್||
ಆದುದರಿಂದ ನೀನು ಸಿದ್ಧನಾಗಿ ನಿಲ್ಲು, ಯಶಸ್ಸನ್ನು ಗಳಿಸು, ಶತ್ರುಗಳನ್ನು ಜಯಿಸಿ ಧನ -ಧಾನ್ಯಗಳಿಂದ ಸಮೃದ್ಧವಾದ ರಾಜ್ಯಸುಖವನ್ನು ಅನುಭವಿಸು. ಈ ಎಲ್ಲಾ ವೀರಯೋಧರೂ ಮೊದಲೇ ನನ್ನಿಂದ ಕೊಲ್ಲಲ್ಪಟ್ಟಿದ್ದಾರೆ. ಎಲೈ ಸವ್ಯಸಾಚಿಯೇ ! ನೀನು ನಿಮಿತ್ತಮಾತ್ರನಾಗು ||೩೩||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  32
ಶ್ರೀ ಭಗವಾನುವಾಚ
ಕಾಲೋsಸ್ಮಿ ಲೋಕಕ್ಷಯಕೃತ್ಪ್ರವೃದ್ಧೋ ಲೋಕಾನ್ಸಮಾಹರ್ತುಮಿಹ ಪ್ರವೃತ್ತಃ |
ಋತೇsಪಿ ತ್ವಾಂ ನ ಭವಿಷ್ಯಂತಿ ಸರ್ವೇ ಯೇsವಸ್ಥಿತಾಃ ಪ್ರತ್ಯನೀಕೇಷು ಯೋಧಾಃ ||
ಶ್ರೀ ಕೃಷ್ಣ ಹೇಳಿದನು - ಲೋಕಗಳನ್ನು ನಾಶಮಾಡಲು ಮುನ್ನುಗ್ಗುವ ಮಹಾಕಾಲ ನಾನಾಗಿರುವೆನು. ಈಗ ಈ ಲೋಕಗಳನ್ನು ನಾಶಮಾಡುವುದಕ್ಕಾಗಿ ತೊಡಗಿದ್ದೇನೆ ಪ್ರಯುಕ್ತ ಎದುರು ಪಕ್ಷದ ಸೈನ್ಯದಲ್ಲಿ ಯಾವ ಯೋಧರಿರುವರೋ ಅವರೆಲ್ಲರೂ ನಿನ್ನ ಹೊರತೂ ಸಹ ಉಳಿಯುವುದಿಲ್ಲ : ಅರ್ಥಾತ್ ನೀನು ಯುದ್ಧ ಮಾಡದಿದ್ದರೂ ಸಹ ಇವರೆಲ್ಲರೂ ನಾಶವಾಗಿ ಹೋಗುವರು ||೩೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  31
ಆಖ್ಯಾಹಿ ಮೇ ಕೋ ಭವಾನುಗ್ರರೂಪೋ ನಮೋsಸ್ತು ತೇ ದೇವವರ ಪ್ರಸೀದ |
ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ ನ ಹಿ ಪ್ರಜಾನಾಮಿ ತವ ಪ್ರವೃತ್ತಿಮ್ ||
ಉಗ್ರರೂಪಿಯಾದ ನೀನು ಯಾರು? ನನಗೆ ಹೇಳು. ಹೇ ದೇವಶ್ರೇಷ್ಠನೇ! ನಿನಗೆ ಇದೋ ನಮಸ್ಕಾರಗಳು, ಪ್ರಸನ್ನನಾಗು, ಆದಿ ಪುರುಷನಾದ ನಿನ್ನನ್ನು ಯಥಾರ್ಥವಾಗಿ ತಿಳಿದುಕೊಳ್ಳಲು ಇಚ್ಛಿಸುತ್ತೇನೆ. ಏಕೆಂದರೆ ನಿನ್ನ ಪ್ರವೃತ್ತಿಯನ್ನು ನಾನು ತಿಳಿಯೆನು ||೩೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  30
ಲೇಲಿಹ್ಯಸೇ ಗ್ರಸಮಾನಃ ಸಮಂತಾತ್ ಲೋಕಾನ್ ಸಮಗ್ರಾನ್ವದನೈರ್ಜ್ವಲದ್ಭಿಃ |
ತೇಜೋಭಿರಾಪೂರ್ಯ ಜಗತ್ಸಮಗ್ರಂ ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ ||
ನೀನು ಸಮಸ್ತ ಲೋಕಗಳನ್ನೂ ಪ್ರಜ್ವಲಿಸುವ ನಿನ್ನ ಮುಖಗಳಿಂದ ನುಂಗುತ್ತಾ ಎಲ್ಲಾ ಕಡೆಗಳಿಂದಲೂ ಚಪ್ಪರಿಸುತ್ತಿರುವೆ. ಹೇ ವಿಷ್ಣು ಪರಮಾತ್ಮ! ನಿನ್ನ ಉಗ್ರವಾದ ಪ್ರಕಾಶವು ತೇಜಸ್ಸಿನಿಂದ ತುಂಬಿಕೊಂಡು ಇಡೀ ಜಗತ್ತನ್ನು ದಹಿಸುತ್ತಿದೆ. ||೩೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  29
ಯಥಾ ಪ್ರದೀಪ್ತಂ ಜ್ವಲನಂ ಪತಂಗಾ ವಿಶಂತಿ ನಾಶಾಯ ಸಮೃದ್ಧವೇಗಾಃ|
ತಥೈವ ನಾಶಾಯ ವಿಶಂತಿ ಲೋಕಾಃ ತವಾಪಿ ವಕ್ತ್ರಾಣಿ ಸಮೃದ್ಧವೇಗಾಃ ||
ಹೇಗೆ ಪತಂಗಗಳು ಮೋಹವಶದಿಂದ ನಾಶಹೊಂದುವದಕ್ಕಾಗಿಯೇ ಅತ್ಯಂತ ವೇಗದಿಂದ ಪ್ರಜ್ವಲಿಸುವ ಅಗ್ನಿಯಲ್ಲಿ ಪ್ರವೇಶಿಸುತ್ತವೆಯೋ ಹಾಗೆಯೇ ಈ ಜನರೆಲ್ಲರೂ ಸಹ ತಮ್ಮ ನಾಶಕ್ಕಾಗಿಯೇ ನಿನ್ನ ಮುಖಗಳಲ್ಲಿ ಅತಿವೇಗವಾಗಿ ಪ್ರವೇಶಿಸುತ್ತಿದ್ದಾರೆ ||೨೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  28
ಯಥಾ ನದೀನಾಂ ಬಹವೋsಂಬುವೇಗಾಃ ಸಮುದ್ರಮೇವಾಭಿಮುಖಾ ದ್ರವಂತಿ|
ತಥಾ ತವಾಮೀ ನರಲೋಕವೀರಾ ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ ||
ಹೇಗೆ ನದಿಗಳ ಬಹಳ ಜಲಪ್ರವಾಹಗಳು ಸಮುದ್ರಕ್ಕೆ ಅಭಿಮುಖವಾಗಿಯೇ ಓಡುತ್ತವೆಯೋ ಅರ್ಥಾತ್ ಸಮುದ್ರದಲ್ಲಿ ಪ್ರವೇಶ ಮಾಡುತ್ತವೆಯೋ ಹಾಗೆಯೇ ಆ ವೀರರಾದ ಮನುಷ್ಯರ ಸಮುದಾಯವೂ ಸಹ ಪ್ರಜ್ವಲಿಸುತ್ತಿರುವ ನಿನ್ನ ಮುಖಗಳಲ್ಲಿ ಪ್ರವೇಶಿಸುತ್ತಾ ಇವೆ
||೨೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  27
ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ ದಂಷ್ಟ್ರಾಕರಾಲಾನಿ ಭಯಾನಕಾನಿ|
ಕೇಚಿದ್ವಿಲಗ್ನಾ ದಶನಾಂತರೇಷು ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈಃ ||
ನಿನ್ನ ಕೋರೆದಾಡೆಗಳಿಂದ ವಿಕರಾಳವಾದ ಭಯಂಕರ ಮುಖಗಳಲ್ಲಿ ಬಹು ವೇಗವಾಗಿ ಪ್ರವೇಶಿಸುತ್ತಿದ್ದಾರೆ. ಕೆಲವರಂತೂ ಚೂರು - ಚೂರಾದ ತಲೆಗಳ ಸಹಿತ ನಿನ್ನ ಹಲ್ಲುಗಳ ಸಂದುಗಳಲ್ಲಿ ಸಿಕ್ಕಿ ಹಾಕಿಕೊಂಡಿರುವಂತೆ ಕಾಣುತ್ತಿದ್ದಾರೆ
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  26
ಅಮೀ ಚ ತ್ವಾಂ ಧೃತರಾಷ್ಟ್ರಸ್ಯ ಪುತ್ರಾಃ ಸರ್ವೇ ಸಹೈವಾವನಿಪಾಲಸಂಘೈಃ|
ಭೀಷ್ಮೋ ದ್ರೋಣಃ ಸೂತಪುತ್ರಸ್ತಥಾಸೌ ಸಹಾಸ್ಮದೀಯೈರಪಿ ಯೋಧಮುಖ್ಯೈಃ ||
ಧೃತರಾಷ್ಟ್ರನ ಆ ಸಮಸ್ತ ಪುತ್ರರೆಲ್ಲಾ ರಾಜರುಗಳ ಸಮುದಾಯದ ಸಹಿತ ನಿನ್ನಲ್ಲಿ ಪ್ರವೇಶಿಸುತ್ತಿದ್ದಾರೆ ಮತ್ತು ಭೀಷ್ಮ ಪಿತಾಮಹರು, ದ್ರೋಣಾಚಾರ್ಯರು ಹಾಗೂ ಕರ್ಣನೂ ಮತ್ತು ನಮ್ಮ ಪಕ್ಷದವರೂ ಸಹ ಪ್ರಮುಖ ಯೋಧರ ಸಹಿತ ಎಲ್ಲರೂ - ||೨೬||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  25
ದಂಷ್ಟ್ರಾಕರಾಲಾನಿ ಚ ತೇ ಮುಖಾನಿ ದೃಷ್ಟ್ವೈವ ಕಾಲಾನಲಸನ್ನಿಭಾನಿ |
ದಿಶೋ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗನ್ನಿವಾಸ ||
ನಿನ್ನ ವಿಕರಾಳ ಕೋರೆದಾಡೆಗಳನ್ನು ಮತ್ತು ಪ್ರಳಯಾಗ್ನಿಯಂತೆ ಪ್ರಜ್ವಲಿಸುವ ಮುಖಗಳನ್ನು ನೋಡಿ ದಿಕ್ಕುಗಳನ್ನು ಕಾಣದಾಗಿದ್ದೇನೆ ಮತ್ತು ನೆಮ್ಮದಿಯನ್ನು ಸಹ ಪಡೆಯುತ್ತಾ ಇಲ್ಲ. ಆದುದರಿಂದ, ಹೇ ದೇವೇಶ! ಓ ಜಗನ್ನಿವಾಸ! ಪ್ರಸನ್ನನಾಗು
||೨೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  24
ನಭಃಸ್ಪೃಶಂ ದೀಪ್ತಮನೇಕವರ್ಣಂ ವ್ಯಾತ್ತಾನನಂ ದೀಪ್ತವಿಶಾಲನೇತ್ರಂ |
ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾಂತರಾತ್ಮಾ ಧೃತಿಂ ನ ವಿಂದಾಮಿ ಶಮಂ ಚ ವಿಷ್ಣೋ ||
ಏಕೆಂದರೆ, ಓ ವಿಷ್ಣು ಪರಮಾತ್ಮನೇ! ಆಕಾಶವನ್ನು ಸ್ಪರ್ಶಿಸಿರುವವನೂ, ತೇಜೋಮಯನೂ, ಅನೇಕ ವರ್ಣಗಳುಳ್ಳವನೂ, ವಿಶಾಲವಾದ ತೆರೆದ ಬಾಯಿಗಳುಳ್ಳವನೂ, ಪ್ರಕಾಶಮಾನವಾದ ವಿಶಾಲ ಕಣ್ಣುಗಳುಳ್ಳವನೂ ಆದ ನಿನ್ನನ್ನು ನೋಡಿ ಭಯಭೀತಿಯ ಮನಸ್ಸುಳ್ಳ ನಾನು ಧೈರ್ಯ ಮತ್ತು ಶಾಂತಿಗಳಿಲ್ಲದವನಾಗಿದ್ದೇನೆ ||೨೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  23
ರೂಪಂ ಮಹತ್ತೇ ಬಹುವಕ್ತ್ರನೇತ್ರಂ ಮಹಾಬಾಹೋ ಬಹುಬಾಹೂರುಪಾದಮ್ |
ಬಹೂದರಂ ಬಹುದಂಷ್ಟ್ರಾಕರಾಲಂ ದೃಷ್ಟ್ವಾ ಲೋಕಾಃ ಪ್ರವ್ಯಥಿತಾಸ್ತಥಾಹಮ್ ||
ಹೇ ಮಹಾಬಾಹುವೇ! ಅನೇಕ ಮುಖಗಳೂ, ಕಣ್ಣುಗಳೂ, ಅನೇಕ ಕೈಗಳೂ, ತೊಡೆಗಳೂ ಮತ್ತು ಕಾಲುಗಳೂ, ಅನೇಕ ಉದರಗಳೂ, ಅನೇಕ ವಿಕರಾಳ ಕೋರೆದಾಡೆಗಳೂ ಉಳ್ಳ ನಿನ್ನ ಮಹತ್ತಾದ ರೂಪವನ್ನು ನೋಡಿ ಲೋಕಗಳೆಲ್ಲಾ ಭಯಭೀತರಾಗುತ್ತಿದ್ದಾರೆ. ಜೊತೆಗೆ ನನಗೂ ಸಹ ಭಯವಾಗುತ್ತಿದೆ.
||೨೩||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  22
ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾ ವಿಶ್ವೇsಶ್ವಿನೌ ಮರುತಶ್ಚೋಷ್ಮ ಪಾಶ್ಚ|
ಗಂಧರ್ವಯಕ್ಷಾಸುರ ಸಿದ್ಧಸಂಘಾ ವೀಕ್ಷಂತೇ ತ್ವಾಂ ವಿಸ್ಮಿತಾಶ್ಚೈವ ಸರ್ವೇ ||
ಏಕಾದಶ ರುದ್ರರು, ದ್ವಾದಶ ಆದಿತ್ಯರು, ಅಷ್ಟವಸುಗಳು, ಸಾಧ್ಯರ ಗಣಗಳು, ವಿಶ್ವೇದೇವ, ಅಶ್ವಿನೀಕುಮಾರರು, ಮರುದ್ಗಣಗಳು, ಪಿತೃಸಮುದಾಯ, ಗಂಧರ್ವ, ಯಕ್ಷ, ರಾಕ್ಷಸ ಮತ್ತು ಸಿದ್ಧರ ಸಮುದಾಯ ಇವುಗಳೆಲ್ಲವೂ ಆಶ್ಚರ್ಯಭರಿತರಾಗಿ ನಿನ್ನನ್ನು ನೋಡುತ್ತಾರೆ ||೨೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  21
ಅಮೀ ಹಿ ತ್ವಾಂ ಸುರಸಂಘಾ ವಿಶಂತಿ ಕೇಚಿದ್ಭೀತಾಃ ಪ್ರಾಂಜಲಯೋ ಗೃಣಂತಿ |
ಸ್ವಸ್ತೀತ್ಯುಕ್ತ್ವಾ ಮಹರ್ಷಿಸಿದ್ಧಸಂಘಾಃ ಸ್ತುವಂತಿ ತ್ವಾಂ ಸ್ತುತಿಭಿಃ ಪುಷ್ಕಲಾಭಿಃ ||೨೧||
ಆ ದೇವತಾ ಸಮೂಹಗಳು ನಿನ್ನಲ್ಲಿ ಪ್ರವೇಶಿಸುತ್ತಾ ಇವೆ. ಕೆಲವರು ಭಯಭೀತರಾಗಿ ಕೈ ಜೋಡಿಸಿಕೊಂಡು ನಿನ್ನ ನಾಮ ಮತ್ತು ಗುಣಗಳನ್ನು ಸ್ಮರಿಸುತ್ತಾರೆ. ಮಹರ್ಷಿಗಳ ಮತ್ತು ಸಿದ್ಧರ ಸಮುದಾಯಗಳು ಮಂಗಳವಾಗಲಿ ಎಂಬುದಾಗಿ ಹೇಳಿ ಉತ್ಕ್ರಷ್ಟವಾದ ಸ್ತೋತ್ರಗಳ ಮೂಲಕ ನಿನ್ನನ್ನು ಸ್ತೋತ್ರ ಮಾಡುತ್ತಾರೆ ||೨೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  20
ದ್ಯಾವಾಪೃಥಿವ್ಯೋರಿದಮಂತರಂ ಹಿ ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ|
ದೃಷ್ಟಾದ್ಭುತಂ ರೂಪಮುಗ್ರಂ ತವೇದಂ ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್ ||
ಓ ಮಹಾತ್ಮ! ಈ ಸ್ವರ್ಗ ಮತ್ತು ಭೂಮಿಯ ಮಧ್ಯದ ಪೂರ್ಣ ಆಕಾಶ ಹಾಗೂ ಎಲ್ಲಾ ದಿಕ್ಕುಗಳೂ ನಿನ್ನೊಬ್ಬನಿಂದಲೇ ಪರಿಪೂರ್ಣವಾಗಿದೆ. ನಿನ್ನ ಈ ಅಲೌಕಿಕ ಮತ್ತು ಭಯಂಕರ ರೂಪನ್ನು ನೋಡಿ ಮೂರು ಲೋಕಗಳೂ ಬಹಳ ಭೀತಿಗೊಂಡಿವೆ ||೨೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  19
ಅನಾದಿಮಧ್ಯಾಂತಮನಂತವೀರ್ಯ-ಮ್ ಅನಂತಬಾಹುಂ ಶಶಿಸೂರ್ಯನೇತ್ರಮ್ |
ಪಶ್ಯಾಮಿ ತ್ವಾಂ ದೀಪ್ತಹುತಾಶವಕ್ತ್ರಂ ಸ್ವತೇಜಸಾ ವಿಶ್ವಮಿದಂ ತಪಂತಮ್||
ಆದಿ, ಮಧ್ಯ ಮತ್ತು ಅಂತ್ಯಗಳಿಲ್ಲದವನೂ, ಅನಂತ ಸಾಮರ್ಥ್ಯವುಳ್ಳವನೂ, ಅನಂತ ಕೈಗಳುಳ್ಳವನೂ, ಚಂದ್ರ - ಸೂರ್ಯರೇ ಕಣ್ಣುಗಳಾಗಿ ಉಳ್ಳವನೂ, ಪ್ರಜ್ವಲಿಸುವ ಅಗ್ನಿರೂಪೀ ಮುಖವುಳ್ಳವನೂ ಮತ್ತು ನಿನ್ನ ತೇಜಸ್ಸಿನಿಂದಲೇ ಈ ಜಗತ್ತಿಗೆ ತಾಪವನ್ನು ಕೊಡುತ್ತಿರುವ ನಿನ್ನನ್ನು ನೋಡುತ್ತಿದ್ದೇನೆ ||೧೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  18
ತ್ವಮಕ್ಷರಂ ಪರಮಂ ವೇದಿತವ್ಯಂ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್|
ತ್ವಮವ್ಯಯಃ ಶಾಶ್ವತಧರ್ಮಗೋಪ್ತಾ ಸನಾತನಸ್ತ್ವಂ ಪುರುಷೋ ಮತೋ ಮೇ ||
ತಿಳಿದುಕೊಳ್ಳಲೇ ಬೇಕಾದಂತಹ ಪರಮ ಅಕ್ಷರ ಅರ್ಥಾತ್ ಪರಬ್ರಹ್ಮ ಪರಮಾತ್ಮನು ನೀನೇ, ಈ ಜಗತ್ತಿಗೆ ಪರಮ ಆಶ್ರಯವೂ ನೀನೇ, ಅನಾದಿ ಧರ್ಮ ಸಂರಕ್ಷಕ ನೀನೇ ಮತ್ತು ಅವಿನಾಶೀ ಸನಾತನ ಪುರುಷನೂ ನೀನೇ ಎಂದು ನನ್ನ ಅಭಿಪ್ರಾಯ ||೧೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  17
ಕಿರೀಟಿನಂ ಗದಿನಂ ಚಕ್ರಿಣಂ ಚ ತೇಜೋರಾಶಿಂ ಸರ್ವತೋ ದೀಪ್ತಿಮಂತಮ್ |
ಪಶ್ಯಾಮಿ ತ್ವಾಂ ದುರ್ನಿರೀಕ್ಷ್ಯಂ ಸಮಂತಾತ್ ದೀಪ್ತಾನಲಾರ್ಕದ್ಯುತಿಮಪ್ರಮೇಯ-ಮ್ ||
ಕಿರೀಟ, ಗದೆ ಮತ್ತು ಚಕ್ರ ಇತ್ಯಾದಿಗಳನ್ನು ಧರಿಸಿರುವ,ಎಲ್ಲೆಲ್ಲಿಯೂ ಪ್ರಕಾಶಮಯವಾದ ತೇಜಃಪುಂಜಗಳು ಪ್ರಜ್ವಲಿಸುವ, ಅಗ್ನಿ ಮತ್ತು ಸೂರ್ಯರಂತಹ ಜ್ಯೋತಿಗಳಿಂದ ಕೂಡಿರುವ ನೋಡಲು ಅಸಾಧ್ಯವಾದ, ಅಪ್ರಮೇಯ ಸ್ವರೂಪಿಯಾದ ನಿನ್ನನ್ನು ಎಲ್ಲಾ ಕಡೆಗಳಿಂದಲೂ ನೋಡುತ್ತಿದ್ದೇನೆ ||೧೭||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  16
ಅನೇಕಬಾಹೂದರವಕ್ತ್ರನೇತ್ರಂ ಪಶ್ಯಾಮಿ ತ್ವಾಂ ಸರ್ವತೋsನಂತರೂಪಮ್ |
ಪಶ್ಯಾಮಿ ನ ಮಧ್ಯಂ ನ ಪುನಸ್ತವಾದಿಂ ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ||
ಹೇ ವಿಶ್ವೇಶ್ವರ! ಅನೇಕ ಕೈಗಳೂ, ಉದರಗಳೂ, ಮುಖಗಳೂ, ಮತ್ತು ಕಣ್ಣುಗಳೂ ಉಳ್ಳವನಾಗಿ ಎಲ್ಲಾ ಕಡೆಗಳಿಂದಲೂ ಅನಂತರೂಪಗಳುಳ್ಳವನಾದ ನಿನ್ನನ್ನು ನೋಡುತ್ತಿದ್ದೇನೆ. ಹೇ ವಿಶ್ವರೂಪನೇ! ನಿನ್ನ ಅಂತ್ಯವೂ ಕಾಣಿಸುತ್ತಾ ಇಲ್ಲ, ಮಧ್ಯವೂ ಮತ್ತು ಆದಿಯೂ ಸಹ ಕಾಣಿಸುತ್ತಾ ಇಲ್ಲ ||೧೬||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  15
ಅರ್ಜುನ ಉವಾಚ
ಪಶ್ಯಾಮಿ ದೇವಾಂಸ್ತವ ದೇವ ದೇಹೇ ಸರ್ವಾಂಸ್ತಥಾ ಭೂತವಿಶೇಷಸಂಘಾನ್ |
ಬ್ರಹ್ಮಾಣಮೀಶಂ ಕಮಲಾಸನಸ್ಥಮ್ ಋಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್ ||
ಅರ್ಜುನ ಹೇಳಿದನು- ಹೇ ದೇವ! ನಿನ್ನ ಶರೀರದಲ್ಲಿ ಎಲ್ಲಾ ದೇವತೆಗಳನ್ನೂ ಹಾಗೂ ಅನೇಕ ಜೀವ ಸಮುದಾಯಗಳನ್ನೂ, ಕಮಲಾಸನದಲ್ಲಿ ಕುಳಿತಿರುವ ಬ್ರಹ್ಮನನ್ನೂ, ಮಹಾದೇವನನ್ನೂ ಮತ್ತು ಎಲ್ಲಾ ಋಷಿಗಳನ್ನೂ ಹಾಗೂ ದಿವ್ಯವಾದ ಸರ್ಪಗಳನ್ನೂ ನೋಡುತ್ತಿದ್ದೇನೆ ||೧೫||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  14
ತತಃ ಸ ವಿಸ್ಮಯಾವಿಷ್ಟೋ ಹೃಷ್ಟರೋಮಾ ಧನಂಜಯಃ |
ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ ||
ಅನಂತರ ಆಶ್ಚರ್ಯಭರಿತನಾಗಿ ಹರ್ಷದಿಂದ ರೋಮಾಂಚನಗೊಂಡ ಆ ಅರ್ಜುನನು ವಿಶ್ವರೂಪೀ ಪರಮಾತ್ಮನಿಗೆ ಶ್ರದ್ಧಾ ಭಕ್ತಿ ಸಹಿತ ಶಿರಸಾಷ್ಟಾಂಗ ನಮಸ್ಕಾರ ಮಾಡಿ ಕೈ ಜೋಡಿಸಿಕೊಂಡು ಹೇಳಿದನು-
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  13
ತತ್ರೈಕಸ್ಥಂ ಜಗತ್ಕೃತ್ಸ್ನಂ ಪ್ರವಿಭಕ್ತಮನೇಕಧಾ |
ಅಪಶ್ಯದ್ದೇವದೇವಸ್ಯ ಶರೀರೇ ಪಾಂಡವಸ್ತದಾ ||
ಪಾಂಡುಪುತ್ರ ಅರ್ಜುನನು ಆ ಸಮಯದಲ್ಲಿ ಅನೇಕ ಪ್ರಕಾರಗಳಿಂದ ವಿಭಕ್ತವಾಗಿರುವ ಅರ್ಥಾತ್ ಬೇರೆ ಬೇರೆಯಾಗಿರುವ ಸಮಸ್ತ ಜಗತ್ತನ್ನು ಆ ದೇವಾದಿದೇವನಾದ ಶ್ರೀ ಕೃಷ್ಣನ ಶರೀರದಲ್ಲಿ ಒಂದೇ ಕಡೆಯಲ್ಲಿರುವುದನ್ನು ನೋಡಿದನು ||೧೩||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  12
ದಿವಿ ಸೂರ್ಯಸಹಸ್ರಸ್ಯ ಭವೇದ್ಯುಗಪದುತ್ಥಿತಾ |
ಯದಿ ಭಾಃ ಸದೃಶೀ ಸಾ ಸ್ಯಾತ್
ಭಾಸಸ್ತಸ್ಯ ಮಹಾತ್ಮನಃ ||
ಸಾವಿರ ಸೂರ್ಯರು ಒಂದೇ ಸಾರಿ ಉದಿಸಿದರೆ ಯಾವ ಪ್ರಕಾಶವು ಉಂಟಾಗುವುದೋ ಅದೂ ವಿಶ್ವರೂಪೀ ಪರಮಾತ್ಮನ ಪ್ರಕಾಶಕ್ಕೆ ಸರಿಸಮಾನ ಬಹುಶಃ ಆದೀತು
||೧೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  11
ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಮ್ |
ಸರ್ವಾಶ್ಚರ್ಯಮಯಂ ದೇವಮ್
ಅನಂತಂ ವಿಶ್ವತೋಮುಖಮ್ ||
ದಿವ್ಯವಾದ ಹಾರ ಮತ್ತು ವಸ್ತ್ರಗಳನ್ನು ಧರಿಸಿಕೊಂಡಿರುವ ದಿವ್ಯ ಗಂಧವನ್ನು ಲೇಪಿಸಿಕೊಂಡಿರುವ, ಎಲ್ಲಾ ಪ್ರಕಾರದ ಆಶ್ಚರ್ಯಗಳಿಂದ ಕೂಡಿರುವ, ಅನಂತನೂ ಮತ್ತು ಸರ್ವತೋಮುಖದ ವಿರಾಟ್ ಸ್ವರೂಪೀ ಪರಮದೇವ ಪರಮೇಶ್ವರನನ್ನು ಅರ್ಜುನನು ನೋಡಿದನು ||೧೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  10
ಅನೇಕವಕ್ತ್ರನಯನಮ್ ಅನೇಕಾದ್ಭುತದರ್ಶನಮ್ |
ಅನೇಕದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್ ||
ಅನೇಕ ಮುಖಗಳು ಮತ್ತು ಕಣ್ಣುಗಳಿಂದ ಕೂಡಿರುವ ಅನೇಕ ಅದ್ಭುತವಾದ ದರ್ಶನಗಳುಳ್ಳ, ಅನೇಕ ದಿವ್ಯಾಭರಣಗಳಿಂದ ಅಲಂಕೃತವಾದ ಬಹಳ ದಿವ್ಯಾಯುಧಗಳನ್ನು ಕೈಯಲ್ಲಿ ಎತ್ತಿ ಹಿಡಿದು -- ||೧೦||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  9
ಏವಮುಕ್ತ್ವಾ ತತೋ ರಾಜನ್ ಮಹಾಯೋಗೇಶ್ವರೋ ಹರಿಃ |
ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಮ್ ||
ಸಂಜಯ ಹೇಳಿದನು - ಎಲೈ ರಾಜಾ! ಮಹಾಯೋಗೇಶ್ವರನಾದ ಪಾಪನಾಶಕ ಭಗವಂತನು ಈ ರೀತಿ ಹೇಳಿದ ನಂತರ ಅರ್ಜುನನಿಗೆ ಅಲೌಕಿಕವಾದ ಐಶ್ವರ್ಯರ್ಯುಕ್ತ ದಿವ್ಯ ಸ್ವರೂಪವನ್ನು ತೋರಿಸಿದನು ||೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  8
ನ ತು ಮಾಂ ಶಕ್ಯಸೇ ದ್ರಷ್ಟುಮ್ ಅನೇನೈವ ಸ್ವಚಕ್ಷುಷಾ |
ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಮ್ ||
ಆದರೆ ನನ್ನನ್ನು ಈ ನಿನ್ನ ನೈಸರ್ಗಿಕ ನೋಡಲು ಸಮರ್ಥನಲ್ಲ. ಪ್ರಯುಕ್ತ ನಿನಗೋಸ್ಕರ ಅಲೌಕಿಕವಾದ ದೃಷ್ಟಿಯನ್ನು ಕೊಡುತ್ತೇನೆ. ಅವುಗಳಿಂದ ನೀನು ನನ್ನ ಪ್ರಭಾವವನ್ನೂ, ಈಶ್ವರೀಯ ಯೋಗಶಕ್ತಿಯನ್ನು ನೋಡು||೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  7.
ಇಹೈಕಸ್ಥಂ ಜಗತ್ಕೃತ್ಸ್ನಂ ಪಶ್ಯಾದ್ಯ ಸಚರಾಚರಮ್ |
ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ ದ್ರಷ್ಟುಮಿಚ್ಛಸಿ ||
ಎಲೈ ಅರ್ಜುನನೇ ! ಈಗ ಈ ನನ್ನ ಶರೀರದಲ್ಲಿ ಒಂದೆಡೆ ಸ್ಥಿತವಾಗಿರುವ ಚರಾಚರಾಸಹಿತ ಸಂಪೂರ್ಣ ಜಗತ್ತನ್ನು ನೋಡು. ಹಾಗೆಯೇ ಇನ್ನು ಏನೇನನ್ನು ನೋಡಲು ಇಚ್ಚಿಸುವೆಯೋ ಅದನ್ನೂ ನೋಡು.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  6
ಪಶ್ಯಾದಿತ್ಯಾನ್ವಸೂನ್ ರುದ್ರಾನಶ್ವಿನೌ ಮರುತಸ್ತಥಾ |
ಬಹೂನ್ಯದೃಷ್ಟಪೂರ್ವಾಣಿ ಪಶ್ಯಾಶ್ಚರ್ಯಾಣಿ ಭಾರತ ||
ಎಲೈ ಭರತವಂಶೀ ಅರ್ಜುನಾ ! ನನ್ನಲ್ಲಿ ಅದಿತಿಯ ಹನ್ನೆರಡು ಪುತ್ರರನ್ನು, ಎಂಟು ವಸ್ತುಗಳನ್ನು ಹನ್ನೊಂದು ರುದ್ರರನ್ನು, ಇಬ್ಬರು ಅಶ್ವಿನೀ ದೇವತೆಗಳನ್ನು ಮತ್ತು ನಲವತ್ತೊಂಭತ್ತು ಮರುದ್ಗಣರನ್ನು, ಹಾಗೆಯೇ ಈ ಹಿಂದೆ ನೋಡದಿರುವ ಆಶ್ಚರ್ಯಮಯ ರೂಪಗಳನ್ನು ನೋಡು.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  5
ಶ್ರೀ ಭಗವಾನುವಾಚ
ಪಶ್ಯ ಮೇ ಪಾರ್ಥ ರೂಪಾಣಿ ಶತಶೋಥ ಸಹಸ್ರಶಃ |
ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ||
ಶ್ರೀ ಭಗವಂತನು ಹೇಳಿದನು-ಎಲೈ ಪಾರ್ಥ ! ಈಗ ನೀನು ನನ್ನ ನೂರಾರು, ಸಾವಿರಾರು ನಾನಾ ಪ್ರಕಾರದ ಬಗೆಬಗೆಯ ಬಣ್ಣ ಮತ್ತು ಆಕಾರಗಳುಳ್ಳ ಅಲೌಕಿಕ ರೂಪಗಳನ್ನು ನೋಡು.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  4
ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ |
ಯೋಗೇಶ್ವರ ತತೋ ಮೇ ತ್ವಂ ದರ್ಶಯಾತ್ಮಾನಮವ್ಯಯಮ್ ||
ಹೇ ಪ್ರಭೋ ! ನಿನ್ನ ಆ ರೂಪವನ್ನು ನಾನು ನೋಡಬಲ್ಲೆ ಎಂದು ನಿನಗೆ ಅನಿಸಿದರೆ ಎಲೈ ಯೋಗೇಶ್ವರಾ ! ಆ ಅವಿನಾಶಿ ಸ್ವರೂಪವನ್ನು ನನಗೆ ದರ್ಶನ ಮಾಡಿಸು
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  3
ಏವಮೇತದ್ಯಥಾತ್ಥ ತ್ವಮಾತ್ಮಾನಂ ಪರಮೇಶ್ವರ |
ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಪೋತ್ತಮ ||
ಎಲೈ ಪರಮೇಶ್ವರನೇ ! ನೀನು ತನ್ನ ವಿಷಯದಲ್ಲಿ ಹೇಳಿದುದು ಸರಿಯಾಗಿ ಹಾಗೆಯೇ ಇದೆ. ಆದರೆ ಪುರುಷೋತ್ತಮಾ ! ನಿನ್ನ ಜ್ಞಾನ, ಐಶ್ವರ್ಯ, ಶಕ್ತಿ, ಬಲ, ವೀರ್ಯ ಹಾಗೂ ತೇಜಸ್ಸಿನಿಂದ ಕೂಡಿದ ಈಶ್ವರೀ ಸ್ವರೂಪವನ್ನು ನಾನು ಪ್ರತ್ಯಕ್ಷವಾಗಿ ನೋಡಬಯಸುತ್ತೇನೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  2
ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ |
ತ್ವತಃ ಕಮಲಪತ್ರಾಕ್ಷ ಮಹಾತ್ಮ್ಯ ಮಪಿ ಚಾವ್ಯಯಮ್ ||
ಏಕೆಂದರೆ ಎಲೈ ಕಮಲನಯನನೇ ! ನಾನು ನಿನ್ನಿಂದ ಪ್ರಾಣಿಗಳ ಉತ್ಪತ್ತಿ ಮತ್ತು ಪ್ರಳಯವನ್ನು ವಿಸ್ತಾರವಾಗಿ ಕೇಳಿರುವೆ. ಹಾಗೆಯೇ ನಿನ್ನ ಅವಿನಾಶೀ ಮಹಿಮೆಯನ್ನು ಕೇಳಿರುವೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  11
ಶ್ಲೋಕ  1
ವಿಶ್ವರೂಪದರ್ಶನಯೋಗ
ಅರ್ಜನ ಉವಾಚ
ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಮ್ |
ಯತ್ತ್ವಯೋಕ್ತಂ ವಚಸ್ತೇನ ಮೋಹೋಯಂ ವಿಗತೋ ಮಮ ||
ಅರ್ಜುನ ಹೇಳಿದನು- ನನ್ನನ್ನು ಅನುಗ್ರಹಿಸಲು ನೀನು ಮಾಡಿದ ಪರಮ ಗುಪ್ತ ಆಧ್ಯಾತ್ಮಿಕ ಉಪದೇಶದಿಂದ ನನ್ನ ಈ ಅಜ್ಞಾನವು ದೂರವಾಯಿತು.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  42
ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ |
ವಿಷ್ಟಭ್ಯಾಹಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್ ||
ಎಲೈ ಅರ್ಜುನ! ಇದಲ್ಲದೆ ಇದಕ್ಕಿಂತ ಹೆಚ್ಚೆಚ್ಚು ತಿಳಿಯುವುದರಿಂದ ನಿನಗೆ ಯಾವ ಪ್ರಯೋಜನವೂ ಇಲ್ಲ. ನಾನು ಈ ಜಗತ್ತನ್ನು ನನ್ನ ಯೋಗಶಕ್ತಿಯ ಕೇವಲ ಒಂದಂಶದಿಂದ ಧರಿಸಿಕೊಂಡಿದ್ದೇನೆ.
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸೂಪಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ರ್ತೇ ಶ್ರೀಕೃಷ್ಣಾರ್ಜುನ ಸಂವಾದೇ ವಿಭೂತಿಯೋಗೋ ನಾಮ ದಶಮೋಧ್ಯಾಯಃ ||೧೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  41
ಯದ್ಯದ್ವಿಭೂತಿಮತ್ಸತ್ತ್ವಂ ಶ್ರೀಮದೂರ್ಜಿತಮೇವ ವಾ|
ತತ್ತದೇವಾವಗಚ್ಛ ತ್ವಂ ಮಮ ತೇಜೋಂ$ಶಸಂಭವಮ್ ||
ಯಾವು-ಯಾವುದು ಐಶ್ವರ್ಯಯುಕ್ತ, ಕಾಂತಿಯುಕ್ತ ಮತ್ತು ಶಕ್ತಿಯುಕ್ತ ವಸ್ತುಗಳಿವೆಯೋ ಅವನ್ನು ನೀನು ನನ್ನ ತೇಜಸ್ಸಿನ ಅಂಶದ ಅಭಿವ್ಯಕ್ತಿಯೆಂದೇ ತಿಳಿ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  40
ನಾಂತೋ$ಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರಂತಪ |
ಏಷ ತೂದ್ದೇಶತಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ ||
ಎಲೈ ಪರಂತಪನೇ ! ನನ್ನ ದಿವ್ಯ ವಿಭೂತಿಗಳಿಗೆ ಕೊನೆಯೇ ಇಲ್ಲ. ನನ್ನ ವಿಭೂತಿಗಳ ವಿಸ್ತಾರವಾದರೋ ಸ್ವಲ್ಪದರಲ್ಲಿ ಹೇಳಿದ್ದೇನೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  39
ಯಚ್ಚಾಪಿ ಸರ್ವ ಭೂತಾನಾಂ ಬೀಜಂ ತದಹಮರ್ಜುನ |
ನಾ ತದಸ್ತಿ ವಿನಾ ಯತ್ಸ್ಯನ್ಮಯಾ ಭೂತಂ ಚರಾಚರಮ್ ||
ಎಲೈ ಅರ್ಜುನಾ ! ಎಲ್ಲ ಭೂತಗಳ ಉತ್ಪತ್ತಿಯ ಕಾರಣವೂ ನಾನೇ ಆಗಿದ್ದೇನೆ. ಏಕೆಂದರೆ ನನ್ನಿಂದ ರಹಿತವಾದ ಚರಾಚರ ಪ್ರಾಣಿ ಯಾವುದೂ ಇಲ್ಲ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  38
ದಂಡೋ ದಮಯತಮಸ್ಮಿ ನೀತಿರಸ್ಮಿ ಜಿಗೀಷತಾಮ್ |
ಮೌನಂ ಚೈವಾಸ್ಮಿ ಗುಹ್ಯಾನಾಂ ಜ್ಞಾನಂ ಜ್ಞಾನವತಾಮಹಮ ||
ದಂಡಿಸುವವರ ದಂಡ ಅಂದರೆ ದಮನ ಮಾಡುವ ಶಕ್ತಿಯು ನಾನೇ. ವಿಜಯದ ಇಚ್ಚೆಯುಳ್ಳವರ ನೀತಿಯು, ಗುಪ್ತವಾಗಿಡಲು ಯೋಗ್ಯವಾದ ಭಾವಗಳ ರಕ್ಷಕ ಮೌನ ಮತ್ತು ಜ್ಞಾನವಂತರ ತತ್ತ್ವಜ್ಞಾನವು ನಾನೇ ಆಗಿದ್ದೇನೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  37
ವೃಷ್ಣೀನಾಂ ವಾಸುದೇವೋsಸ್ಮಿ ಪಾಂಡವಾನಾಂ ಧನಂಜಯಃ |
ಮುನೀನಾಮಪ್ಯಹಂ ವ್ಯಾಸಃ ಕವೀನಾಮುಶನಾ ಕವಿಃ ||
ಯಾದವ ವಂಶಜರಲ್ಲಿ ವಾಸುದೇವ ಅರ್ಥಾತ್ ಸ್ವತಃ ನಾನು ನಿನ್ನ ಸ್ನೇಹಿತ, ಪಾಂಡವರಲ್ಲಿ ಧನಂಜಯ ಅರ್ಥಾತ್ ನೀನು, ಮುನಿಗಳಲ್ಲಿ ವೇದವ್ಯಾಸರೂ ಮತ್ತು ಕವಿಗಳಲ್ಲಿ ಶುಕ್ರಾಚಾರ್ಯರೂ ಸಹ ನಾನೇ ಆಗಿದ್ದೇನೆ ||೩೭||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  36
ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್ |
ಜಯೋsಸ್ಮಿ ವ್ಯವಸಾಯೋsಸ್ಮಿ ಸತ್ತ್ವಂ ಸತ್ತ್ವತಾಮಹಮ್ ||
ನಾನು ಮೋಸಗೊಳಿಸುವವರಲ್ಲಿ ದ್ಯೂತವೂ, ಪ್ರಭಾವಶಾಲೀ ತೇಜಸ್ವಿಗಳ ತೇಜಸ್ಸು, ಜಯಶಾಲಿಗಳ ವಿಜಯವೂ, ನಿಶ್ಚಯಿಸುವವರ ನಿಶ್ಚಯವೂ ಮತ್ತು ಸಾತ್ತ್ವಿಕರಲ್ಲಿನ ಸಾತ್ತ್ವಿಕಭಾವವೂ(ಸತ್ತ್ವಗುಣ) ಆಗಿದ್ದೇನೆ. ||೩೬||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  35
ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್ |
ಜಯೋsಸ್ಮಿ ವ್ಯವಸಾಯೋsಸ್ಮಿ
ಸತ್ತ್ವಂ ಸತ್ತ್ವತಾಮಹಮ್ ||
ನಾನು ಮೋಸಗೊಳಿಸುವವರಲ್ಲಿ ದ್ಯೂತವೂ, ಪ್ರಭಾವಶಾಲೀ ತೇಜಸ್ವಿಗಳ ತೇಜಸ್ಸು, ಜಯಶಾಲಿಗಳ ವಿಜಯವೂ, ನಿಶ್ಚಯಿಸುವವರ ನಿಶ್ಚಯವೂ ಮತ್ತು ಸಾತ್ತ್ವಿಕರಲ್ಲಿನ ಸಾತ್ತ್ವಿಕಭಾವವೂ(ಸತ್ತ್ವಗುಣ) ಆಗಿದ್ದೇನೆ.||೩೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  34
ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರೀ ಛಂದಸಾಮಹಮ್ |
ಮಾಸಾನಾಂ ಮಾರ್ಗಶೀರ್ಷೋsಹಮ್ ಋತೂನಾಂ ಕುಸುಮಾಕರಃ ||
ಹಾಗೂ ನಾನು ಗಾಯನ ಮಾಡಲು ಯೋಗ್ಯ ಶ್ರುತಿಗಳಲ್ಲಿ ಬೃಹತ್ಸಾಮ, ಛಂದಸ್ಸುಗಳ ಗಾಯತ್ರೀ ಛಂದಸ್ಸು, ತಿಂಗಳುಗಳಲ್ಲಿ ಮಾರ್ಗಶೀರ್ಷ ತಿಂಗಳೂ ಮತ್ತು ಋತುಗಳಲ್ಲಿ ವಸಂತಋತು ಆಗಿರುತ್ತೇನೆ||೩೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  33
ಅಕ್ಷರಾಣಾಮಕಾರೋsಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ |
ಅಹಮೇವಾಕ್ಷಯಃ ಕಾಲೋ ಧಾತಾಹಂ ವಿಶ್ವತೋಮುಖಃ ||
ನಾನು ಅಕ್ಷರಗಳಲ್ಲಿ ಅಕಾರ, ಸಮಾಸಗಳಲ್ಲಿ ದ್ವಂದ್ವ ಸಮಾಸವೂ ಆಗಿದ್ದೇನೆ. ಅಕ್ಷಯವಾದ ಕಾಲ ಅರ್ಥಾತ್ ಮಹಾಕಾಲನೂ, ಸರ್ವವ್ಯಾಪಿ - ವಿರಾಟ್ ಸ್ವರೂಪಿಯೂ, ಎಲ್ಲರ ಪಾಲನೆ - ಪೋಷಣೆ ಮಾಡುವವನೂ ನಾನೇ ಆಗಿದ್ದೇನೆ. ||೩೩||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  32
ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಮ್ |
ಝಷಾಣಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ |
ನಾನು ಪವಿತ್ರಗೊಳಿಸುವವರಲ್ಲಿ ವಾಯು, ಶಸ್ತ್ರಧಾರಿಗಳಲ್ಲಿ ರಾಮ, ಮೀನು ಮುಂತಾದ ಜಲಚರಗಳಲ್ಲಿ ಮೊಸಳೆ ಮತ್ತು ನದಿಗಳಲ್ಲಿ ಶ್ರೀ ಭಾಗೀರಥಿ ಗಂಗೆಯಾಗಿದ್ದೇನೆ||೩೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  31
ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಮ್ |
ಝಷಾಣಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ |
ನಾನು ಪವಿತ್ರಗೊಳಿಸುವವರಲ್ಲಿ ವಾಯು, ಶಸ್ತ್ರಧಾರಿಗಳಲ್ಲಿ ರಾಮ, ಮೀನು ಮುಂತಾದ ಜಲಚರಗಳಲ್ಲಿ ಮೊಸಳೆ ಮತ್ತು ನದಿಗಳಲ್ಲಿ ಶ್ರೀ ಭಾಗೀರಥಿ ಗಂಗೆಯಾಗಿದ್ದೇನೆ||೩೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  30
ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಮ್ |
ಮೃಗಾಣಾಂ ಚ ಮೃಗೇಂದ್ರೋsಹಂ ವೈನತೇಯಶ್ಚ ಪಕ್ಷಿಣಾಮ್ ||
ನಾನು ದೈತ್ಯರಲ್ಲಿ ಪ್ರಹ್ಲಾದ, ಗಣನೆ ಮಾಡುವುದರಲ್ಲಿ ಸಮಯವೂ, ಮೃಗಗಳಲ್ಲಿ ಮೃಗರಾಜ ಸಿಂಹವೂ ಮತ್ತು ಪಕ್ಷಿಗಳಲ್ಲಿ ಗರುಡನಾಗಿದ್ದೇನೆ||೩೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  29
ಅನಂತಶ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್ |
ಪಿತೃಣಾಮರ್ಯಮಾ ಚಾಸ್ಮಿ ಯಮಃ ಸಂಯಮತಾಮಹಮ್ ||
ನಾನು ನಾಗಗಳಲ್ಲಿ ಶೇಷನಾಗವೂ, ಜಲಚರಗಳಲ್ಲಿ ಅವುಗಳ ಅಧಿಪತಿಯಾದ ವರುಣದೇವನೂ, ಪಿತೃಗಳಲ್ಲಿ ಅರ್ಯಮಾ ಎಂಬ ಪಿತೃವೂ ಮತ್ತು ದಂಡಾಧಿಪತಿಗಳಲ್ಲಿ ಯಮರಾಜನೂ ಆಗಿದ್ದೇನೆ||೨೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  28
ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್ |
ಪ್ರಜನಶ್ಚಾಸ್ಮಿ ಕಂದರ್ಪಃ ಸರ್ಪಾಣಾಮಸ್ಮಿ ವಾಸುಕಿಃ ||
ನಾನು ಆಯುಧಗಳಲ್ಲಿ ವಜ್ರಾಯುಧ, ಗೋವುಗಳಲ್ಲಿ ಕಾಮಧೇನು, ಶಾಸ್ತ್ರೋಕ ರೀತಿಯಿಂದ ಸಂತಾನೋತ್ಪತ್ತಿಯಲ್ಲಿ ಕಾಮದೇವನೂ ಮತ್ತು ಸರ್ಪಗಳಲ್ಲಿ ಸರ್ಪರಾಜನಾದ ವಾಸುಕಿ ಆಗಿದ್ದೇನೆ ||೨೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  27
ಉಚ್ಛೈಃಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಮ್ |
ಐರಾವತಂ ಗಜೇಂದ್ರಾಣಾಂ ನರಾಣಾಂಚ ನರಾಧಿಪಮ್ ||
ಕುದುರೆಗಳಲ್ಲಿ ಅಮೃತದೊಡನೆ ಉತ್ಪತ್ತಿಯಾದ ಉಚ್ಛೈಃಶ್ರವ ಎಂಬ ಕುದುರೆಯೂ, ಉತ್ತಮವಾದ ಆನೆಗಳಲ್ಲಿ ಐರಾವತವೆಂಬ ಆನೆ ಹಾಗೂ ಮನುಷ್ಯರಲ್ಲಿ ರಾಜನೆಂದೂ ನನ್ನನ್ನು ತಿಳಿದುಕೋ ||೨೭||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  26
ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ |
ಗಂಧರ್ವಾಣಾಂ ಚಿತ್ರರಥಃ ಸಿದ್ಧಾನಾಂ ಕಪಿಲೋ ಮುನಿಃ||
ವೃಕ್ಷಗಳಲ್ಲೆಲ್ಲಾ ಅರಳೀಮರ ಮತ್ತು ದೇವಋಷಿಗಳಲ್ಲಿ ನಾರದಮುನಿ, ಗಂಧರ್ವರಲ್ಲಿ ಚಿತ್ರರಥ ಮತ್ತು ಸಿದ್ಧರಲ್ಲಿ ಕಪಿಲ ಮುನಿ ನಾನಾಗಿದ್ದೇನೆ ||೨೬||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  25
ಮಹರ್ಷೀಣಾಂ ಭೃಗುರಹಂ ಗಿರಾಮಸ್ಮ್ಯೇಕಮಕ್ಷರಮ್|
ಯಜ್ಞಾನಾಂ ಜಪಯಜ್ಞೋsಸ್ಮಿ ಸ್ಥಾವರಾಣಾಂ ಹಿಮಾಲಯಃ ||
ನಾನು ಮಹರ್ಷಿಗಳಲ್ಲಿ ಭೃಗು, ಶಬ್ದಗಳಲ್ಲಿ ಏಕಾಕ್ಷರ ಅರ್ಥಾತ್ ಓಂಕಾರವಾಗಿದ್ದೇನೆ. ಎಲ್ಲಾ ಪ್ರಕಾರದ ಯಜ್ಞಗಳಲ್ಲಿ ಜಪಯಜ್ಞ ಮತ್ತು ಸ್ಥಿರವಾದವುಗಳಲ್ಲಿ ಹಿಮಾಲಯ ಪರ್ವತ ನಾನಾಗಿದ್ದೇನೆ||೨೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  24
ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಮ್ |
ಸೇನಾನೀನಾಮಹಂ ಸ್ಕಂದಃ ಸರಸಾಮಸ್ಮಿ ಸಾಗರಃ ||
ಪುರೋಹಿತರಲ್ಲಿ ಪ್ರಮುಖರಾದ ಅರ್ಥಾತ್ ದೇವತೆಗಳ ಪುರೋಹಿತ ಬೃಹಸ್ಪತಿ ನಾನೆಂದು ತಿಳಿದುಕೋ ಹಾಗೂ ಎಲೈ ಪಾರ್ಥ! ನಾನು ಸೇನಾಧಿಪತಿಗಳಲ್ಲಿ ಸ್ವಾಮಿ ಕಾರ್ತಿಕ ಮತ್ತು ಜಲಾಶಯಗಳಲ್ಲಿ ಸಮುದ್ರ ಆಗಿದ್ದೇನೆ ||೨೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  23
ರುದ್ರಾಣಾಂ ಶಂಕರಶ್ಚಾಸ್ಮಿ ವಿತ್ತೇಶೋ ಯಕ್ಷರಕ್ಷಸಾಮ್ |
ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಮ್ ||
ನಾನು ಏಕಾದಶ ರುದ್ರರಲ್ಲಿ ಶಂಕರ, ಯಕ್ಷ - ರಾಕ್ಷಸರಲ್ಲಿ ಧನಾಧಿಪ ಕುಬೇರ, ಅಷ್ಟವಸುಗಳಲ್ಲಿ ಅಗ್ನಿ ಮತ್ತು ಶಿಖರಗಳುಳ್ಳ ಪರ್ವತಗಳಲ್ಲಿ ಮೇರು ಪರ್ವತ ನಾನೇ ಆಗಿದ್ದೇನೆ||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  22
ವೇದಾನಾಂ ಸಾಮವೇದೋsಸ್ಮಿ ದೇವಾನಾಮಸ್ಮಿ ವಾಸವಃ |
ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ ||
ನಾನು ವೇದಗಳಲ್ಲಿ ಸಾಮವೇದ, ದೇವತೆಗಳಲ್ಲಿ ಇಂದ್ರ ಮತ್ತು ಇಂದ್ರಿಯಗಳಲ್ಲಿ ಮನಸ್ಸು, ಪ್ರಾಣಿಗಳಲ್ಲಿ ಚೇತನ ಅರ್ಥಾತ್ ಜೀವನಶಕ್ತಿ ಆಗಿದ್ದೇನೆ||೨೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  21
ಆದಿತ್ಯಾನಾಮಹಂ ವಿಷ್ಣುಃ ಜ್ಯೋತಿಷಾಂ ರವಿರಂಶುಮಾನ್ |
ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ ||
ನಾನು ಅದಿತಿಯ ಹನ್ನೆರಡು ಮಂದಿ ಪುತ್ರರಲ್ಲಿ ವಿಷ್ಣು ಅರ್ಥಾತ್ ವಾಮನ ಅವತಾರ. ಜ್ಯೋತಿಗಳಲ್ಲಿ ಕಿರಣಗಳುಳ್ಳ ಸೂರ್ಯನಾಗಿದ್ದೇನೆ ಹಾಗೂ ನಾನು ನಲವತ್ತೊಂಬತ್ತು ವಾಯು ದೇವತೆಗಳಲ್ಲಿನ ತೇಜಸ್ಸು ಮತ್ತು ನಕ್ಷತ್ರಗಳಲ್ಲಿ ಅವುಗಳ ಅಧಿಪತಿ ಚಂದ್ರ ನಾನಾಗಿದ್ದೇನೆ|೨೧|
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  20
ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ |
ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ ||
ಎಲೈ ಅರ್ಜುನ! ನಾನು ಎಲ್ಲಾ ಪ್ರಾಣಿಗಳ ಹೃದಯಾಂತರಾಳದಲ್ಲಿರುವ ಆತ್ಮನಾಗಿದ್ದೇನೆ ಹಾಗೂ ಸಮಸ್ತ ಜೀವಿಗಳ ಆದಿ, ಮಧ್ಯ ಮತ್ತು ಅಂತ್ಯವೂ ಸಹ ಆಗಿದ್ದೇನೆ||೨೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  19
ಶ್ರೀ ಭಗವಾನುವಾಚ ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯಃ |
ಪ್ರಾಧಾನ್ಯತಃ ಕುರುಶ್ರೇಷ್ಠ ನಾಸ್ತ್ಯಂತೋ ವಿಸ್ತರಸ್ಯ ಮೇ ||
ಶ್ರೀ ಕೃಷ್ಣ ಹೇಳಿದನು - ಎಲೈ ಕುರುಶ್ರೇಷ್ಠನೇ! ಈಗ ನಾನು ನಿನಗೋಸ್ಕರ ಮುಖ್ಯವಾಗಿ ದಿವ್ಯವಾದ ನನ್ನ ವಿಭೂತಿಗಳನ್ನು ಹೇಳುವೆನು. ಏಕೆಂದರೆ ನನ್ನ ವ್ಯಾಪ್ತಿಗೆ ಅಂತ್ಯವೆಂಬುದೇ ಇಲ್ಲ ||೧೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  18
ವಿಸ್ತರೇಣಾತ್ಮನೋ ಯೋಗಂ ವಿಭೂತಿಂ ಚ ಜನಾರ್ದನ |
ಭೂಯಃ ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿ ಮೇsಮೃತಮ್||
ಓ ಜನಾರ್ದನ! ನಿನ್ನ ಯೋಗ ಶಕ್ತಿಯನ್ನು ಮತ್ತು ಪರಮೈಶ್ವರ್ಯರೂಪೀ ವಿಭೂತಿಗಳನ್ನು ಪುನಃ ಸವಿಸ್ತಾರವಾಗಿ ಹೇಳು. ಏಕೆಂದರೆ ನಿನ್ನ ಅಮೃತ ವಚನಗಳನ್ನು ಕೇಳುತ್ತಾ ನನಗೆ ತೃಪ್ತಿಯೇ ಆಗುವುದಿಲ್ಲ. ಅರ್ಥಾತ್ ಕೇಳಬೇಕೆಂಬ ಉತ್ಕಟೇಚ್ಛೆಯುಂಟಾಗುತ್ತಿದೆ.||೧೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  17
ಕಥಂ ವಿದ್ಯಾಮಹಂ ಯೋಗಿಂ ಸ್ತ್ವಾಂ ಸದಾ ಪರಿಚಿಂತಯನ್ |
ಕೇಷು ಕೇಷು ಚ ಭಾವೇಷು ಚಿಂತ್ಯೋsಸಿ ಭಗವನ್ಮಯಾ ||
ಹೇ ಯೋಗೇಶ್ವರ! ನಾನು ಯಾವ ಪ್ರಕಾರ ಯಾವಾಗಲೂ ಚಿಂತಿಸುತ್ತಾ ನಿನ್ನನ್ನು ತಿಳಿದುಕೊಳ್ಳಲಿ ಮತ್ತು ಓ ಪರಮಾತ್ಮ! ಯಾವ ಯಾವ ಭಾವಸ್ವರೂಪಗಳಲ್ಲಿ ನನ್ನಿಂದ ಚಿಂತಿಸಲು ಸಾಧ್ಯನಾಗಿರುವೆ ||೧೭||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  16
ವಕ್ತುಮರ್ಹಸ್ಯಶೇಷೇಣ ದಿವ್ಯಾ ಹ್ಯಾತ್ಮವಿಭೂತಯಃ |
ಯಾಭಿರ್ವಿಭೂತಿಭಿರ್ಲೋಕಾನಿ ಮಾಂಸ್ತ್ವಂ ವ್ಯಾಪ್ಯ ತಿಷ್ಠಸಿ ||
ಆದುದರಿಂದ, ನೀನೇ ದಿವ್ಯವಾದ ಆ ನಿನ್ನ ವಿಭೂತಿಗಳನ್ನು ನಿಶ್ಶೇಷವಾಗಿ ಹೇಳಲು ಅರ್ಹನು ಅರ್ಥಾತ್ ಸಮರ್ಥನು. ಏಕೆಂದರೆ, ಆ ನಿನ್ನ ವಿಭೂತಿಗಳ ಮೂಲಕ ಈ ಎಲ್ಲಾ ಲೋಕಗಳನ್ನೂ ವ್ಯಾಪಿಸಿಕೊಂಡಿರುವೆ ಹಾಗೂ ಪರಿಪೂರ್ಣನಾಗಿರುವೆ ||೧೬||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  15
ಸ್ವಯಮೇವಾತ್ಮನಾತ್ಮಾನಂ ವೇತ್ಥ ತ್ವಂ ಪುರುಷೋತ್ತಮ |
ಭೂತಭಾವನ ಭೂತೇಶ ದೇವ ದೇವ ಜಗತ್ಪತೇ ||
ಹೇ ಜೀವಿಗಳ ಉತ್ಪತ್ತಿ ದಾತಾ! ಹೇ ಜೀವಿಗಳ ಈಶ್ವರನೇ! ಹೇ ದೇವತೆಗಳ ದೇವಾ! ಓ ಜಗದೊಡೆಯ! ಪುರುಷೋತ್ತಮನೇ! ನೀನೇ ಸ್ವತಃ ನಿನ್ನಿಂದ ನಿನ್ನನ್ನು ತಿಳಿದಿರುವೆ||೧೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  14
ಸರ್ವಮೇತದೃತಂ ಮನ್ಯೇ ಯನ್ಮಾಂ ವದಸಿ ಕೇಶವ |
ನ ಹಿ ತೇ ಭಗವನ್ವ್ಯಕ್ತಿಂ ವಿದುರ್ದೇವಾ ನ ದಾನವಾಃ ||
ಹೇ ಕೇಶವ! ನೀನು ಹೇಳುತ್ತಿರುವುದೆಲ್ಲವನ್ನೂ ನಾನು ಸತ್ಯವೆಂದು ಭಾವಿಸುತ್ತೇನೆ. ಹೇ ಪರಮಾತ್ಮಾ! ನಿನ್ನ ಲೀಲಾಮಯ ಸ್ವರೂಪವನ್ನು ದಾನವರೂ ಮತ್ತು ದೇವತೆಗಳೂ ಸಹಿತ ಅರಿಯರು
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  12
ಅರ್ಜುನ ಉವಾಚ
ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್ |
ಪುರುಷಂ ಶಾಶ್ವತಂ ದಿವ್ಯಮ್ ಆದಿದೇವಮಜಂ ವಿಭುಮ್ ||೧೨||

ಆಹುಸ್ತ್ವಮೃಶಯಃ ಸರ್ವೇ ದೇವರ್ಷಿರ್ನಾರದಸ್ತಥಾ |
ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ||೧೩||
ಅರ್ಜುನ ಉವಾಚ - ನೀನು ಪರಬ್ರಹ್ಮ, ಪರಮಧಾಮ, ಪರಮ ಪವಿತ್ರ, ಏಕೆಂದರೆ, ನಿನ್ನನ್ನು ಎಲ್ಲಾ ಋಷಿಗಳೂ ಸನಾತನ ದಿವ್ಯ ಪುರುಷ, ದೇವತೆಗಳಿಗೂ ಸಹ ಆದಿದೇವ, ಜನ್ಮರಹಿತ, ಸರ್ವವ್ಯಾಪೀ ಎಂದು ಹೇಳುತ್ತಾರೆ : ಅಂತೆಯೇ ದೇವಋಷಿಗಳಾದ ನಾರದ, ಅಸಿತ, ದೇವಲ ಋಷಿ, ಮಹರ್ಷಿ ವ್ಯಾಸರು ಮತ್ತು ಸ್ವತಃ ನೀನೂ ಸಹ ನನಗೆ ಹೇಳುತ್ತಿರುವೆ
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  11
ತೇಷಾಮೇವಾನುಕಂಪಾರ್ಥಮ್ ಅಹಮಜ್ಞಾನಜಂ ತಮಃ |
ನಾಶಯಾಮ್ಯಾತ್ಮ ಭಾವಸ್ಥೋ ಜ್ಞಾನದೀಪೇನ ಭಾಸ್ವತಾ ||
ಅವರನ್ನು ಅನುಗ್ರಹಿಸುವುದಕ್ಕಾಗಿ ನಾನೇ ಸ್ವತಃ ಅವರ ಅಂತಃಕರಣದಲ್ಲಿ ಆತ್ಮ ಭಾವದಿಂದ ಇದ್ದುಕೊಂಡು ಅಜ್ಞಾನದಿಂದ ಉಂಟಾದ ಅಂಧಕಾರವನ್ನು ಪ್ರಕಾಶಮಯ ತತ್ತ್ವಜ್ಞಾನರೂಪೀ ದೀಪದಿಂದ ನಾಶ ಮಾಡುತ್ತೇನೆ||೧೧
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  10
ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ |
ಇತಿ ಮತ್ವಾ ಭಜಂತೇ ಮಾಂ ಬುಧಾ ಭಾವಸಮನ್ವಿತಾಃ ||
ವಾಸುದೇವನಾದ ನಾನೇ ಸಮಸ್ತ ಜಗತ್ತಿನ ಉತ್ಪತ್ತಿಗೆ ಕಾರಣನು. ನನ್ನಿಂದಲೇ ಇಡೀ ಜಗತ್ತು ವ್ಯವಹರಿಸುತ್ತದೆ ಎಂಬ ಯಥಾರ್ಥವನ್ನು ತಿಳಿದುಕೊಂಡು ಶ್ರದ್ಧಾ - ಭಕ್ತಿಗಳಿಂದ ಕೂಡಿರುವ ಬುದ್ಧಿಶಾಲೀ ಭಕ್ತರು ಪರಮೇಶ್ವರನಾದ ನನ್ನನ್ನು ನಿರಂತರ ಭಜಿಸುತ್ತಾರೆ ||೧೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  9
ತೇಷಾಮೇವಾನುಕಂಪಾರ್ಥಮ್ ಅಹಮಜ್ಞಾನಜಂ ತಮಃ |
ನಾಶಯಾಮ್ಯಾತ್ಮ ಭಾವಸ್ಥೋ ಜ್ಞಾನದೀಪೇನ ಭಾಸ್ವತಾ ||
ಅವರನ್ನು ಅನುಗ್ರಹಿಸುವುದಕ್ಕಾಗಿ ನಾನೇ ಸ್ವತಃ ಅವರ ಅಂತಃಕರಣದಲ್ಲಿ ಆತ್ಮ ಭಾವದಿಂದ ಇದ್ದುಕೊಂಡು ಅಜ್ಞಾನದಿಂದ ಉಂಟಾದ ಅಂಧಕಾರವನ್ನು ಪ್ರಕಾಶಮಯ ತತ್ತ್ವಜ್ಞಾನರೂಪೀ ದೀಪದಿಂದ ನಾಶ ಮಾಡುತ್ತೇನೆ||೧೧
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  8
ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ |
ಇತಿ ಮತ್ವಾ ಭಜಂತೇ ಮಾಂ ಬುಧಾ ಭಾವಸಮನ್ವಿತಾಃ ||
ವಾಸುದೇವನಾದ ನಾನೇ ಸಮಸ್ತ ಜಗತ್ತಿನ ಉತ್ಪತ್ತಿಗೆ ಕಾರಣನು. ನನ್ನಿಂದಲೇ ಇಡೀ ಜಗತ್ತು ವ್ಯವಹರಿಸುತ್ತದೆ ಎಂಬ ಯಥಾರ್ಥವನ್ನು ತಿಳಿದುಕೊಂಡು ಶ್ರದ್ಧಾ - ಭಕ್ತಿಗಳಿಂದ ಕೂಡಿರುವ ಬುದ್ಧಿಶಾಲೀ ಭಕ್ತರು ಪರಮೇಶ್ವರನಾದ ನನ್ನನ್ನು ನಿರಂತರ ಭಜಿಸುತ್ತಾರೆ ||೧೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  7
ಏತಾಂ ವಿಭೂತಿಂ ಯೋಗಂ ಚ ಮಮ ಯೋ ವೇತ್ತಿ ತತ್ತ್ವತಃ |
ಸೋsವಿಕಂಪೇನ ಯೋಗೇನ ಯುಜ್ಯತೇ ನಾತ್ರ ಸಂಶಯಃ ||
ಯಾರು ಈ ನನ್ನ ಪರಮೈಶ್ವರ್ಯರೂಪೀ ವಿಭೂತಿಯನ್ನು ಮತ್ತು ಯೋಗ ಶಕ್ತಿಯನ್ನು ಯಥಾರ್ಥವಾಗಿ ತಿಳಿದುಕೊಳ್ಳುತ್ತಾನೆಯೋ ಅವನು ನಿಶ್ಚಲವಾದ ಭಕ್ತಿಯೋಗದಿಂದ ಏಕೈಕಭಾವದಲ್ಲಿ ಮಗ್ನನಾಗುತ್ತಾನೆ ಇದರಲ್ಲಿ ಸಂಶಯವಿಲ್ಲ ||೭||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  6
ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ |

ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾಃ ಪ್ರಜಾ:||
ಏಳು ಮಂದಿಮಹರ್ಷಿಗಳೂ, ಇವರಿಗಿಂತಲೂ ಮೊದಲಿನವರಾದ ನಾಲ್ವರು ಸನಕಾದಿಗಳೂ ಹಾಗೂ ಸ್ವಾಯಂಭುವ ಮುಂತಾದ ಹದಿನಾಲ್ಕು ಜನ ಮನುಗಳು ನನ್ನ ಭಾವವುಳ್ಳವರಾಗಿ ಇವರೆಲ್ಲಾ ನನ್ನ ಸಂಕಲ್ಪದಿಂದಲೇ ಉತ್ಪನ್ನರಾಗಿದ್ದಾರೆ; ಜಗತ್ತಿನ ಈ ಸಂಪೂರ್ಣ ಪ್ರಜೆಗಳೆಲ್ಲಾ ಇವರಿಂದಲೇ ವೃದ್ಧಿಯಾದವರು||೬||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  5
ಅಹಿಂಸಾ ಸಮತಾ ತುಷ್ಟಿಃ ತಪೋ ದಾನಂ ಯಶೋsಯಶಃ |
ಭವಂತಿ ಭಾವಾಭೂತಾನಾಂ ಮತ್ತ ಏವ ಪೃಥಗ್ವಿಧಾಃ ||
ಅಹಿಂಸೆ, ಸಮಾನತೆ, ತೃಪ್ತಿ, ತಪಸ್ಸು, ದಾನ, ಕೀರ್ತಿ, ಅಪಕೀರ್ತಿ ಹೀಗೆ ಪ್ರಾಣಿಗಳ ನಾನಾ ಪ್ರಕಾರಗಳ ಭಾವಗಳು ನನ್ನಿಂದಲೇ ಉಂಟಾಗುತ್ತದೆ ||೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  4
ಬುದ್ಧಿರ್ಜ್ಞಾನಮಸಂಮೋಹಃ ಕ್ಷಮಾ ಸತ್ಯಂ ದಮಃ ಶಮಃ |
ಸುಖಂ ದುಃಖಂ ಭವೋsಭಾವೋ ಭಯಂ ಚಾಭಯಮೇವ ಚ ||
ನಿಶ್ಚಯ ಮಾಡುವ ಬುದ್ಧಿಶಕ್ತಿ, ತತ್ತ್ವಜ್ಞಾನ, ಮೋಹಶೂನ್ಯತೆ, ಕ್ಷಮೆ, ಸತ್ಯ, ಇಂದ್ರಿಯಗಳ ನಿಗ್ರಹ, ಸುಖ, ದುಃಖ ಉತ್ಪತ್ತಿ ಮತ್ತು ಪ್ರಳಯ, ಭಯ ಮತ್ತು ಅಭಯ - ||೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  3
ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್ |
ಅಸಂಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ ||
ಯಾರು ನನ್ನನ್ನು ಅಜನ್ಮ ಅರ್ಥಾತ್ ವಾಸ್ತವವಾಗಿಯೂ ಜನ್ಮವಿಲ್ಲದವನು ಮತ್ತು ಅನಾದಿ ಹಾಗೂ ಲೋಕಗಳಿಗೆಲ್ಲಾ ಮಹಾನ್ ಈಶ್ವರ ಎಂಬ ಯಥಾರ್ಥವನ್ನು ತಿಳಿಯುತ್ತಾನೆಯೋ ಅವನು ಮಾನವರಲ್ಲಿ ಜ್ಞಾನಿಯಾದವನಾಗಿ ಎಲ್ಲಾ ಪಾಪಗಳಿಂದಲೂ ಮುಕ್ತನಾಗಿ ಹೋಗುತ್ತಾನೆ ||೩||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  2
ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ |
ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ ||
ನನ್ನ ಉತ್ಪತ್ತಿಯನ್ನು ಅರ್ಥಾತ್ ವಿಭೂತಿ ಸಹಿತ ಅದ್ಭುತ ಲೀಲೆಯಿಂದ ಪ್ರಕಟವಾಗುವುದನ್ನು ದೇವತೆಗಳೂ,ಮಹರ್ಷಿಗಳೂ ಸಹ ತಿಳಿಯರು. ಏಕೆಂದರೆ ಎಲ್ಲಾ ರೀತಿಯಿಂದಲೂ ದೇವತೆಗಳಿಗೂ ಮತ್ತುಮಹರ್ಷಿಗಳಿಗೂ ಸಹ ಮೂಲಕಾರಣನಾಗಿದ್ದೇನೆ ||೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  10
ಶ್ಲೋಕ  1
ಶ್ರೀ ಪರಮಾತ್ಮನೇ ನಮಃ ಅಥ ದಶಮೋsಧ್ಯಾಯಃ ವಿಭೂತಿಯೋಗಃ
ಶ್ರೀ ಭಗವಾನುವಾಚ
ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚಃ |
ಯತ್ತೇsಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ ||
ಶ್ರೀ ಕೃಷ್ಣ ಹೇಳಿದನು - ಎಲೈ ಮಹಾಬಾಹುವೇ ! ಪರಮ ರಹಸ್ಯ ಮತ್ತು ಪ್ರಭಾವಯುಕ್ತ ನನ್ನೀ ವಚನಗಳನ್ನು ಕೇಳು ಇದನ್ನು ನಾನು ಅತ್ಯಂತ ಪ್ರೀತಿ ಪಾತ್ರನಾದ ನಿನ್ನ ಹಿತವನ್ನು ಬಯಸಿಯೇ ಹೇಳುತ್ತಿರುವೆನು ||೧||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  34
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು|
ಮಾವೇವೈಷ್ಯಸಿ ಯುಕ್ತ್ವೈವಮ್ ಆತ್ಮಾನಂ ಮತ್ಪರಾಯಣಃ ||
ಕೇವಲ ಸಚ್ಚಿದಾನಂದ ಘನ ವಾಸುದೇವ ಪರಮಾತ್ಮನಾದ ನನ್ನಲ್ಲೇ ಅನನ್ಯ ಪ್ರೇಮದಿಂದ ನಿರಂತರ ದೃಢಮನಸ್ಸುಳ್ಳವನಾಗು, ನನ್ನನ್ನೇ ಶ್ರದ್ಧಾ - ಪ್ರೇಮಗಳಿಂದ, ನಿಷ್ಕಾಮ ಭಾವದಿಂದ, ನಾಮ, ಗುಣ, ಪ್ರಭಾವಗಳ ಶ್ರವಣ, ಕೀರ್ತನೆ, ಮನನ ಮತ್ತು ಅಧ್ಯಯನ - ಅಧ್ಯಾಪನದ ಮೂಲಕ ನಿರಂತರ ಭಜಿಸುತ್ತಿರು. ಕಾಯೇನ - ವಾಚಾ - ಮನಸಾ ಸರ್ವಸ್ವವನ್ನೂ ಅರ್ಪಿಸಿ ಅತ್ಯಂತ ಶ್ರದ್ಧಾ - ಭಕ್ತಿ - ಪ್ರೇಮದಿಂದ ವಿಹ್ವಲನಾಗಿ ನನ್ನ ಆರಾಧನೆ ಮಾಡು. ಈ ಪ್ರಕಾರ ನನಗೆ ಶರಣಾಗಿ ನೀನು ಆತ್ಮನನ್ನು ನನ್ನಲ್ಲಿ ಒಂದೇ ಭಾವದಿಂದ ನಿಯುಕ್ತಿಗೊಳಿಸಿ ನನ್ನನ್ನೇ ಸೇರಿಕೊಳ್ಳುವೆ ||೩೪|| ಓಂ ತತ್ಸದಿತಿ ಶ್ರೀ ಮದ್ಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ರಾಜವಿದ್ಯಾರಾಜಗುಹ್ಯಯೋಗೋ. ನಾಮ ನವಮೋsಧ್ಯಾಯಃ ಹರಿಃ ಓಂ ತತ್ಸತ್
ಹರಿಃ ಓಂ ತತ್ಸತ್ ಹರಿಃ ಓಂ ತತ್ಸತ್
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  33
ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ |
ಅನಿತ್ಯಮಸುಖಂ ಲೋಕಮ್ ಇಮಂ ಪ್ರಾಪ್ಯ ಭಜಸ್ವ ಮಾಮ್ ||
ಮತ್ತೆ ಏನು ಹೇಳುವುದು? ಪುಣ್ಯಶಾಲಿಗಳಾದ ಬ್ರಾಹ್ಮಣರು ಹಾಗೂ ರಾಜರ್ಷಿ ಭಕ್ತರು ಪರಮಗತಿಯನ್ನು ಪಡೆಯುತ್ತಾರೆ. ಆದುದರಿಂದ ನೀನು ಸುಖವಿಲ್ಲದ ಕ್ಷಣಭಂಗುರವಾದ ಈ ಮಾನವ ಶರೀರವನ್ನು ಪಡೆದಿರುವ ನೀನು ನಿರಂತರ ನನ್ನನ್ನೇ ಭಜಿಸು. ಅರ್ಥಾತ್ ಮನುಷ್ಯ ಶರೀರ ಬಹಳ ದುರ್ಲಭ, ಆದರೆ ನಾಶವಾಗುವಂತಹುದು ಮತ್ತು ಸುಖವೂ ಇಲ್ಲದ್ದು, ಆದುದರಿಂದ ಸಮಯವನ್ನು ನಂಬದೆ ಹಾಗೂ ಅಜ್ಞಾನದಿಂದ ಸುಖವೆಂಬಂತೆ ಭಾಸವಾಗುವ ವಿಷಯಭೋಗಗಳಲ್ಲಿ ಸಿಕ್ಕಿ ಹಾಕಿಕೊಳ್ಳದೆ ಯಾವಾಗಲೂ ನನ್ನನ್ನೇ ಧ್ಯಾನಿಸು ||೩೩||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  32
ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇsಪಿ ಸ್ಯುಃ ಪಾಪಯೋನಯಃ|
ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಃ ತೇsಪಿ ಯಾಂತಿ ಪರಾಂಗತಿಮ್ ||
ಏಕೆಂದರೆ ಎಲೈ ಅರ್ಜುನ ! ಸ್ತ್ರೀಯರು, ವೈಶ್ಯರು, ಶೂದ್ರಾದಿಗಳು ಮತ್ತು ಪಾಪ ಯೋನಿ - ಚಾಂಡಾಲಾದಿ ಯಾರೇ ಆಗಲಿ ಅವರೂ ಸಹ ನನಗೆ ಶರಣಾಗತರಾಗಿ ಪರಮ ಗತಿಯನ್ನು ಪಡೆಯುತ್ತಾರೆ ||೩೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  31
ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾಂತಿಂ ನಿಗಚ್ಛತಿ |
ಕೌಂತೇಯ ಪ್ರತಿ ಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ||
ಅವನು ಬಹು ಬೇಗ ಧರ್ಮಾತ್ಮನಾಗುತ್ತಾನೆ ಮತ್ತು ಶಾಶ್ವತವಾದ ಪರಮ ಶಾಂತಿಯನ್ನು ಪಡೆಯುತ್ತಾನೆ. ಎಲೈ ಅರ್ಜುನ ! ನನ್ನ ಭಕ್ತನು ನಾಶವಾಗುವುದಿಲ್ಲ ಎಂಬ ಧೃಢ ಸತ್ಯವನ್ನು ತಿಳಿದುಕೋ||೩೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  30
ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್ |
ಸಾಧುರೇವ ಸ ಮಂತವ್ಯಃ ಸಮ್ಯಗ್ವ್ಯವಸಿತೋ ಹಿ ಸಃ ||
ಒಂದು ವೇಳೆ ಯಾರಾದರೂ ಅತ್ಯಂತ ದುರಾಚಾರಿಯಾಗಿದ್ದರೂ ಸಹ ಅನನ್ಯ ಭಾವದಿಂದ ನನ್ನ ಭಕ್ತನಾಗಿ ನನ್ನನ್ನು ನಿರಂತರ ಭಜಿಸುತ್ತಾನೆಯೋ ಅವನು ಸಾಧುವೆಂದೇ ಪರಿಗಣಿಸಲು ಯೋಗ್ಯ. ಏಕೆಂದರೆ ಅವನು ಯಥಾರ್ಥವಾದ ನಿಶ್ಚಿತ ಬುದ್ಧಿಯುಳ್ಳವನಾಗಿರುತ್ತಾನೆ. ಅರ್ಥಾತ್ ಪರಮೇಶ್ವರನ ಭಜನೆಗೆ ಸಮಾನವಾದುದು ಬೇರೆ ಏನೂ ಇಲ್ಲ ಎಂದು ಅವನು ಧೃಢನಿಶ್ಚಯ ಮಾಡಿಕೊಂಡಿರುತ್ತಾನೆ ||೩೦||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  29
ಸಮೋsಹಂ ಸರ್ವಭೂತೇಷು ನ ಮೇ ದ್ವೇಷ್ಯೋsಸ್ತಿ ನ ಪ್ರಿಯಃ |
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ ||
ನಾನು ಸಮಸ್ತ ಪ್ರಾಣಿಗಳಲ್ಲಿಯೂ ಸಮಭಾವದಿಂದ ವ್ಯಾಪಿಸಿದ್ದೇನೆ. ನನಗೆ ಯಾರೂ ಅಪ್ರಿಯರಾದವರು ಇಲ್ಲ ಮತ್ತು ಪ್ರಿಯರಾದವರೂ ಇಲ್ಲ. ಆದರೆ ಯಾವ ಭಕ್ತರು ನನ್ನನ್ನು ಪ್ರೀತಿ - ಭಕ್ತಿಗಳಿಂದ ಭಜಿಸುತ್ತಾರೆಯೋ ಅವರು ನನ್ನಲ್ಲಿ ಮತ್ತು ನಾನೂ ಸಹ ಅವರಲ್ಲಿ ಇರುತ್ತೇನೆ ||೨೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  28
ಶುಭಾಶುಭಫಲೈರೇವಂ ಮೋಕ್ಷ್ಯಸೇ ಕರ್ಮಬಂಧನೈಃ |
ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ ||
ಹೀಗೆ ಸಮಸ್ತ ಕರ್ಮಗಳನ್ನೂ ಭಗವದರ್ಪಣೆ ಮಾಡುವಂತಹ ಸಂನ್ಯಾಸ ಯೋಗದಿಂದ ಕೂಡಿದ ಮನಸ್ಸುಳ್ಳ ನೀನು ಶುಭಾಶುಭ ಫಲಕಾರಿ ಕರ್ಮ ಬಂಧನದಿಂದ ಮುಕ್ತನಾಗಿ ಹೋಗುವೆ ಮತ್ತು ಅವುಗಳಿಂದ ಮುಕ್ತನಾಗಿ ನನ್ನನ್ನೇ ಸೇರುವೆ ||೨೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  27
ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ |
ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಮ್ ||
ಎಲೈ ಅರ್ಜುನ ! ನೀನು ಯಾವ ಕೆಲಸ ಮಾಡುತ್ತೀಯೋ, ಏನನ್ನು ತಿನ್ನುತ್ತೀಯೋ, ಯಾವುದನ್ನು ಹೋಮ ಮಾಡುತ್ತೀಯೋ, ಯಾವುದನ್ನು ದಾನ ಕೊಡುತ್ತೀಯೋ ಯಾವ ಸ್ವಧರ್ಮಾಚರಣೆ ರೂಪೀ ತಪಸ್ಸು ಮಾಡುವಿಯೋ ಅದೆಲ್ಲವನ್ನು ನನಗೆ ಅರ್ಪಿಸು ||೨೭||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  26
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ |
ತದಹಂ ಭಕ್ತ್ಯುಪಹೃತಮ್ ಅಶ್ನಾಮಿ ಪ್ರಯತಾತ್ಮನಃ ||
ತುಳಸೀ - ಬಿಲ್ವಾದಿಗಳನ್ನೂ, ಹೂವನ್ನು,ಹಣ್ಣುಗಳನ್ನೂ, ನೀರುಇತ್ಯಾದಿಗಳನ್ನೂ ಯಾವ ಭಕ್ತನು ನನಗಾಗಿ ಭಕ್ತಿಯಿಂದ ಅರ್ಪಿಸುತ್ತಾನೆಯೋ ಆ ಶುದ್ಧ ಬುದ್ಧಿಯ ನಿಷ್ಕಾಮ ಪ್ರೇಮೀ ಭಕ್ತನು ಪ್ರೀತಿಯಿಂದ ಅರ್ಪಿಸಿದ ಆ ಪತ್ರ - ಪುಷ್ಪಾದಿಗಳನ್ನು ನಾನು ಸಗುಣರೂಪದಿಂದ ಪ್ರಕಟವಾಗಿ ಪ್ರೀತಿ ಸಹಿತ ಸೇವಿಸುತ್ತೇನೆ ಅರ್ಥಾತ್ ಸ್ವೀಕರಿಸುತ್ತೇನೆ ||೨೬||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  25
ಯಾಂತಿ ದೇವವ್ರತಾ ದೇವಾನ್ ಪಿತೃನ್ಯಾಂತಿ ಪಿತೃವ್ರತಾಃ |
ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮದ್ಯಾಜಿನೋ$ಪಿ ಮಾಮ್ ||
ದೇವತೆಗಳ ಆರಾಧಕರು ದೇವತೆಗಳನ್ನು ಪಡೆಯುತ್ತಾರೆ, ಪಿತೃಗಳ ಆರಾಧಕರು ಪಿತೃಗಳನ್ನೂ, ಭೂತಗಳ ಆರಾಧಕರು ಭೂತಗಳನ್ನೂ ಪಡೆಯುತ್ತಾರೆ ಮತ್ತು ನನ್ನ ಭಕ್ತರು ನನ್ನನ್ನೇ ಪಡೆಯುತ್ತಾರೆ. ಆದುದರಿಂದ ನನ್ನ ಭಕ್ತರಿಗೆ ಪುನರ್ಜನ್ಮವಿಲ್ಲ ||೨೫||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  24
ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ |
ನ ತು ಮಾಮಭಿಜಾನಂತಿ ತತ್ತ್ವೇನಾತಶ್ಚ್ಯವಂತಿ ತೇ ||
ಏಕೆಂದರೆ ಎಲ್ಲಾ ಯಜ್ಞಗಳನ್ನೂ ಸ್ವೀಕರಿಸುವವನೂ ಮತ್ತು ಒಡೆಯನೂ ಸಹ ನಾನೇ. ಆದರೆ ಅವರು ಅಂತರ್ಯಾಮಿ ಪರಮೇಶ್ವರನಾದ ನನ್ನನ್ನು ತತ್ತ್ವಶಃ ಅರ್ಥಾತ್ ಯಥಾರ್ಥವಾಗಿ ತಿಳಿದುಕೊಳ್ಳುವುದಿಲ್ಲ, ಆದುದರಿಂದ ಅವನತಿ ಪಡೆಯುತ್ತಾರೆ ಅಂದರೆ ಪುನರ್ಜನ್ಮವುಂಟಾಗುತ್ತದೆ ||೨೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  23
ಯೇ$ಪ್ಯನ್ಯದೇವತಾ ಭಕ್ತಾ ಯಜಂತೇ ಶ್ರದ್ಧಯಾನ್ವಿತಾಃ |
ತೇ$ಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್ ||
ಎಲೈ ಅರ್ಜುನ ! ಶ್ರದ್ಧಾವಂತರಾದ ಸಕಾಮೀ ಭಕ್ತರು ಬೇರೆ ಬೇರೆ ದೇವತೆಗಳನ್ನು ಆರಾಧಿಸಿದರೂ ಅವರೂ ಸಹ ನನ್ನನ್ನೇ ಆರಾಧಿಸುತ್ತಾರೆ. ಆದರೆ ಅವರ ಆ ಆರಾಧನೆಯು ಅವಿಧಿ ಪೂರ್ವಕವಾದದ್ದು ಅರ್ಥಾತ್ ಅಜ್ಞಾನ ಪೂರ್ವಕವಾದದ್ದು ||೨೩||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  22
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ||
ಯಾರು ಅನನ್ಯಭಾವದಿಂದ ನನ್ನಲ್ಲೇ ಸ್ಥಿರಗೊಂಡ ಭಕ್ತರು ಪರಮೇಶ್ವರನಾದ ನನ್ನ ಚಿಂತನೆಯನ್ನು ಸದಾ ಮಾಡುತ್ತಾ ನಿಷ್ಕಾಮಭಾವದಿಂದ ಧ್ಯಾನಿಸುತ್ತಾರೆಯೋ ಆ ಸದಾ ಏಕೈಕಭಾವದಿಂದ ನನ್ನಲ್ಲಿಯೇ ಸ್ಥಿರಮನಸ್ಕರಾಗಿರುವವರ ಯೋಗಕ್ಷೇಮವನ್ನು ನಾನೇ ಸ್ವತಃ ವಹಿಸಿಕೊಳ್ಳುತ್ತೇನೆ ||೨೨
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  21
ತೇ ತಂ ಭುಕ್ತ್ವಾ ಸ್ವರ್ಗಲೋಕಂ ವಿಶಾಲಂ ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ |
ಏವಂ ತ್ರಯೀಧರ್ಮಮನುಪ್ರಪನ್ನಾ ಗತಾಗತಂ ಕಾಮಕಾಮಾ ಲಭಂತೇ||
ಅವರು ಆ ವಿಶಾಲವಾದ ಸ್ವರ್ಗಸುಖವನ್ನು ಅನುಭವಿಸಿ ಪುಣ್ಯಫಲಗಳೆಲ್ಲಾ ಮುಗಿದ ನಂತರ ಮೃತ್ಯುಲೋಕವನ್ನು ಪುನಃ ಪಡೆಯುತ್ತಾರೆ. ಈ ರೀತಿ ಸ್ವರ್ಗಕ್ಕೆ ಸಾಧನರೂಪಿಯಾದ ಮೂರು ವೇದಗಳಲ್ಲಿಯೂ ಹೇಳಲಾಗಿರುವ ಸಕಾಮ ಕರ್ಮಗಳನ್ನೇ ಆಶ್ರಯಿಸಿರುವವರು ಮತ್ತು ಭೋಗಾಪೇಕ್ಷೆಯುಳ್ಳವರು ಪದೇ - ಪದೇ ಜನನ - ಮರಣಗಳನ್ನೂ ಪಡೆಯುತ್ತಾರೆ. ಅರ್ಥಾತ್ ಪುಣ್ಯದ ಪ್ರಭಾವದಿಂದ ಸ್ವರ್ಗವನ್ನು ಸೇರುತ್ತಾರೆ ಮತ್ತು ಪುಣ್ಯಫಲ ಮುಗಿದ ಮೇಲೆ ಮೃತ್ಯುಲೋಕಕ್ಕೆ ಮರಳುತ್ತಾರೆ ||೨೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  20
ತ್ರೈವಿದ್ಯಾ ಮಾಂ ಸೋಮಪಾಃ.ಪೂತಪಾಪಾ |
ಯಜ್ಞೈರಿಷ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೇ |
ತೇ ಪುಣ್ಯಮಾಸಾದ್ಯ ಸುರೇಂದ್ರಲೋಕಮಶ್ನಂತಿ |
ದಿವ್ಯಾನ್ ದಿವಿ ದೇವ ಭೋಗಾನ್ ||
ಮೂರು ವೇದಗಳಲ್ಲಿಯೂ ತಿಳಿಸಿರುವ ಸಕಾಮಕರ್ಮಗಳನ್ನು ಮಾಡುವ ಮತ್ತು ಸೋಮರಸವನ್ನು ಪಾನ ಮಾಡುವ ಪಾಪರಹಿತ ಪವಿತ್ರರಾದ ಪುರುಷರು ನನ್ನನ್ನು ಯಜ್ಞಗಳ ಮೂಲಕ ಆರಾಧಿಸಿ ಸ್ವರ್ಗವನ್ನು ಬಯಸುತ್ತಾರೆ. ಅವರು ತಮ್ಮ ಪುಣ್ಯಫಲದಿಂದ ಇಂದ್ರಲೋಕವನ್ನು ಪಡೆದು ಸ್ವರ್ಗದಲ್ಲಿ ದಿವ್ಯವಾದ ದೇವತೆಗಳ ಸುಖವನ್ನು ಅನುಭವಿಸುತ್ತಾರೆ||೨೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  19
ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ |
ಅಮೃತಂ ಚೈವಮೃತ್ಯುಶ್ಚ ಸದಸಚ್ಚಾಹಮರ್ಜುನ ||
ನಾನು ಸೂರ್ಯನ ರೂಪದಿಂದ ತಪಿಸುತ್ತೇನೆ ಅರ್ಥಾತ್ ಶಾಖ ಕೊಡುತ್ತೇನೆ, ಮಳೆಯನ್ನು ಆಕರ್ಷಿಸುತ್ತೇನೆ ಮತ್ತು ಸುರಿಸುತ್ತೇನೆ. ಎಲೈ ಅರ್ಜುನ ! ನಾನು ಅಮೃತ ಮತ್ತು ಮೃತ್ಯು ಹಾಗೂ ಸತ್ ಮತ್ತು ಅಸತ್ ಎಲ್ಲವೂ ಸಹ ನಾನೇ ಆಗಿದ್ದೇನೆ ||೧೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  18
ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್ |
ಪ್ರಭವಃ ಪ್ರಲಯಃ ಸ್ಥಾನಂ ನಿಧಾನಂ ಬೀಜವವ್ಯಯಮ್ ||
ಪಡೆಯಲು ಯೋಗ್ಯವಾದ ಪವಿತ್ರಧಾಮ ಹಾಗೂ ಪಾಲನೆ - ಪೋಷಣೆ ಮಾಡುವವನೂ, ಎಲ್ಲರೊಡೆಯನೂ, ಶುಭಾಶುಭಗಳ ಪ್ರೇಕ್ಷಕನೂ, ಎಲ್ಲರ ವಾಸಸ್ಥಾನವೂ, ಶರಣಾಗಲು ಯೋಗ್ಯನೂ, ಪ್ರತ್ಯುಪಕಾರ ಬಯಸದ ಹಿತೈಷಿಯೂ, ಉತ್ಪತ್ತಿಯೂ, ಪ್ರಳಯರೂಪಿಯೂ, ಎಲ್ಲಕ್ಕೂ ಆಧಾರ, ನಿಧಾನ ಮತ್ತು ಅವಿನಾಶೀ ಕಾರಣವೂ ಸಹ ನಾನೇ ಆಗಿದ್ದೇನೆ|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  17
ಪಿತಾಮಹಸ್ಯ ಜಗತೋ ಮಾತಾ ಧಾತಾ ಪಿತಾಮಹಃ |
ವೇದ್ಯಂ ಪವಿತ್ರಮೋಂಕಾರ ಋಕ್ಸಾಮ ಯಜುರೇವ ಚ ||
ಈ ಜಗತ್ತಿಗೆಲ್ಲಾ ಧಾತಾ ಅರ್ಥಾತ್ ಪಾಲನೆ - ಪೋಷಣೆ ಮಾಡುವವನು ಮತ್ತು ಕರ್ಮಗಳ ಫಲದಾಯಕ, ತಂದೆ, ತಾಯಿ, ಪಿತಾಮಹ ಮತ್ತು ತಿಳಿಯಲು ಯೋಗ್ಯನಾದವ, ಪವಿತ್ರ, ಓಂಕಾರ, ಋಗ್ವೇದ, ಸಾಮವೇದ ಮತ್ತು ಯಜುರ್ವೇದವೂ ಸಹ ನಾನೇ ಆಗಿದ್ದೇನೆ ||೧೭||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  16
ಅಹಂ ಕ್ರತುರಹಂ ಯಜ್ಞಃ ಸ್ವಧಾಹಮಹಮೌಷಧಮ್ |
ಮಂತ್ರೋ$ಹಮಹಮೇವಾಜ್ಯಮ್ ಅಹಮಗ್ನಿರಹಂ ಹುತಮ್ ||
ಕ್ರತು ಅರ್ಥಾತ್ ಶ್ರೌತಕರ್ಮ ನಾನು, ಯಜ್ಞ ಅರ್ಥಾತ್ ಪಂಚಮಹಾಯಜ್ಞಾದಿ ಸ್ಮಾರ್ತಕರ್ಮ ನಾನು, ಸ್ವಧಾ ಅರ್ಥಾತ್ ಪಿತೃಗಳ ನಿಮಿತ್ತ ಅರ್ಪಿಸುವ ತರ್ಪಣ ನಾನೇ, ಔಷಧಿ ಅರ್ಥಾತ್ ವನಸ್ಪತಿಗಳೆಲ್ಲಾ ನಾನೇ ಮತ್ತು ಮಂತ್ರವೂ ನಾನೇ, ತುಪ್ಪವು, ಅಗ್ನಿಯು ಮತ್ತು ಹವನರೂಪೀ ಕ್ರಿಯೆಯೂ ಸಹ ನಾನೇ ಆಗಿದ್ದೇನೆ||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  15
ಜ್ಞಾನಯಜ್ಞೇನ ಚಾಪ್ಯನ್ಯೇ ಯಜಂತೋ ಮಾಮುಪಾಸತೇ ।
ಏಕತ್ವೇನ ಪೃಥಕ್ತ್ವೇನ ಬಹುಧಾ ವಿಶ್ವತೋಮುಖಮ್ ॥
ಬೇರೆ ಜ್ಞಾನಯೋಗಿಗಳು ನನ್ನನ್ನು ಅರ್ಥಾತ್ ನಿರ್ಗುಣ ನಿರಾಕಾರ ಬ್ರಹ್ಮನನ್ನು ಜ್ಞಾನಯಜ್ಞದ ಮೂಲಕ ಅಭಿನ್ನ ಭಾವದಿಂದ ಆರಾಧಿಸುತ್ತಿದ್ದರೂ ಸಹ ನನ್ನ ಉಪಾಸನೆಯನ್ನೇ ಮಾಡುತ್ತಾರೆ ಮತ್ತು ಬೇರೆಯವರು ಬಹಳ ಪ್ರಕಾರಗಳಿಂದ ವಿರಾಟ್ ಸ್ವರೂಪೀ ಪರಮೇಶ್ವರನಾದ ನನ್ನನ್ನು ಬೇರೆ ಭಾವದಿಂದ ಉಪಾಸನೆ ಮಾಡುತ್ತಾರೆ ||೧೫||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  14
ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢವ್ರತಾಃ |
ನಮಸ್ಯಂತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ ||
ದೃಢನಿಶ್ಚಯವುಳ್ಳ ಭಕ್ತರು ನಿರಂತರ ನನ್ನ ನಾಮ ಮತ್ತು ಗುಣಗಳ ಕೀರ್ತನೆ ಮಾಡುತ್ತಾ ಮತ್ತು ನನ್ನ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸುತ್ತಾ ಹಾಗೂ ನನಗೆ ಪದೇ - ಪದೇನಮಸ್ಕರಿಸುತ್ತಾ ಯಾವಾಗಲೂ ನನ್ನ ಧ್ಯಾನದಲ್ಲಿ ನಿರತರಾಗಿ ಅನನ್ಯ ಭಕ್ತಿಯಿಂದ ನನ್ನನ್ನು ಆರಾಧಿಸುತ್ತಾರೆ ||೧೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  13
ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂಪಪ್ರಕೃತಿಮಾಶ್ರಿತಾಃ |
ಭಜಂತ್ಯನನ್ಯಮನಸೋ ಜ್ಞಾತ್ವಾ ಭೂತಾದಿಮವ್ಯಯಮ್ ||
ಆದರೆ ಎಲೈ ಕುಂತೀಪುತ್ರ! ದೈವೀ ಪ್ರಕೃತಿಯ ಆಶ್ರಯ ಪಡೆದ ಮಹಾತ್ಮರು ನನ್ನನ್ನು ಎಲ್ಲಾ ಜೀವಿಗಳಿಗೂ ಸನಾತನ ಮೂಲಕಾರಣನೆಂದೂ, ನಾಶವಿಲ್ಲದ ಸ್ವರೂಪಿಯೆಂದೂ ತಿಳಿದುಕೊಂಡು ಅನನ್ಯ ಮನಸ್ಕರಾಗಿ ನಿರಂತರ ಭಜಿಸುತ್ತಾರೆ ||೧೩||(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  12
ಮೋಘಾಶಾ ಮೋಘಕರ್ಮಾಣೋ ಮೋಘಜ್ಞಾನಾ ವಿಚೇತಸಃ|
ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ ||
ವ್ಯರ್ಥವಾದ ಆಸೆ, ವ್ಯರ್ಥವಾದ ಕಾರ್ಯ ಮತ್ತು ವ್ಯರ್ಥವಾದ ಜ್ಞಾನವುಳ್ಳ ಅಜ್ಞಾನಿಗಳು ರಾಕ್ಷಸರ ಮತ್ತು ಅಸುರರಂತಹ ಮೋಹಕಾರೀ ಸ್ವಭಾವವನ್ನೇ ಆಶ್ರಯಿಸುತ್ತಾರೆ||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  11
ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್ |
ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್ ||
ಇಡೀ ಜೀವಕೋಟಿಗೆಲ್ಲಾ ಮಹೇಶ್ವರನಾದ ನನ್ನ ಪರಮ ಭಾವವನ್ನು ತಿಳಿಯದ ಮೂಢರು ಮನುಷ್ಯ ರೂಪವನ್ನು ಅರ್ಥಾತ್ ಮಾನವ ಶರೀರವನ್ನು ಧರಿಸಿರುವ ಪರಮಾತ್ಮನಾದ ನನ್ನನ್ನು ಕೀಳಾಗಿ ಕಾಣುತ್ತಾರೆ. ಅಂದರೆ ತನ್ನ ಯೋಗಮಾಯೆಯಿಂದ ಜಗತ್ತಿನ ಉದ್ಧಾರಕ್ಕಾಗಿ ಮನುಷ್ಯರೂಪದಲ್ಲಿ ನಡೆದುಕೊಳ್ಳುವ ನನ್ನನ್ನು ಸಾಧಾರಣ ಮನುಷ್ಯನೆಂದು ಭಾವಿಸುತ್ತಾರೆ. ||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  10
ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್ |
ಹೇತುನಾನೇನ ಕೌಂತೇಯ ಜಗದ್ವಿಪರಿವರ್ತತೇ ||
ಎಲೈ ಅರ್ಜುನ ! ನಿಯಾಮಕನಾದ ನನ್ನ ಅಧ್ಯಕ್ಷತೆಯ ಸ್ಫೂರ್ತಿಯಿಂದ ನನ್ನ ಈ ಪ್ರಕೃತಿ ಮಾಯೆಯು ಚರಾಚರ ಸಹಿತ ಇಡೀ ಜಗತ್ತನ್ನು ರಚಿಸುತ್ತದೆ ಮತ್ತು ಈ ಮೇಲೆ ತಿಳಿಸಿರುವ ಕಾರಣದಿಂದ ಈ ಪ್ರಪಂಚ ಆವಾಗಮನರೂಪೀ ಚಕ್ರದಲ್ಲಿ ಸುತ್ತುತ್ತಾ ಇದೆ ||೧೦||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  9
ನಚ ಮಾಂ ತಾನಿ ಕರ್ಮಾಣಿ ನಿಬಧ್ನಂತಿ ಧನಂಜಯ ।
ಉದಾಸೀನವದಾಸೀನಮ್ ಅಸಕ್ತಂ ತೇಷು ಕರ್ಮಸು ॥
ಎಲೈ ಅರ್ಜುನ ! ಆ ಕರ್ಮಗಳಲ್ಲಿ ಆಸಕ್ತಿಯಿಲ್ಲದ ಮತ್ತು ಉದಾಸೀನೋಪಾದಿಯಲ್ಲಿ ಪರಮಾತ್ಮನಾದ ನನ್ನನ್ನು ಆ ಕರ್ಮಗಳು ಬಂಧಿಸುವುದಿಲ್ಲ ||೯||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  8
ಪ್ರಕೃತಿಂಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ ।
ಭೂತಗ್ರಾಮಮಿಮಂಕೃತ್ಸ್ನಮ್ ಅವಶಂ ಪ್ರಕೃತೇರ್ವಶಾತ್ ॥೮॥
ನನ್ನ ತ್ರಿಗುಣಮಯೀ ಮಾಯೆಯನ್ನು ಅಂಗೀಕರಿಸಿ ಸ್ವಭಾವ ವಶದಿಂದ ಪರತಂತ್ರವಾಗಿರುವ ಈ ಸಮಸ್ತ ಪ್ರಾಣಿಸಮುದಾಯವನ್ನು ಮತ್ತೆ ಮತ್ತೆ ಅವುಗಳ ಕರ್ಮಗಳಿಗೆ ಅನುಸಾರವಾಗಿ ರಚಿಸುತ್ತೇನೆ ||೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  7
ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ ।
ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್ ॥
ಎಲೈ ಅರ್ಜುನ ! ಕಲ್ಪದ ಅಂತ್ಯದಲ್ಲಿ ಜೀವಿಗಳೆಲ್ಲಾ ನನ್ನ ಪ್ರಕೃತಿಯನ್ನು ಪಡೆಯುತ್ತವೆ ಅರ್ಥಾತ್ ಪ್ರಕೃತಿಯಲ್ಲಿ ಲಯವಾಗುತ್ತವೆ ಮತ್ತು ಕಲ್ಪದ ಆದಿಯಲ್ಲಿ ಅವುಗಳನ್ನು ಪುನಃ ರಚಿಸುತ್ತೇನೆ!!
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  6
ಯಥಾಕಾಶಸ್ಥಿತೋ ನಿತ್ಯಂ ವಾಯುಃ ಸರ್ವತ್ರಗೋ ಮಹಾನ್।
ತಥಾ ಸರ್ವಾಣಿ ಭೂತಾನಿ ಮತ್ಸ್ಥಾನೀತ್ಯುಪಧಾರಯ||
ಎಲ್ಲೆಡೆ ಹಿಗ್ಗಿ ತುಂಬಿರುವ ಗಾಳಿ ಎಂದೆಂದೂ ಆಗಸದಲ್ಲಿರುವಂತೆ ಜಗದ ಎಲ್ಲ ಇರುವಿಕೆಗಳೂ ನನ್ನಲ್ಲಿವೆ. ಎಂದು ಮನಗಾಣು.
ಗಾಳಿ ಎಲ್ಲಾ ಕಡೆ ಇದೆ. ಅದು ಒಳಗೂ ಇದೆ, ಹೊರಗೂ ಇದೆ. ಗಾಳಿ ನಮಗೆ ಕಾಣುವುದಿಲ್ಲ. ಗಾಳಿ ಈ ಆಕಾಶದಲ್ಲಿ ತುಂಬಿದೆ. ಹೀಗೆ ಭಗವಂತ ನಮ್ಮ ಒಳಗೂ ಹೊರಗೂ ತುಂಬಿ ನಿಂತಿದ್ದಾನೆ. ಆದರೆ ಯಾವುದರ ಲೇಪವೂ ಆತನಿಗಿಲ್ಲ. ಈ ಜಗತ್ತಿನ ಸರ್ವ ಇರುವಿಕೆಯೂ ಭಗವಂತನಲ್ಲಿದೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  5
ನ ಚ ಮತ್ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ |
ಭೂತಭೃನ್ನ ಚ ಭೂತಸ್ಥೋ ಮಮಾತ್ಮಾ ಭೂತಭಾವನಃ ||
ಮತ್ತು ಆ ಪ್ರಾಣಿಗಳೆಲ್ಲಾ ನನ್ನಲ್ಲಿ ಇರುವುದಿಲ್ಲ ಆದರೆ ನನ್ನ ಯೋಗ ಮಾಯೆ ಮತ್ತು ಈಶ್ವರೀಯ ಪ್ರಭಾವವನ್ನು ನೋಡು; ಜೀವಿಗಳ ಪಾಲನೆ - ಪೋಷಣೆ ಮಾಡುವ ಮತ್ತು ಜೀವಿಗಳನ್ನು ಉತ್ಪತ್ತಿ ಮಾಡುವ ನನ್ನ ಆತ್ಮ ವೂ ಸಹ ವಾಸ್ತವವಾಗಿಯೂ ಜೀವಿಗಳಲ್ಲಿ ಇಲ್ಲ ||೫||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  4
ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ |
ಮತ್ಸ್ಥಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ ||
ನಿರಾಕಾರ ಸಚ್ಚಿದಾನಂದ ಘನ ಪರಮಾತ್ಮನಾದ ನನ್ನಿಂದ ಈ ಇಡೀ ಜಗತ್ತು ನೀರಿನಿಂದಾದ ಹಿಮದ ಗಡ್ಡೆಯಂತೆ ಪರಿಪೂರ್ಣವಾಗಿದೆ ಮತ್ತು ಚರಾಚರಗಳೆಲ್ಲಾ ನನ್ನಲ್ಲಿ ಸಂಕಲ್ಪದ ಆಧಾರದಿಂದ ಅಂತರ್ಗತವಾಗಿವೆ. ಪ್ರಯುಕ್ತ ವಾಸ್ತವವಾಗಿ ನಾನು ಅವುಗಳಲ್ಲಿ ಇರುವುದಿಲ್ಲ ||೪||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  3
ಅಶ್ರದ್ದಧಾನಾಃ ಪುರುಷಾ ಧರ್ಮ್ಯಸಾಸ್ಯ ಪರಂತಪ |
ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರವರ್ತ್ಮನಿ ||
ಎಲೈ ಪರಂತಪ ! ಈ ತತ್ತ್ವಜ್ಞಾನರೂಪೀ ಧರ್ಮದಲ್ಲಿ ಶ್ರದ್ಧೆಯಿಲ್ಲದ ಪುರುಷರು ನನ್ನನ್ನು ಅರ್ಥಾತ್ ನನ್ನ ಸಾನಿಧ್ಯವನ್ನು ಪಡೆಯದೆ ಮೃತ್ಯುರೂಪೀ ಸಂಸಾರ ಚಕ್ರದಲ್ಲಿ ಸುತ್ತುತ್ತಿರುತ್ತಾರೆ ||೩||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  2
ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಮ್ |
ಪ್ರತ್ಯಕ್ಷಾವಗಮಂ ಧರ್ಮ್ಯಂ ಸುಸುಖಂ ಕರ್ತುಮಮ್ಯಯಮ್ ||
ಈ ವಿಜ್ಞಾನಸಹಿತವಾದ ಜ್ಞಾನವು ಎಲ್ಲ ವಿದ್ಯಗಳ ರಾಜನೂ, ಎಲ್ಲ ರಹಸ್ಯಗಳ ರಾಜನೂ, ಅತಿಪವಿತ್ರವೂ, ಅತ್ಯುತ್ತಮವೂ, ಪ್ರತ್ಯಕ್ಷ ಫಲವುಳ್ಳದ್ದೂ, ಧರ್ಮ ಯುಕ್ತವೂ, ಸಾಧನೆಗೆ ತುಂಬಾ ಸುಲಭವೂ ಮತ್ತು ಅವಿನಾಶಿಯೂ ಆಗಿದೆ. ||೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  9
ಶ್ಲೋಕ  1
ಒಂಭತ್ತನೆಯ ಅಧ್ಯಾಯ-ರಾಜವಿದ್ಯಾರಾಜಗುಹ್ಯಯೋಗ ಶ್ರೀಭಗವಾನುವಾಚ
ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ |
ಜ್ಞಾನಂ ವಿಜ್ಞಾನಸಹಿತಂ ಯಜ್ಜ್ಞಾತ್ವಾ ಮೋಕ್ಷ್ಯಸೇ$ಶುಭಾತ್ ||
ಶ್ರೀ ಭಗವಂತನು ಹೇಳಿದನು-ದೋಷ ದೃಷ್ಟಿರಹಿತ ಭಕ್ತನಾದ ನಿನಗೆ ಈ ಪರಮ ಗೋಪ್ಯವಾದ, ವಿಜ್ಞಾನ ಸಹಿತ ಜ್ಞಾನವನ್ನು ಪುನಃ ಚೆನ್ನಾಗಿ ಹೇಳುವೆನು. ಅದನ್ನು ತಿಳಿದು ನೀನು ದುಃಖರೂಪ ಸಂಸಾರದಿಂದ ಪಾರಾಗುವೆ‌. ||೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  28
ವೇದೇಷು ಯಜ್ಞೇಷು ತಪಃ ಸು ಚೈವ ದಾನೇಷು ಯತ್ಪುಣ್ಯಫಲಂ ಪ್ರದಿಷ್ಟಮ್ |
ಅತ್ಯೇತಿ ತತ್ಸರ್ವಮಿದಂ ವಿದಿತ್ವಾ ಯೋಗೀ ಪರಂ ಸ್ಥಾನಮುಪೈತಿ ಚಾದ್ಯಮ್ ||
ಯೋಗಿಯು ಈ ರಹಸ್ಯವನ್ನು ಯಥಾರ್ಥವಾಗಿ ತಿಳಿದುಕೊಂಡು ವೇದಾಧ್ಯಯನ ಮತ್ತು ಯಜ್ಞ ತಪಸ್ಸು ಮತ್ತು ದಾನಾದಿಗಳನ್ನು ಮಾಡುವುದರಿಂದ ಯಾವ ಪುಣ್ಯಫಲಗಳನ್ನು ಹೇಳಲಾಗಿದೆಯೋ ಅವುಗಳನ್ನೆಲ್ಲಾ ನಿಸ್ಸಂದೇಹವಾಗಿ ಉಲ್ಲಂಘಿಸಿಬಿಡುತ್ತಾನೆ ಮತ್ತು ಸನಾತನ ಪರಮಪದವನ್ನು ಪಡೆದುಕೊಳ್ಳುತ್ತಾನೆ ||೨೮||
ಓಂ ತತ್ಸದಿತಿ ಶ್ರೀ ಭಗವದ್ಗೀತಾಸೂಪನಿಷತ್ಸು
ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ
ಶ್ರೀ ಕೃಷ್ಣಾರ್ಜುನಸಂವಾದೇ ಅಕ್ಷರ ಬ್ರಹ್ಮಯೋಗೋನಾಮ ಅಷ್ಟಮೋsಧ್ಯಾಯಃ
ಹರಿಃ ಓಂ ತತ್ಸತ್ ಹರಿಃ ಓಂ ತತ್ಸತ್
ಹರಿಃ ಓಂ ತತ್ಸತ್ (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  27
ನೈತೇ ಸೃತೀ ಪಾರ್ಥ ಜಾನನ್ಯೋಗೀ ಮುಹ್ಯತಿ ಕಶ್ಚನ |
ತಸ್ಮಾತ್ಸರ್ವೇಷು ಕಾಲೇಷು ಯೋಗಯುಕ್ತೋ ಭವಾರ್ಜುನ ||
ಎಲೈ ಪಾರ್ಥ ಈ ರೀತಿ ಎರಡು ಮಾರ್ಗಗಳನ್ನು ಯಥಾರ್ಥವಾಗಿ ತಿಳಿಯುತ್ತಾ ಯೋಗಿಯಾದವನು ಯಾರೂ ಸಹ ಮೋಹಕ್ಕೆ ಒಳಗಾಗುವುದಿಲ್ಲ. ಈ ಕಾರಣದಿಂದ ಎಲೈ ಅರ್ಜುನ ! ನೀನು ಎಲ್ಲಾ ಕಾಲದಲ್ಲಿಯೂ ಸಮತ್ವ ಬುದ್ಧಿರೂಪೀ ಯೋಗದಿಂದ ಕೂಡಿರು, ಅರ್ಥಾತ್ ನಿರಂತರ ನನ್ನ ಸಾಕ್ಷಾತ್ಕಾರ ಪಡೆಯಲು ಸಾಧನೆ ಮಾಡು ||೨೭||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  26
ಶುಕ್ಲಕೃಷ್ಣೇ ಗತೀ ಹ್ಯೇತೇ ಜಗತಃ ಶಾಶ್ವತೇ ಮತೇ |
ಏಕಯಾ ಯಾತ್ಯನಾವೃತ್ತಿಮ್ ಅನ್ಯಯಾವರ್ತತೇ ಪುನಃ ||
ಏಕೆಂದರೆ ಜಗತ್ತಿನ ಈ ಎರಡು ಪ್ರಕಾರಗಳ ಶುಕ್ಲ ಮತ್ತು ಕೃಷ್ಣ ಅರ್ಥಾತ್ ದೇವಯಾನ ಮತ್ತು ಪಿತೃಯಾನ ಮಾರ್ಗಗಳು ಸನಾತನವೆಂದು ತಿಳಿಯಲ್ಪಟ್ಟಿವೆ. ಇವುಗಳಲ್ಲಿ ಒಂದರ ಮೂಲಕ ಹೋದವನು ಹಿಂದಿರುಗಿ ಬರದಂತಹ ಗತಿಯನ್ನು ಪಡೆಯುತ್ತಾನೆ ಮತ್ತು ಮತ್ತೊಂದರ ಮೂಲಕ ಹೋದವನು ಹಿಂದಕ್ಕೆ ಬರುತ್ತಾನೆ ಅರ್ಥಾತ್ ಜನನ - ಮರಣಗಳಿಗೆ ಒಳಗಾಗುತ್ತಾನೆ||೨೬||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  25
ಧೂಮೋ ರಾತ್ರಿಸ್ತಥಾ ಕೃಷ್ಣ: ಷಣ್ಮಾಸಾ ದಕ್ಷಿಣಾಯನಮ್|
ತತ್ರ ಚಾಂದ್ರಮಸಂ ಜ್ಯೋತಿ: ಯೋಗೀ ಪ್ರಾಪ್ಯ ನಿವರ್ತತೇ ||
ಯಾವ ಮಾರ್ಗದಲ್ಲಿ ಧೂಮಾಭಿಮಾನಿ ಅರ್ಥಾತ್ ಅಂಧಕಾರದ ಅಭಿಮಾನೀ ದೇವತೆ ಇದ್ದಾನೆಯೋ, ರಾತ್ರಿ ಅಭಿಮಾನೀ ದೇವತೆ ಇದ್ದಾನೆಯೋ, ಕೃಷ್ಣ ಪಕ್ಷದ ಅಭಿಮಾನೀ ದೇವತೆ ಇದ್ದಾನೆಯೋ ಮತ್ತು ದಕ್ಷಿಣಾಯಣದ ಆರು ಮಾಸಗಳ ಅಭಿಮಾನೀ ದೇವತೆ ಇದ್ದಾನೆಯೋ, ಆ ಮಾರ್ಗದಲ್ಲಿ ಮೃತಪಟ್ಟ ಸಕಾಮ ಕರ್ಮಯೋಗಿಯು ಮೇಲೆ ತಿಳಿಸಿದ ದೇವತೆಗಳ ಮೂಲಕ ಕ್ರಮಶಃ ಕರೆದೊಯ್ಯಲ್ಪಟ್ಟು ಚಂದ್ರನ ಜ್ಯೊತಿಯನ್ನು ಸೇರಿ ಸ್ವರ್ಗದಲ್ಲಿ ತನ್ನ ಶುಭಕರ್ಮಗಳ ಫಲವನ್ನು ಅನುಭವಿಸಿ ಹಿಂದಕ್ಕೆ ಬರುತ್ತಾನೆ ಅರ್ಥಾತ್ ಹಿಂದಕ್ಕೆ ಬರುತ್ತಾನೆ||೨೫||(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  24
ಅಗ್ನಿರ್ಜ್ಯೋತಿರಹಃ ಶುಕ್ಲಃ ಷಣ್ಮಸಾ ಉತ್ತರಾಯಣಮ್ |
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾಃ ||
ಯಾವ ಮಾರ್ಗದಲ್ಲಿ ಜ್ಯೋತಿರ್ಮಯ ಅಗ್ನಿ ಅಭಿಮಾನೀ ದೇವತೆ ಇದ್ದಾನೆಯೋ, ಹಗಲಿನ ಅಭಿಮಾನೀ ದೇವತೆ ಇದ್ದಾನೆಯೋ, ಶುಕ್ಲ ಪಕ್ಷದ ಅಭಿಮಾನೀ ದೇವತೆ ಇದ್ದಾನೆಯೋ ಮತ್ತು ಉತ್ತರಾಯಣದ ಆರು ಮಾಸಗಳ ಅಭಿಮಾನೀ ದೇವತೆ ಇದ್ದಾನೆಯೋ ಆ ಮಾರ್ಗದಲ್ಲಿ ಅಂತಿಮ ಯಾತ್ರೆ ಮಾಡಿದ ಬ್ರಹ್ಮಜ್ಞಾನೀ ಯೋಗಿಗಳು ಮೇಲೆ ತಿಳಿಸಿದ ದೇವತೆಗಳ ಮೂಲಕ ಕ್ರಮಶಃ ಕರೆದೊಯ್ಯಲ್ಪಟ್ಟು ಬ್ರಹ್ಮವನ್ನು ತಲುಪುತ್ತಾರೆ ||೨೪||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  23
ಯತ್ರ ಕಾಲೇ ತ್ವನಾವೃತ್ತಿಮ್ ಆವೃತ್ತಿಂ ಚೈವ ಯೋಗಿನಃ|
ಪ್ರಯಾತಾ ಯಾಂತಿ ತಂ ಕಾಲಂ ವಕ್ಷ್ಯಾಮಿ ಭರತರ್ಷಭ ||
ಎಲೈ ಅರ್ಜುನ ! ಯಾವ ಕಾಲದಲ್ಲಿ ಶರೀರ ತ್ಯಾಗ ಮಾಡಿಹೋದ ಯೋಗಿಗಳು ಹಿಂದಿರುಗಿ ಬಂದಿರುವಂತಹ ಸ್ಥಿತಿಯನ್ನು ಮತ್ತು ಹಿಂದಿರುಗಿ ಬರುವಂತಹ ಸ್ಥಿತಿಯನ್ನು ಪಡೆಯುತ್ತಾರೆಯೋ ಆ ಕಾಲವನ್ನು ಅರ್ಥಾತ್ ಮಾರ್ಗವನ್ನು ಹೇಳುವೆನು ||೨೩||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  22
ಪುರುಷಃ ಸ ಪರಃ ಪಾರ್ಥ ಭಕ್ತ್ಯಾ ಲಭ್ಯಸ್ತ್ವನನ್ಯಯಾ |
ಯಸ್ಯಾಂತಃಸ್ಥಾನಿ ಭೂತಾನಿ ಯೇನ ಸರ್ವಮಿದಂ ತತಮ್ ||
ಎಲೈ ಪಾರ್ಥ ! ಜೀವ ಸಮುದಾಯವೆಲ್ಲಾ ಯಾವ ಪರಮಾತ್ಮನಲ್ಲಿ ಅಂತರ್ಗತವಾಗಿದೆಯೋ ಮತ್ತು ಯಾವ ಸಚ್ಚಿದಾನಂದ ಘನ ಪರಮಾತ್ಮನಿಂದ ಈ ಜಗತ್ತೆಲ್ಲವೂ ಪರಿಪೂರ್ಣವಾಗಿದೆಯೋ ಆ ಸನಾತನ ಅವ್ಯಕ್ತ ಪರಮ ಪುರುಷನು ಅನನ್ಯ ಭಕ್ತಿಯಿಂದ ದೊರೆಯುತ್ತಾನೆ ||೨೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  21
ಅವ್ಯಕ್ತೋsಕ್ಷರ ಇತ್ಯುಕ್ತಃ ತಮಾಹುಃ ಪರಮಾಂ ಗತಿಮ್|
ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ ||
ಯಾವುದನ್ನು ಅವ್ಯಕ್ತ, ಅಕ್ಷರ ಎಂದು ಹೇಳಲಾಗಿದೆಯೋ ಆ ಅಕ್ಷರವೆಂಬ ಅವ್ಯಕ್ತ ಭಾವವನ್ನು ಪರಮ ಗತಿ ಎಂದು ಹೇಳುತ್ತಾರೆ ಹಾಗೂ ಯಾವ ಆ ಸನಾತನ ಅವ್ಯಕ್ತ ಭಾವವನ್ನು ಪಡೆದುಕೊಂಡವನು ಹಿಂದಕ್ಕೆ ಬರುವುದಿಲ್ಲವೋ ಅಂತಹ ಅದೇ ನನ್ನ ಪರಮಧಾಮ ಅರ್ಥಾತ್ ಸರ್ವೋಚ್ಚ ಸ್ಥಾನ ||೨೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  20
ಪರಸ್ತಸ್ಮಾತ್ತು ಭಾವೋsನ್ಯಃ ಅವ್ಯಕ್ತೋsವ್ಯಕ್ತಾತ್ ಸನಾತನಃ |
ಯಃ ಸ ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ ||
ಆದರೆ ಆ ಅವ್ಯಕ್ತಕ್ಕಿಂತಲೂ ಸಹ ಅತ್ಯುತ್ತಮವಾದ ಬೇರೊಂದು ಅರ್ಥಾತ್ ವಿಲಕ್ಷಣವಾದ ಯಾವ ಸನಾತನ ಅವ್ಯಕ್ತ ಭಾವವಿದೆಯೋ ಆ ಸಚ್ಚಿದಾನಂದ ಘನ ಪೂರ್ಣಬ್ರಹ್ಮ ಪರಮಾತ್ಮನು, ಎಲ್ಲಾ ಪ್ರಾಣಿಗಳು ನಾಶವಾಗಿ ಹೋದರೂ ಸಹ ಅವನು
ನಾಶವಾಗುವುದಿಲ್ಲ||೨೦||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  19
ಭೂತಗ್ರಾಮಃ ಸ ಏವಾಯಂ ಭೂತ್ವಾ ಭೂತ್ವಾ ಪ್ರಲೀಯತೇ |
ರಾತ್ರ್ಯಾಗಮೇsವಶಃ ಪಾರ್ಥ ಪ್ರಭವತ್ಯಹರಾಗಮೇ ||೧೯||
ಎಲೈ ಅರ್ಜುನ ! ಅದೇ ಈ ಪ್ರಾಣಿ ಸಮೂಹವು ಹುಟ್ಟಿ - ಹುಟ್ಟಿ ಪ್ರಕೃತಿಯ ವಶವಾಗಿ ರಾತ್ರಿಯ ಪ್ರವೇಶಕಾಲದಲ್ಲಿ ಲಯವಾಗುತ್ತದೆ ಮತ್ತು ಹಗಲಿನ ಪ್ರವೇಶಕಾಲದಲ್ಲಿ ಪುನಃ ಹುಟ್ಟುತ್ತದೆ. ಈ ಪ್ರಕಾರ ಬ್ರಹ್ಮನ ಒಂದು ನೂರು ವರ್ಷಗಳು ಪೂರ್ಣವಾದಾಗ ತನ್ನ ಲೋಕದ ಸಹಿತ ಬ್ರಹ್ಮನೂ ಸಹ ಶಾಂತನಾಗಿ ಹೋಗುತ್ತಾನೆ ||೧೯|| (ಸಂಗ್ರಹಃ ಸ್ವರ್ಣಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  18
ಅವ್ಯಕ್ತಾದ್ವ್ಯಕ್ತಯಃ ಸರ್ವಾಃ ಪ್ರಭವಂತ್ಯಹರಾಗಮೇ |
ರಾತ್ರ್ಯಾಗಮೇ ಪ್ರಲೀಯಂತೇ ತತ್ರೈವಾವ್ಯಕ್ತಸಂಜ್ಞಕೇ ||
ಸಂಪೂರ್ಣವಾಗಿ ದೃಶ್ಯ ಜಗತ್ತಿನ ಪ್ರಾಣಿಗಳೆಲ್ಲಾ ಬ್ರಹ್ಮನ ಹಗಲಿನ ಪ್ರವೇಶ ಕಾಲದಲ್ಲಿ ಅವ್ಯಕ್ತದಿಂದ ಅರ್ಥಾತ್ ಬ್ರಹ್ಮನಸೂಕ್ಷ್ಮಶರೀರದಿಂದ ಉತ್ಪತ್ತಿಯಾಗುತ್ತವೆ ಮತ್ತು ಬ್ರಹ್ಮನ ರಾತ್ರಿಯ ಪ್ರವೇಶಕಾಲದಲ್ಲಿ ಆ ಅವ್ಯಕ್ತವೆಂಬ ಬ್ರಹ್ಮನ ಸೂಕ್ಷ್ಮ ಶರೀರದಲ್ಲಿಯೇ ಲಯವಾಗುತ್ತವೆ ಅರ್ಥಾತ್ ವಿಲೀನವಾಗುತ್ತವೆ ||೧೮|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  17
ಸಹಸ್ರಯುಗಪರ್ಯಂತಮ್ ಅಹರ್ಯದ್ಬ್ರಹ್ಮಣೋ ವಿದುಃ |
ರಾತ್ರಿಂ ಯುಗಸಹಸ್ರಾಂತಾಂ ತೇsಹೋರಾತ್ರವಿದೋ ಜನಾಃ ||
ಬ್ರಹ್ಮನ ಒಂದು ಹಗಲು ಒಂದು ಸಾವಿರ ಚತುರ್ಯುಗಗಳ ಅವಧಿಯುಳ್ಳದ್ದು ಮತ್ತು ರಾತ್ರಿಯೂ ಸಹ ಒಂದು ಸಾವಿರ ಚತುರ್ಯುಗಗಳ ಅವಧಿಯುಳ್ಳದ್ದು ಎಂದು ತತ್ತ್ವಶಃ ತಿಳಿಯುತ್ತಾರೆಯೋ ಆ ಯೋಗಿಗಳು ಅಹೋರಾತ್ರಿಗಳ ಅವಧಿಯ ತತ್ತ್ವಾರ್ಥವನ್ನು ತಿಳಿದವರು ||೧೭||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  16
ಸಹಸ್ರಯುಗಪರ್ಯಂತಮ್ ಅಹರ್ಯದ್ಬ್ರಹ್ಮಣೋ ವಿದುಃ |
ರಾತ್ರಿಂ ಯುಗಸಹಸ್ರಾಂತಾಂ ತೇsಹೋರಾತ್ರವಿದೋ ಜನಾಃ ||
ಬ್ರಹ್ಮನ ಒಂದು ಹಗಲು ಒಂದು ಸಾವಿರ ಚತುರ್ಯುಗಗಳ ಅವಧಿಯುಳ್ಳದ್ದು ಮತ್ತು ರಾತ್ರಿಯೂ ಸಹ ಒಂದು ಸಾವಿರ ಚತುರ್ಯುಗಗಳ ಅವಧಿಯುಳ್ಳದ್ದು ಎಂದು ತತ್ತ್ವಶಃ ತಿಳಿಯುತ್ತಾರೆಯೋ ಆ ಯೋಗಿಗಳು ಅಹೋರಾತ್ರಿಗಳ ಅವಧಿಯ ತತ್ತ್ವಾರ್ಥವನ್ನು ತಿಳಿದವರು ||೧೭||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  15
ಆಬ್ರಹ್ಮಭುವನಾಲ್ಲೋಕಾಃ ಪುನರಾವರ್ತಿನೋsರ್ಜುನ |
ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ ||
ಎಲೈ ಅರ್ಜುನ ! ಬ್ರಹ್ಮ ಲೋಕದ ಪರ್ಯಂತ ಲೋಕಗಳೂ ಪುನರಾಗಮನ ಸ್ವಭಾವದವು. ಆದರೆ ಎಲೈ ಕುಂತೀಪುತ್ರ ! ನನ್ನ ಸಾಮೀಪ್ಯವನ್ನು ಪಡೆದರೆ ಅವನಿಗೆ ಪುನರ್ಜನ್ಮವುಂಟಾಗುವುದಿಲ್ಲ. ಏಕೆಂದರೆ, ನಾನು ಕಾಲಾತೀತನು ಮತ್ತು ಈ ಬ್ರಹ್ಮಾದಿ ಲೋಕಗಳೆಲ್ಲಾ ಕಾಲದ ಮೂಲಕ ಅವಧಿಗೆ ಒಳಪಟ್ಟಿರುವುದರಿಂದ ಅನಿತ್ಯವಾಗಿವೆ ||೧೬||(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  14
ಅನನ್ಯಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ ||
ತಸ್ಯಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ||೧೪||
ಎಲೈ ಅರ್ಜುನ ! ಯಾರು ನನ್ನಲ್ಲಿ ಅನನ್ಯಚಿತ್ತರಾಗಿ ನಿತ್ಯ - ನಿರಂತರ ನನ್ನನ್ನು ಸ್ಮರಿಸುತ್ತಾರೆಯೋ ಆ ನಿರಂತರ ನನ್ನಲ್ಲಿಯೇ ಮಗ್ನರಾಗಿರುವ ಯೋಗಿಗೆ ನಾನು ಸುಲಭನು ||೧೪|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  13
ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್ |
ಯಃ ಪ್ರಯಾತಿ ತ್ಯಜನ್ದೇಹಂ ಸ ಯಾತಿ ಪರಮಾಂ ಗತಿಮ್ ||೧೩|
ಯಾರು ಓಂ ಎಂಬ ಈ ಒಂದಕ್ಷರ ರೂಪಿಯಾದಬ್ರಹ್ಮನನ್ನು ಉಚ್ಚಾರಣೆ ಮಾಡುತ್ತಾ ಮತ್ತು ಅದರ ಅರ್ಥ ಸ್ವರೂಪಿಯಾದ ನನ್ನನ್ನು ಚಿಂತನೆ ಮಾಡುತ್ತಾ ಶರೀರವನ್ನು ತ್ಯಜಿಸಿ ಹೋಗುತ್ತಾನೆಯೋ ಅವನು ಪರಮಗತಿಯನ್ನು ಪಡೆಯುತ್ತಾನೆ||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  12
ಸರ್ವದ್ವಾರಾಣಿ ಸಂಯಮ್ಯ ಮನೋ ಹೃದಿ ನಿರುಧ್ಯ ಚ |
ಮೂರ್ಧ್ನ್ಯಾಧಾಯಾತ್ಮನಃ ಪ್ರಾಣಮಾಸ್ಥಿತೋ ಯೋಗಧಾರಣಾಮ್ ||
ಎಲ್ಲಾ ಇಂದ್ರಿಯಗಳ ದ್ವಾರಗಳನ್ನು ತಡೆದು ಅರ್ಥಾತ್ ಇಂದ್ರಿಯಗಳನ್ನು ವಿಷಯಗಳಿಂದ ದೂರಮಾಡಿ ಹಾಗೂ ಮನಸ್ಸನ್ನು ಹೃದಯದಲ್ಲಿ ಸ್ಥಿರವಾಗಿ ನಿಲ್ಲಿಸಿ ತನ್ನ ಪ್ರಾಣವಾಯುವನ್ನು ಶಿರಸ್ಸಿನಲ್ಲಿ ನೆಲೆಗೊಳಿಸಿ ಯೋಗಧಾರಣೆಯಲ್ಲಿ ನಿರತನಾಗಿ--||೧೨|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  11
ಯದಕ್ಷರಂ ವೇದವಿದೋ ವದಂತಿ ವಿಶಂತಿ ಯದ್ಯತಯೋ ವೀತರಾಗಾಃ|
ಯದಿಚ್ಛಂತೋ ಬ್ರಹ್ಮಚರ್ಯಂ- ಚರಂತಿ ತತ್ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ||
ವೇದಗಳನ್ನು ಬಲ್ಲ ವಿದ್ವಾಂಸರು ಯಾವ ಸಚ್ಚಿದಾನಂದಘನರೂಪೀ
ಪರಮಪದವನ್ನು ಅವಿನಾಶೀ ಎಂದು ಹೇಳುತ್ತಾರೆಯೋ ಮತ್ತು ಆಸಕ್ತಿಯಿಲ್ಲದ ಪ್ರಯತ್ನಶೀಲ ಮಹಾತ್ಮರು ಯಾವುದನ್ನು ಸೇರುತ್ತಾರೆಯೋ ಹಾಗೂ ಯಾವ ಪರಮಪದವನ್ನು ಬಯಸುವ ಬ್ರಹ್ಮಚಾರಿಗಳು ಬ್ರಹ್ಮಚರ್ಯವನ್ನು ಆಚರಿಸುತ್ತಾರೆಯೋ ಆ ಪರಮಪದವನ್ನು ನಿನಗೆ ಸಂಕ್ಷೇಪವಾಗಿ ಹೇಳುವೆನು||೧೧||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  10
ಪ್ರಯಾಣಕಾಲೇ ಮನಸಾಚಲೇನ ಭಕ್ತ್ಯಾಯುಕ್ತೋ ಯೋಗಬಲೇನ ಚೈವ |
ಭ್ರುವೋರ್ಮಧ್ಯೇ ಪ್ರಾಣಾಮಾವೇಶ್ಯ ಸಮ್ಯಕ್ ಸ ತಂ ಪರಂ ಪುರುಷಮುಪೈತಿ ದಿವ್ಯಮ್ ||
ಆ ಭಕ್ತಿಯುಳ್ಳ ಪುರುಷನು ಅಂತ್ಯಕಾಲದಲ್ಲಿಯೂ ಸಹ ಯೋಗಬಲದಿಂದ ಹುಬ್ಬುಗಳ ಮಧ್ಯದಲ್ಲಿ ಪ್ರಾಣವಾಯುವನ್ನು ಚೆನ್ನಾಗಿ ಸ್ಥಿರಗೊಳಿಸಿ ಮತ್ತು ದೃಢವಾದ ಮನಸ್ಸಿನಿಂದ ಸ್ಮರಿಸಿದರೆ ಆ ದಿವ್ಯ ಸ್ವರೂಪೀ ಪರಮ ಪುರುಷ ಪರಮಾತ್ಮನೇ ದೊರಕುತ್ತಾನೆ ಅರ್ಥಾತ್ ಆತನ ಸಾಕ್ಷಾತ್ಕಾವುಂಟಾಗುತ್ತದೆ ||೧೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  9
ಕವಿಂ ಪುರಾಣಮನುಶಾಸಿತಾರ-ಮಣೋರಣೀಯಾಂಸಮನುಸ್ಮ-ರೇದ್ಯಃ |
ಸರ್ವಸ್ಯ ಧಾತಾರಮಚಿಂತ್ಯರೂಪಮ್ ಆದಿತ್ಯವರ್ಣಂ ತಮಸಃ ಪರಸ್ತಾತ್||
ಸರ್ವಜ್ಞ, ಅನಾದಿ, ಎಲ್ಲದರ ನಿಯಾಮಕ ಸೂಕ್ಷ್ಮಾತಿಸೂಕ್ಷ್ಮಗಳಿಗಿಂತಲೂ ಸೂಕ್ಷ್ಮವಾದ, ಎಲ್ಲರ ಪಾಲಕ - ಪೋಷಕನಾದ ಅಚಿಂತ್ಯ ಸ್ವರೂಪೀ, ಸೂರ್ಯನಂತೆ ನಿತ್ಯ ಚೇತನ ಪ್ರಕಾಶರೂಪೀ ಮತ್ತು ಅಜ್ಞಾನದಿಂದ ಅತಿ ದೂರನಾದ ಶುದ್ಧ ಸಚ್ಚಿದಾನಂದ ಘನ ಪರಮಾತ್ಮನನ್ನು ಯಾರು ಸ್ಮರಣೆ ಮಾಡುತ್ತಾನೆಯೋ......||೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  8
ಅಭ್ಯಾಸಯೋಗಯುಕ್ತೇನ ಚೇತಸಾ ನಾನ್ಯಗಾಮಿನಾ |
ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನುಚಿಂತಯನ್ ||
ಎಲೈ ಪಾರ್ಥ ! ಒಂದು ನಿಯಮವಿದೆ - ಪರಮೇಶ್ವರನ ಧ್ಯಾನದ ಅಭ್ಯಾಸರೂಪೀ ಯೋಗದಿಂದ ಕೂಡಿ ಅಚಲವಾದ ಮನಸ್ಸಿನಿಂದ ನಿರಂತರ ಚಿಂತಿಸುತ್ತಿರುವ ಮನುಷ್ಯ ಪರಮ ದಿವ್ಯವಾದ ಪ್ರಕಾಶ ಸ್ವರೂಪೀ ಪುರುಷನನ್ನು ಅರ್ಥಾತ್ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ ||೮||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  7
ತಸ್ಮಾತ್ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ |
ಮಯ್ಯರ್ಪಿತಮನೋಬುದ್ಧಿಃ ಮಾಮೇವೈಷ್ಯಸ್ಯಸಂಶಯಮ್ ||
ಆದುದರಿಂದ ಎಲೈ ಅರ್ಜುನ ! ನೀನು ಎಲ್ಲಾ ಸಮಯದಲ್ಲಿಯೂ ನನ್ನ ಸ್ಮರಣೆ ಮಾಡು ಮತ್ತು ಯುದ್ಧವನ್ನೂ ಸಹ ಮಾಡು. ಹೀಗೆ ನನಗೆ ಅರ್ಪಿಸಲ್ಪಟ್ಟ ಮನಸ್ಸು ಬುದ್ಧಿಗಳುಳ್ಳವನಾಗಿ ಸಂದೇಹವಿಲ್ಲದೆ ನನ್ನನ್ನೇ ಹೊಂದುವೆ ||೭||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  6
ಯಂ ಯಂ ವಾಪಿ ಸ್ಮರನ್ಭಾವಂ ತ್ಯಜತ್ಯಂತೇ ಕಲೇವರಮ್ |
ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ ||
ಎಲೈ ಕುಂತೀಪುತ್ರನಾದ ಅರ್ಜುನ ! ಮನುಷ್ಯನು ಮರಣ ಸಮಯದಲ್ಲಿ ಯಾವ ಯಾವ ಭಾವವನ್ನೇ ಆದರೂ ಸಹ ಸ್ಮರಣೆ ಮಾಡುತ್ತಾ ಶರೀರವನ್ನು ತ್ಯಜಿಸುತ್ತಾನೆಯೋ ಅದನ್ನೇ ಪಡೆಯುತ್ತಾನೆ. ಏಕೆಂದರೆ ಯಿವಾಗಲೂ ಅದೇ ಭಾವನೆಯಿಂದ ಯೋಚಿಸುತ್ತಾ ಇರುತ್ತಾನೆ. ಯಾವಾಗಲೂ ಯಾವ ಭಾವನೆಯ ಚಿಂತನೆ ಮಾಡುತ್ತಾ ಇರುತ್ತಾನೆಯೌ ಅಂತ್ಯಕಾಲದಲ್ಲಿಯೂ ಸಹ ಬಹುಶಃ ಅದೇ ಸ್ಮರಣೆ ಮನಸ್ಸಿನಲ್ಲಿರುತ್ತದೆ||೬ || (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  5
ಅಂತಕಾಲೇ ಚ ಮಾಮೇವ ಸ್ಮರನ್ ಮುಕ್ತ್ವಾ ಕಲೇವರಮ್|
ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ ||
ಮತ್ತು ಯಾರು ಅಂತ್ಯಕಾಲದಲ್ಲಿ ಸಹ ನನ್ನನ್ನೇ ಸ್ಮರಿಸುತ್ತಾ ಶರೀರವನ್ನು ತ್ಯಜಿಸಿ ಹೋಗುತ್ತಾನೆಯೋ ಅವನು ನನ್ನ ಸ್ವರೂಪವನ್ನೇ ಅರ್ಥಾತ್ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ. ಇದರಲ್ಲಿ ಕಿಂಚಿತ್ತೂ ಸಂಶಯವೆಂಬುದೇ ಇಲ್ಲ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  4
ಅಧಿಭೂತಂ ಕ್ಷರೋ ಭಾವಃ ಪುರುಷಶ್ಚಾಧಿದೈವತಂ |
ಅಧಿಯಜ್ಞೋsಹಮೇವಾತ್ರ ದೇಹೇ ದೇಹಭೃತಾಂ ವರ ||
ಉತ್ಪತ್ತಿ - ವಿನಾಶ ಧರ್ಮಗಳುಳ್ಳ ಪದಾರ್ಥಗಳೆಲ್ಲಾ ಅಧಿಭೂತಗಳಾಗಿವೆ ಮತ್ತು ಹಿರಣ್ಯಮಯ ಪುರುಷನು ಅಧಿದೈವನು ಮತ್ತು ಎಲೈ ದೇಹಧಾರಿಗಳಲ್ಲಿ ಶ್ರೇಷ್ಠನಾದ ಅರ್ಜುನ ! ಈ ಶರೀರದಲ್ಲಿ ವಾಸುದೇವನಾದ ನಾನೇ ಅಂತರ್ಯಾಮಿ ರೂಪದಲ್ಲಿ ಅಧಿಯಜ್ಞನಾಗಿದ್ದೇನೆ ||೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  3
ಶ್ರೀ ಭಗವಾನುವಾಚ
ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋ$ಧ್ಯಾತ್ಮಮುಚ್ಯತೇ |
ಭೂತಭಾವೋದ್ಭವಕರೋ ವಿಸರ್ಗಃ ಕರ್ಮಸಂಜ್ಞಿತಃ ||3||
ಶ್ರೀ ಭಗವಂತನು ಹೇಳಿದನು-
ಪರಮ ಅಕ್ಷರವು ಬ್ರಹ್ಮವಾಗಿದೆ.ತನ್ನ ಸ್ವರೂಪ ಅರ್ಥಾತ್ ಜೀವಾತ್ಮನನ್ನು ಅಧ್ಯಾತ್ಮ ಎಂಬ ಹೆಸರಿನಿಂದ ಹೇಳಲಾಗುತ್ತದೆ. ಹಾಗೆಯೇ ಭೂತಗಳ ಭಾವವನ್ನು ಉಂಟುಮಾಡುವ ತ್ಯಾಗವನ್ನು ಕರ್ಮ ಎಂದು ಸಂಬೋಧಿಸಲಾಗುತ್ತದೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  2
ಅಧಿಯಜ್ಞಃ ಕಥಂ ಕೋsತ್ರ ದೇಹೇsಸ್ಮಿನ್ಮಧುಸೂದನ |
ಪ್ರಯಾಣಕಾಲೇ ಚ ಕಥಂ ಜ್ಞೇಯೋsಸಿ ನಿಯತಾತ್ಮಭಿಃ ||
ಹೇ ಮಧುಸೂದನ ! ಇಲ್ಲಿ ಅಧಿಯಜ್ಞ ಯಾವುದು ಮತ್ತು ಅದು ಈ ಶರೀರದಲ್ಲಿ ಹೇಗಿದೆ ಮತ್ತು ಕೇಂದ್ರೀಕೃತ ಮನಸ್ಸುಳ್ಳವರಿಂದ ಅಂತ್ಯಕಾಲದಲ್ಲಿ ನೀನು ಯಾವ ರೀತಿ ತಿಳಿಯಲು ಸಾಧ್ಯನಾಗುವೆ?||೨
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  8
ಶ್ಲೋಕ  1
ಅಕ್ಷರಬ್ರಹ್ಮಯೋಗ ಅರ್ಜುನ ಉವಾಚ
ಕಿಂ ತದ್ಬ್ರಹ್ಮ ಕಿಮಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ |
ಅಧಿಭೂತಂ ಚ ಕಿಂ ಪ್ರೋಕ್ತಮಧಿದೈವಂ ಕಿಮುಚ್ಯತೇ ||
ಅರ್ಜುನನು ಹೇಳಿದನು-ಎಲೈ ಪುರುಷೋತ್ತಮ ! ಆ ಬ್ರಹ್ಮ ಯಾವುದು ? ಅಧ್ಯಾತ್ಮವೆಂದರೇನು? ಕರ್ಮವೆಂದರೆ ಯಾವುದು? ಅಧಿಭೂತ ಎಂಬ ಹೆಸರಿನಿಂದ ಏನನ್ನು ಹೇಳಿದೆ? ಮತ್ತು ಅಧಿದೈವ ಎಂದು ಯಾವುದನ್ನು ಹೇಳುತ್ತಾರೆ? ||1||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  7
ಶ್ಲೋಕ  30
ಸಾಧಿಭೂತಾಧಿದೈವಂ ಮಾಂ ಸಾಧಿಯಜ್ಞಂ ಚ ಯೇ ವಿದುಃ|
ಪ್ರಯಾಣಕಾಲೇsಪಿ ಚ ಮಾಂ ತೇ ವಿದುರ್ಯುಕ್ತಚೇತಸಃ ||
ಅಧಿಭೂತ, ಅಧಿದೈವಗಳ ಸಹಿತ ಹಾಗೂ ಅಧಿಯಜ್ಞದ ಸಹಿತ ಎಲ್ಲರ ಆತ್ಮರೂಪಿಯಾದ ನನ್ನನ್ನು ಯಾರು ಅಂತ್ಯಕಾಲದಲ್ಲಿಯೂ ಸಹ ತಿಳಿದುಕೊಳ್ಳುತ್ತಾರೆಯೋ ಆ ಯುಕ್ತಚಿತ್ತ ಪುರುಷರು ನನ್ನನ್ನೇ ತಿಳಿಯುವರು ಅರ್ಥಾತ್ ಸಾಕ್ಷಾತ್ಕಾರ ಪಡೆಯುವರು ||೩೦|| ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹಾಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಜ್ಞಾನ-ವಿಜ್ಞಾನಯೋಗೋ ನಾಮ ಸಪ್ತಮೋsಧ್ಯಾಯಃ ಹರಿಃ ಓಂ ತತ್ಸತ್ ಹರಿಃ ಓಂ ತತ್ಸತ್ ಹರಿಃ ಓಂ ತತ್ಸತ್
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  7
ಶ್ಲೋಕ  29
ಜರಾಮರಣ ಮೋಕ್ಷಾಯ ಮಾಮಾಶ್ರಿತ್ಯ ಯತಂತಿ ಯೇ |
ತೇ ಬ್ರಹ್ಮ ತದ್ವಿದುಃ ಕೃತ್ಸ್ನಮ್ ಅಧ್ಯಾತ್ಮಂ ಕರ್ಮ ಚಾಖಿಲಮ್ ||
ಯಾರು ನನಗೆ ಶರಣಾಗಿ ಮುಪ್ಪು- ಸಾವುಗಳಿಂದ ಬಿಡುಗಡೆಯಾಗಲು ಯತ್ನಿಸುತ್ತಾರೆಯೋ ಅವರು ಆ ಬ್ರಹ್ಮವನ್ನು ಮತ್ತು ಸಂಪೂರ್ಣವಾಗಿ ಅಧ್ಯಾತ್ಮವನ್ನು ಹಾಗೂ ಸಂಪೂರ್ಣ ಕರ್ಮವನ್ನೂ ತಿಳಿಯುತ್ತಾರೆ||೨೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  7
ಶ್ಲೋಕ  28
ಯೇಷಾಂ ತ್ವಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಮ್|
ತೇ ದ್ವಂದ್ವಮೋಹನಿರ್ಮುಕ್ತಾ ಭಜಂತೇ ಮಾಂ ದೃಢವ್ರತಾಃ ||
ಆದರೆ ನಿಷ್ಕಾಮ ಭಾವದಿಂದ ಶ್ರೇಷ್ಠವಾದ ಕರ್ಮಗಳನ್ನು ಆಚರಿಸುವ ಯಾವ ಜನರ ಪಾಪವು ನಾಶವಾಗಿದೆಯೋ ಆ ರಾಗ - ದ್ವೇಷಾದಿ ದ್ವಂದ್ವರೂಪೀ ಮೋಹದಿಂದ ಮುಕ್ತರಾದ ಮತ್ತು ದೃಢ ನಿಶ್ಚಯದ ಪುರುಷರು ನನ್ನನ್ನು ಎಲ್ಲಾ ರೀತಿಯಿಂದಲೂ ಧ್ಯಾನಿಸುತ್ತಾರೆ ||೨೮||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  7
ಶ್ಲೋಕ  27
ಇಚ್ಛಾದ್ವೇಷಸಮುತ್ಥೇನ ದ್ವಂದ್ವಮೋಹೇನ ಭಾರತ |
ಸರ್ವಭೂತಾನಿ ಸಂಮೋಹಂ ಸರ್ಗೇ ಯಾಂತಿ ಪರಂತಪ ||
ಎಲೈ ಭರತವಂಶಜನಾದ ಅರ್ಜುನ !
ಪ್ರಪಂಚದಲ್ಲಿ ಇಚ್ಛೆ ಮತ್ತು ದ್ವೇಷಗಳಿಂದ ಉತ್ಪತ್ತಿಯಾದ ಸುಖ- ದುಃಖಾದಿ ದ್ವಂದ್ವರೂಪೀ ಮೋಹದಿಂದ ಪ್ರಾಣಿಗಳೆಲ್ಲಾ ಅತ್ಯಂತ ಅಜ್ಞಾನದಿಂದ ಭ್ರಾಂತಿಗೊಳಗಾಗಿರುತ್ತವೆ||೨೭||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  7
ಶ್ಲೋಕ  26
ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ |
ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ ||
ಎಲೈ ಅರ್ಜುನ ! ಹಿಂದೆ ಗತಿಸಿದ ಮತ್ತು ಈಗ ಇರುವ ಹಾಗೂ ಮುಂದೆ ಹುಟ್ಟಿಬರುವ ಎಲ್ಲಾ ಪ್ರಾಣಿಗಳನ್ನು ನಾನು ತಿಳಿದುಕೊಂಡಿದ್ದೇನೆ. ಆದರೆ ಯಾರೂ ಸಹ ಅಂದರೆ ಶ್ರದ್ಧಾ - ಭಕ್ತಿಗಳಿಲ್ಲದ ಯಾರೂ ನನ್ನನ್ನು ತಿಳಿದುಕೊಳ್ಳಲಾರರು||೨೬||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  7
ಶ್ಲೋಕ  25
ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವೃತಃ|
ಮೂಢೋsಯಂ ನಾಭಿಜಾನಾತಿ ಲೋಕೋ ಮಾಮಜವವ್ಯಯಮ್||
ನನ್ನ ಯೋಗ ಮಾಯೆಯಿಂದ ಆವರಿಸಲ್ಪಟ್ಟಿರುವ ನಾನು ಎಲ್ಲರಿಗೂ ಪ್ರತ್ಯಕ್ಷನಾಗುವುದಿಲ್ಲ ಆದುದರಿಂದ ಈ ಅಜ್ಞಾನೀ ಜನ ಸಮುದಾಯವು ಜನ್ಮರಹಿತವಾದ ಮತ್ತು ಅವಿನಾಶೀ ಪರಮಾತ್ಮನಾದ ನನ್ನನ್ನು ಯಥಾರ್ಥವಾಗಿ ತಿಳಿದುಕೊಳ್ಳುವುದಿಲ್ಲ ||೨೫||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  7
ಶ್ಲೋಕ  24
ಅವ್ಯಕ್ತಂ ವ್ಯಕ್ತಮಾಪನ್ನಂ ಮನ್ಯಂತೇ ಮಾಮಬುದ್ಧಯಃ|
ಪರಂ ಭಾವಮಜಾನಂತೋ ಮಮಾವ್ಯಯಮನುತ್ತಮಮ್||
ಬುದ್ಧಿಯಿಲ್ಲದವರು ನನ್ನ ಅನುತ್ತಮ ಅರ್ಥಾತ್ ಆತನಿಗಿಂತ ಉತ್ತಮರು ಮತ್ತೆ ಯಾರೂ ಇಲ್ಲದಂತಹ ಅವಿನಾಶೀ ಪರಮ ಭಾವವನ್ನು ಅರ್ಥಾತ್ ಜನ್ಮರಹಿತ, ಅವಿನಾಶಿ ಆಗಿದ್ದರೂ ಸ